ರಾಷ್ಟ್ರೀಯ

ಪುಲ್ವಾಮಾದಲ್ಲಿ ನಡೆದದ್ದು ‘ದುರ್ಘಟನೆ’ ಎಂದ ಬಿಜೆಪಿ ಮುಖಂಡ

Pinterest LinkedIn Tumblr


ದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದದ್ದು ‘ದುರ್ಘಟನೆ’ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಕೇಶವ ಪ್ರಸಾದ್ ಮೌರ್ಯ ಹೇಳಿರುವ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪುಲ್ವಾಮಾ ದಾಳಿಯನ್ನು ‘ದುರ್ಘಟನೆ’ ಎಂಬ ಶಬ್ದ ಬಳಸಿ ಟ್ವೀಟ್ ಮಾಡಿದ್ದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಬಿಜೆಪಿ ತರಾಟೆಗೆ ತೆಗದುಕೊಂಡಿತ್ತು. ಕೇಂದ್ರದ ಹಲವು ಸಚಿವರು ಮತ್ತು ಬಿಜೆಪಿ ಕಾರ್ಯಕರ್ತರು ದಿಗ್ವಿಜಯ್ ಸಿಂಗ್ ವಿರುದ್ಧ ಸಾಮಾಜಿಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮೌರ್ಯ ಅವರೂ ಅಂತಹುದೇ ಹೇಳೀಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್, ಬಿಜೆಪಿ ಮುಖಂಡರು ಮತ್ತು ಕೇಂದ್ರ ಸಚಿವರಿಗೆ ಸವಾಲು ಹಾಕಿದ್ದಾರೆ.

ಪುಲ್ವಾಮಾ ದಾಳಿಯನ್ನು ‘ದುರ್ಘಟನೆ’ ಎಂದು ಕರೆದಾಗ ಮೂವರು ಕೇಂದ್ರ ಸಚಿವರು ನನ್ನನ್ನು ಪಾಕಿಸ್ತಾನದ ಬೆಂಬಲಿಗ ಎಂದು ಬಿಂಬಿಸಿದರು. ನಿಮ್ಮ ಪಕ್ಷದವರೇ ಆದ ಕೇಶವ ಪ್ರಸಾದ್ ಮೌರ್ಯ ಅವರ ಈ ಹೇಳಿಕೆಯನ್ನು ಕೇಳಿಸಿಕೊಳ್ಳಿ. ಇದಕ್ಕೆ ಪ್ರಧಾನಿ ಮೋದಿ ಮತ್ತು ಸಂಪುಟ ಸಚಿವರಿಂದ ಏನಾದರೂ ಪ್ರತಿಕ್ರಿಯೆಗಳಿವೆಯೇ?’ ಎಂದು ದಿಗ್ವಿಜಯ್ ಟ್ವೀಟ್ ಮಾಡಿದ್ದಾರೆ.

Comments are closed.