ಕರಾವಳಿ

ಅತೀ ಹೆಚ್ಚು ಟಿವಿ ನೋಡುವುದರಿಂದ ಯಾವೇಲ್ಲಾ ಆನಾರೋಗ್ಯ ಬರುವ ಸಾಧ್ಯತೆ ಹೆಚ್ಚು ಬಲ್ಲಿರಾ…?

Pinterest LinkedIn Tumblr

ನಾವು ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿದ್ದರೆ ಸ್ಮಾರ್ಟ್ ಫೋನ್ ನೋಡುತ್ತೇವೆ. ಅದು ಬಿಟ್ಟರೆ ಟಿವಿಯನ್ನು ನೋಡುವ ಅಭ್ಯಾಸ ಸರ್ವಸಾಮಾನ್ಯವಾಗಿದೆ. ಆದರೆ ಆತು ಹೆಚ್ಚು ಟಿವಿ ನೋಡುವುದರಿಂದ ಅನೇಕ ರೋಗಗಳು ಆವರಿಸುತ್ತವೆ ಎಂದು ಸಂಶೋಧನೆ ವರದಿ ಮಾಡಿದೆ ಮುಂದೆ ಓದಿ.

ನೀವು ಹೆಚ್ಚು ಹೊತ್ತು ಟಿವಿ ನೋಡುವುದರಿಂದ ಕರುಳಿನ ಕ್ಯಾನ್ಸರ್‌ ಬರುವ ಸಾಧ್ಯತೆಗಳಿವೆ. ಪ್ರತಿ ದಿನ ನಿರಂತರ 2 ಗಂಟೆಗೂ ಹೆಚ್ಚು ಕಾಲ ಟಿವಿ ಮುಂದೆ ಕೂರುವುದರಿಂದ ಕರುಳಿನ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಶೇ.70ರಷ್ಟಿರುವುದಾಗಿ ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ ಹಾಗೂ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ಸಂಶೋಧನೆಯಿಂದ ತಿಳಿದು ಬಂದಿದೆ.

ಪ್ರತಿ ದಿನ 2 ಗಂಟೆಗೂ ಹೆಚ್ಚು ಕಾಲ ಟಿವಿ ನೋಡುವುದರಿಂದ ದೊಡ್ಡಕರುಳಿನ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ ಹಾಗೂ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ಸಂಶೋಧನೆಯಿಂದ ತಿಳಿದು ಬಂದಿದೆ.

20-30 ವರ್ಷದೊಳಗಿನ ಯುವಕ-ಯುವತಿಯರಲ್ಲೇ ದೊಡ್ಡ ಕರುಳಿನ ಕ್ಯಾನ್ಸರ್‌ ಹೆಚ್ಚು ಪತ್ತೆಯಾಗಿದೆ. ಆರಂಭಿಕ ಹಂತದಲ್ಲಿ ಪತ್ತೆಯಾದರೆ ಗುಣಪಡಿಸಲು ಸಾಧ್ಯ. 50ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಡೆದ ಸಂಶೋಧನೆಯ ಬಳಿಕ ಈ ಫಲಿತಾಂಶಕ್ಕೆ ಬರಲಾಗಿದೆ. ಈ ಕುರಿತು ಮಾಸ ಪತ್ರಿಕೆಯಲ್ಲೂ ಮುದ್ರಿಸಲಾಗಿದೆ ಎಂದು ಗೊತ್ತಾಗಿದೆ.

ಅಮೆರಿಕದ 89,278 ಮಹಿಳೆಯರನ್ನು ಕ್ಯಾನ್ಸರ್‌ ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 118 ಯುವತಿಯರಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್‌ ಪತ್ತೆಯಾಗಿದೆ. ಇವರೆಲ್ಲರೂ ದಿನದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಟಿವಿ ನೋಡುತ್ತಿರುವುದು ಸಮೀಕ್ಷೆಯಲ್ಲಿ ತಿಳಿಯಲಾಗಿದೆ. ಪ್ರತಿ ದಿನ 2 ಗಂಟೆಗೂ ಅಧಿಕ ಕಾಲ ಟಿವಿಯಲ್ಲಿ ತೊಡಗುವವರಲ್ಲಿ ಕ್ಯಾನ್ಸರ್‌ ಪತ್ತೆಯ ಸಾಧ್ಯತೆ ಶೇ.70ರಷ್ಟಿರುವುದಾಗಿ ಹೇಳಲಾಗಿದೆ. ಸಂಶೋಧನೆ ವೇಳೆ ಅನೇಕರಲ್ಲಿ ಕುಟುಂಬದಲ್ಲಿ ಯಾರಲ್ಲೂ ಇಲ್ಲದಿದ್ದರೂ ಕ್ಯಾನ್ಸರ್‌ ಪತ್ತೆಯಾಗಿದೆ. 20-30 ವರ್ಷದೊಳಗಿನವರಲ್ಲಿ ಕರುಳಿನ ಕ್ಯಾನ್ಸರ್‌ ಪತ್ತೆಯಾಗುತ್ತಿದೆ. ಅಲ್ಲದೆ ಆರಂಭಿಕ ಹಂತದಲ್ಲಿ ಇವುಗಳ ಪತ್ತೆಯಿಂದ ತಡೆಗಟ್ಟಲು ಸಾಧ್ಯವಿದೆ. ಇದಕ್ಕೆ ಸ್ಪಷ್ಟ ಕಾರಣಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲಾಗುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Comments are closed.