ಕರಾವಳಿ

ಚರ್ಮದ ರಕ್ಷಣೆಗೆ ಅನುಸರಿಸಬೇಕಾದ ಕೆಲವೊಂದು ಆಹಾರ ಕ್ರಮಗಳು

Pinterest LinkedIn Tumblr

ತ್ವಚೆಯು ಆರೋಗ್ಯಕಾರಿಯಾಗಿದ್ದರೆ ಆಗ ಸೌಂದರ್ಯವು ಎದ್ದು ಕಾಣುವುದು. ಆರೋಗ್ಯಕಾರಿ ಆಗಿರುವಂತಹ ಆಹಾರ ಸೇವನೆ ಮಾಡಿದರೆ ಅದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಚರ್ಮವು ಕಾಂತಿಯುತವಾಗಿಯು ಇರುವುದು. ಇಂದಿನ ದಿನಗಳಲ್ಲಿ ಸಮಯದ ಅಭಾವದಿಂದಾಗಿ ನಮಗೆ ತ್ವಚೆಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಲು ಸಾಧ್ಯ ಆಗುವುದಿಲ್ಲ ಮತ್ತು ತ್ವಚೆಗೆ ಯಾವ ರೀತಿಯ ಆಹಾರ ಸೇವನೆ ಮಾಡಿದರೆ ಒಳ್ಳೆಯದು ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ತಿನ್ನುವಂತಹ ಆಹಾರವು ಚರ್ಮದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದು. ಚರ್ಮದ ರಕ್ಷಣೆ ಮಾಡಲು ನೀವು ಕೆಲವೊಂದು ಆಹಾರವನ್ನು ನಿಗದಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು.

ನಿಮ್ಮ ಆಹಾರ ಕ್ರಮಕ್ಕೆ ಕೆಲವೊಂದು ಚರ್ಮ ಸ್ನೇಹಿಯಾಗಿರುವಂತಹ ಆಹಾರ ಸೇರಿಸಿಕೊಳ್ಳಬೇಕು. ಈ ಆಹಾರವು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಚರ್ಮದ ಆರೋಗ್ಯವನ್ನು ಕೂಡ ಸುಧಾರಣೆ ಮಾಡುವುದು. ನೀವು ಈ ಆಹಾರ ಸೇವನೆ ಮಾಡಿದರೆ ಆಗ ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳನ್ನು ಬಳಸಿಕೊಂಡು ಸೌಂದರ್ಯ ವೃದ್ಧಿಸಬೇಕೆಂದಿಲ್ಲ. ನೀವು ಆಹಾರ ಕ್ರಮದಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿ ಮತ್ತು ಕಾಂತಿಯುತ ಚರ್ಮಕ್ಕಾಗಿ ನೀವು ಕೆಲವು ಸರಳ ಆಹಾರಗಳನ್ನು ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಿ.

ತ್ವಚೆಯ ಆರೋಗ್ಯಕ್ಕೆ ನೀವು ಸೇವಿಸಬೇಕಾದ ಆಹಾರಗಳು

ಮೊಟ್ಟೆ
ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದ್ದು, ಇದು ಚರ್ಮದ ಬಣ್ಣವನ್ನು ವೃದ್ಧಿಸುವುದು. ಚರ್ಮದಲ್ಲಿರುವ ಕಪ್ಪು ಕಲೆ ನಿವಾರಣೆ ಮಾಡುವ ಜತೆಗೆ ಇದು ಚರ್ಮದ ಬಣ್ಣ ಉತ್ತಮ ಪಡಿಸುವುದು. ಸೂರ್ಯನ ಕಿರಣಗಳು ಮತ್ತು ಕಲ್ಮಷದಿಂದ ಚರ್ಮಕ್ಕೆ ಆಗುವಂತಹ ಹಾನಿಯನ್ನು ಇದು ತಡೆಯುವುದು. ಮೊಟ್ಟೆಯನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಿ. ಮೊಟ್ಟೆಯ ಬಿಳಿ ಲೋಳೆಯನ್ನು ನೇರವಾಗಿ ಚರ್ಮಕ್ಕೆ ಹಚ್ಚಿಕೊಳ್ಳಬಹುದು. ಇದು ಚರ್ಮದಲ್ಲಿರುವ ಅತಿಯಾದ ಎಣ್ಣೆಯಂಶ ತೆಗೆಯುವುದು ಮತ್ತು ಮೊಡವೆಗಳ ನಿವಾರಣೆ ಮಾಡುವುದು. ಎಣ್ಣೆ ಅಂಶ ಇರುವಂತಹ ಚರ್ಮಕ್ಕೆ ಇದು ತುಂಬಾ ಪರಿಣಾಮಕಾರಿಯಾಗಿದೆ. ಮನೆಯಲ್ಲೇ ತಯಾರಿಸಿದ ಮೊಟ್ಟೆಯ ಬಿಳಿ ಲೋಳೆಯ ಮಾಸ್ಕ್ ಚರ್ಮಕ್ಕೆ ಕಾಂತಿ ಹಾಗೂ ಮೃಧುತ್ವ ನೀಡುವುದು.

