ರಾಷ್ಟ್ರೀಯ

ಪುಲ್ವಾಮಾದಲ್ಲಿ ಹುತಾತ್ಮ ಯೋಧರ ಕುಟುಂಬಸ್ಥರಿಗೆ 110 ಕೋಟಿ ರೂ. ನೆರವು ನೀಡಿದ ಅಂಧ ವಿಜ್ಞಾನಿ ಮುರ್ತಜಾ

Pinterest LinkedIn Tumblr

ಮುಂಬೈ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ಬಾಂಬ್​ ಸ್ಫೋಟದಲ್ಲಿ ಹುತಾತ್ಮರಾದ ಸಿಆರ್​ಪಿಎಫ್​ ಯೋಧರ ಕುಟುಂಬಸ್ಥರಿಗೆ ಮುಂಬೈನ ಅಂಧ ವಿಜ್ಞಾನಿಯೊಬ್ಬರು 110 ಕೋಟಿ ರೂ. ನೆರವು ನೀಡಿದ್ದಾರೆ.

ರಾಜಸ್ಥಾನದ ಕೋಟ ಮೂಲದ ವಿಜ್ಞಾನಿ ಮುರ್ತಜಾ ಎ. ಹಮೀದ್​ ರಾಷ್ಟ್ರೀಯ ಪರಿಹಾರ ನಿಧಿಗೆ 110 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಸಂಬಂಧ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿರುವ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಮುರ್ತಜಾ ಎ. ಹಮೀದ್​ ಅವರು ‘ಫ್ಯೂಯಲ್​ ಬರ್ನ್​ ರೇಡಿಯೇಷನ್​ ಟೆಕ್ನಾಲಜಿ’ ಎಂಬ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದು, ಇದನ್ನು ಬಳಸಿ ಜಿಪಿಎಸ್​, ಕ್ಯಾಮರಾ ಮತ್ತು ಇತರೆ ಉಪಕರಣಗಳ ಸಹಾಯವಿಲ್ಲದೆ ಚಲಿಸುತ್ತಿರುವ ಯಾವುದೇ ವಾಹನವನ್ನು ಪತ್ತೆ ಹಚ್ಚಬಹುದು. ಈ ಸಂಬಂಧ ಹಮೀದ್​ ಅವರು ಸೆಪ್ಟೆಂಬರ್​ 2016ರಲ್ಲಿ ತಂತ್ರಜ್ಞಾನವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿದ್ದರು. 2018ರ ಅಕ್ಟೋಬರ್​ನಲ್ಲಿ ಇದಕ್ಕೆ ಅನುಮೋದನೆ ದೊರೆತಿದ್ದು ಎಂದು ಹಮೀದ್​ ತಿಳಿಸಿದ್ದಾರೆ.

Comments are closed.