ಕರಾವಳಿ

ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ : ಜೈಲು ಸೇರಿದ್ದ ಕೈದಿಗೆ ಸಹಕೈದಿಗಳಿಂದ ಹಲ್ಲೆ

Pinterest LinkedIn Tumblr

ಮಂಗಳೂರು: ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜೈಲು ಸೇರಿದ್ದ ಕೈದಿಯೋರ್ವನಿಗೆ ಇತರ ಕೈದಿಗಳು ಹಲ್ಲೆ ನಡೆಸಿದ ಘಟನೆ ಗುರುವಾರ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದ್ದು,. ಹಲ್ಲೆಗೊಳಗಾದ ಕೈದಿಯನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

ಮಂಗಳೂರು ಉತ್ತರ ಪೊಲೀಸ್ ಠಾಣೆಯ ವ್ಯಾಪ್ತಿಯ ಪೊಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಬರುದ್ದೀನ್ ಬರ್ಬುಯಿ ಎಂಬುವವನನ್ನು ಮಾರ್ಚ್ 5 ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಬುಧವಾರ ಮಂಗಳೂರು ಜೈಲಿಗೆ ಹಾಕಲಾಗಿತ್ತು.

ಗುರುವಾರ ಬೆಳಗ್ಗೆ ಏಕಾಏಕಿ ಇತರ ಕೈದಿಗಳು ಆತನ ಮೇಲೆ ಹಲ್ಲೆ ನಡೆಸಿರುವ ಕಾರಣ ಆತ ಗಂಭೀರ ಗಾಯಗೊಂಡಿದ್ದ ಎಂದು ತಿಳಿದು ಬಂದಿದೆ. ಕಾರಾಗೃಹದ ಅಧಿಕಾರಿಗಳು ತಕ್ಷಣ ಆತನನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಕ್ಲಸುದ್ದೀನ್ ಬರ್ಬುಯಿ ಜೈಲಿನಲ್ಲಿ ಕೈದಿಯಾಗಿರುವ ಮೊಹಮ್ಮದ್ ಹಫೀಝ್ ಎಂಬಾತನ ಸಂಬಂಧಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಹಿನ್ನೆಲೆಯಲ್ಲಿ ಮೊಹಮ್ಮದ್ ಹಫೀಝ್ ಸಹ ಕೈದಿಗಳಾದ ಜೀತು ಸಿಂಗ್, ಉಮರ್ ಫಾರೂಕ್ ಸೇರಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ..

ಪರಿಣಾಮ ಅಕ್ಲಸುದ್ದೀನ್ ನ ತಲೆಗೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದ್ದು, ಕಾರಾಗೃಹದ ಅಧಿಕಾರಿಗಳು ತಕ್ಷಣ ಆತನನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಖೈದಿಗಳ ನಡುವೆ ಘರ್ಷಣೆ ಸಂಭವಿಸಿದಾಗ ಭದ್ರತಾ ಸಿಬ್ಬಂದಿಗಳು ಮಧ್ಯ ಪ್ರವೇಶಿಸಿ ವಿಚಾರಣಾಧೀನ ಖೈದಿ ಅಕ್ಬರುದ್ದೀನ್ ನನ್ನು ಪಾರು ಮಾಡಿದ್ದಾರೆ. ಆದರೆ ಇದೇ ವೇಳೆ ಕೈದಿಗಳು ಪೊಲೀಸ್ ಅಧಿಕ್ಷರು ಹಾಗೂ ಭದ್ರತಾ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Comments are closed.