ಮೊಟ್ಟೆಯ ಬಿಳಿಯ ಭಾಗ + ಮೊಸರು
ಮೊಟ್ಟೆಯ ಬಿಳಿಯ ಭಾಗ ನಿಮ್ಮ ದೇಹಕ್ಕೆ ಮಾತ್ರವಲ್ಲ, ನಿಮ್ಮ ತ್ವಚೆಗೂ ಅಷ್ಟೇ ಒಳ್ಳೆಯದು. ತ್ವಚೆಗೆ ಅತ್ಯಗತ್ಯವಾದ ಜೀವಸತ್ವ ಮತ್ತು ಖನಿಜಾಂಶಗಳು ಮೊಟ್ಟೆಯಲ್ಲಿ ಸಮೃದ್ಧವಾಗಿದೆ. ಮೊಟ್ಟೆ ಹಾಗೂ ಮೊಸರಿನ ಮಿಶ್ರಣ ಒಂದು ಉತ್ತಮ ಸೌಂದರ್ಯವರ್ಧಕ. ಮೊಟ್ಟೆಯ ಬೆಳಿಯ ಭಾಗ ಮತ್ತು ಮೊಸರನ್ನು ಮಿಶ್ರಣಮಾಡಿ. ಇದನ್ನು ಪೇಸ್ಟ್ ನಂತೆ ಮಾಡಿ ಮುಖಕ್ಕೆ ಹಚ್ಚಿ 15 -20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಮುಖ ತೊಳೆದು ಮಾಯಿಶ್ಚರೈಸರ್ ಹಚ್ಚಿ.

ಕಡು ಚಾಕಲೇಟ್
ಚಾಕಲೇಟ್ ಪ್ರಿಯರಿಗೆ ಇದು ತುಂಬಾ ಒಳ್ಳೆಯ ಸುದ್ದಿಯಾಗಿದೆ. ಯಾಕೆಂದರೆ ಕಡು ಚಾಕಲೇಟ್ ಚರ್ಮದ ಆರೋಗ್ಯವನ್ನು ಸುಧಾರಣೆ ಮಾಡುವುದು. ಚಾಕಲೇಟ್ ನಲ್ಲಿರುವಂತಹ ಕೋಕಾ ಅಂಶವು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಕೋಕಾ ಹುಡಿಯಲ್ಲಿ ಉನ್ನತ ಮಟ್ಟದ ಆಯಂಟಿಆಕ್ಸಿಡೆಂಟ್ ಇದೆ. ಇದು ಚರ್ಮವನ್ನು ಫ್ರೀ ರ್ಯಾಡಿಕಲ್ ನಿಂದ ರಕ್ಷಿಸುವುದು. ವಿವಿಧ ರೀತಿಯ ಅಧ್ಯಯನಗಳ ಪ್ರಕಾರ ಕಡು ಚಾಕಲೇಟ್ ಸೇವನೆ ಮಾಡುವ ಕಾರಣ ಹೃದಯದ ಆರೋಗ್ಯವು ಸುಧಾರಣೆ ಆಗಿದೆ ಎಂದು ಕಂಡುಕೊಳ್ಳಲಾಗಿದೆ. ಈಗ ನೀವು ಇನ್ನೊಂದು ತುಂಡು ಕಡು ಚಾಕಲೆಟ್ ಸೇವನೆ ಮಾಡಬಹುದು. ಆದರೆ ಇದನ್ನು ಅತಿಯಾಗಿ ಸೇವನೆ ಮಾಡಬೇಡಿ.

ಗ್ರೀನ್ ಟೀ
ತೂಕ ಇಳಿಕೆ ಮಾಡಲು ಗ್ರೀನ್ ಟೀ ಎಷ್ಟು ಲಾಭಕಾರಿ ಎಂದು ನೀವು ಈಗಾಗಲೇ ಕೇಳಿರಬಹುದು. ಆದರೆ ಗ್ರೀನ್ ಟೀ ಯು ಚರ್ಮಕ್ಕೆ ಎಷ್ಟು ಲಾಭಕಾರಿ ಎಂದು ನಿಮಗೆ ತಿಳಿದಿದೆಯಾ? ಗ್ರೀನ್ ಟೀ ಯು ಚರ್ಮವನ್ನು ಹಾನಿಯಾಗದಂತೆ ಮತ್ತು ವಯಸ್ಸಾಗುವುದರಿಂದ ತಡೆಯುವುದು. ಇದರಲ್ಲಿ ಆಯಂಟಿ ಆಕ್ಸಿಡೆಂಟ್ ಸಮೃದ್ಧ ವಾಗಿರುವ ಕಾರಣದಿಂದಾಗಿ ಇದು ಬಿಸಿಲು ಮತ್ತು ಕಲ್ಮಶದಿಂದ ಚರ್ಮಕ್ಕೆ ರಕ್ಷಣೆ ನೀಡುವುದು. ದಿನದಲ್ಲಿ ಎರಡು ಕಪ್ ಗ್ರೀನ್ ಟೀ ಸೇವನೆ ಮಾಡಿದರೆ ಅದರಿಂದ ಚರ್ಮದ ರಕ್ಷಣೆ ಸಾಧ್ಯ. ಇನ್ನು ಗ್ರೀನ್ ಟೀ ಎಲೆಗಳನ್ನು ನುಣ್ಣಗೆ ಅರೆದುಕೊಳ್ಳಿ. ಇದಕ್ಕೆ ಒಂದು ಚಮಚದಷ್ಟು ಮಿಲ್ಕ್ ಕ್ರೀಮ್ ಅನ್ನು ಬೆರೆಸಿ, ಚಿಟಿಕೆಯಷ್ಟು ಅರಿಶಿನ ಹುಡಿ ಮತ್ತು ಕೆಲವು ಹನಿಗಳಷ್ಟು ಲಿಂಬೆ ರಸವನ್ನು ಸೇರಿಸಿ. ಮೃದುವಾದ ಮಿಶ್ರಣ ದೊರೆಯುವವರೆಗೆ ಕಲಸಿಕೊಳ್ಳಿ. ನಿಮ್ಮ ಮುಖ ಮತ್ತು ಕುತ್ತಿಗೆಗೆ ಪೇಸ್ಟ್ ಅನ್ನು ಹಚ್ಚಿ. ಇದು ಸಂಪೂರ್ಣ ಒಣಗುವವರೆಗೆ ಹಾಗೆಯೇ ಬಿಡಿ, ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ

ಟೊಮೆಟೋ
ಟೊಮೆಟೋ ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಟೊಮೆಟೋದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಇತರ ಕೆಲವು ಪ್ರಮುಖ ಪೋಷಕಾಂಶಗಳು ಕೂಡ ಇದೆ. ಟೊಮೆಟೋದಲ್ಲಿ ಇರುವಂತಹ ಲೈಕೊಪೆನೆ ಎನ್ನುವ ಆಯಂಟಿಆಕ್ಸಿಡೆಂಟ್ ತುಂಬಾ ಶಕ್ತಿಶಾಲಿಯಾಗಿದೆ. ಇದು ಇತರ
ಕೆಲವೊಂದು ಹಣ್ಣುಗಳಾಗಿರುವಂತಹ ಕಲ್ಲಂಗಡಿ, ಪೇರಳೆ, ದ್ರಾಕ್ಷಿ ಇತ್ಯಾದಿಗಳಲ್ಲಿ ಇದೆ. ತಾಜಾ ಟೊಮೆಟೋ ಪ್ಯೂರಿಯಿಂದ ಫೇಸ್ ಪ್ಯಾಕ್ ಮಾಡಿಕೊಂಡರೆ ಅದರಿಂದ ಕಪ್ಪು ಕಲೆಗಳು ನಿವಾರಣೆ ಆಗುವುದು. ಇದರಿಂದ ಟ್ಯಾನಿಂಗ್ ನಿವಾರಣೆಯಾಗಿ, ನೈಸರ್ಗಿಕ ಕಾಂತಿಯು ಚರ್ಮಕ್ಕೆ ಸಿಗುವುದು.

Comments are closed.