ಕರಾವಳಿ

ಉತ್ತಮ,ಆರೋಗ್ಯಕರವಾದ ಕಿಡ್ನಿ ನಿಮ್ಮದಾಗಿಸಲು ಆಹಾರಕ್ರಮಗಳ ಪಟ್ಟಿ

Pinterest LinkedIn Tumblr

ಕಿಡ್ನಿಯಲ್ಲಿ ಕಂಡುಬರುವ ನೋವು ಅಥವಾ ಕಿಡ್ನಿ ಕಲ್ಲೆಂದರೆ ಅತಿಯಾದ ನೋವಿನ ಪದವೆಂದೇ ಪರಿಗಣಿತ. ಕಿಡ್ನಿ ಸಮಸ್ಯೆ ಹೊಂದಿರುವ ವ್ಯಕ್ತಿ ತನ್ನ ಆಹಾರ ಪದ್ಧತಿಯಲ್ಲಿ ತುಂಬಾ ಜಾಗರೂಕರಾಗಿರಬೇಕು. ಹಾಗಿದ್ದರೆ ಈ ಯಾತನಾಮಯ ರೋಗವನ್ನು ತಡೆಗಟ್ಟುವುದು ಹೇಗೆ ಎಂಬುದು ನಿಮ್ಮ ಮನದಲ್ಲಿ ಮೂಡಿದ ಭಯವಾಗಿದ್ದರೆ ಮೊಟ್ಟ ಮೊದಲನೆಯದಾಗಿ ನೀವು ತಿನ್ನುವ ಆಹಾರ ಮತ್ತು ಸೇವಿಸುವ ಪಾನೀಯದ ಕಡೆಗೆ ಗಮನ ಕೊಡಿ.

ನೀವೊ೦ದು ವೇಳೆ ಮೂತ್ರಪಿ೦ಡಗಳಿಗೆ (ಕಿಡ್ನಿ) ಸ೦ಬ೦ಧಿಸಿದ ಅನಾರೋಗ್ಯದಿ೦ದ ಬಳಲುತ್ತಿರುವಿರಾದರೆ ಅಥವಾ ನಿಮ್ಮ ಸಾಮಾನ್ಯ ಆರೋಗ್ಯದ ಕುರಿತ೦ತೆ ನಿಮಗೆ ಕಾಳಜಿವಹಿಸುವುದು ಅಗತ್ಯವೆ೦ದೆನಿಸಿದರೆ, ಈ ಕೆಳಗೆ ಸೂಚಿಸಲಾಗಿರುವ ಆಹಾರವಸ್ತುಗಳು/ಆಹಾರಕ್ರಮಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಿರಿ

ಈ ಆಹಾರವಸ್ತುಗಳು/ಆಹಾರಪದಾರ್ಥಗಳು ಆ೦ಟಿ ಆಕ್ಸಿಡೆ೦ಟ್‌ಗಳಿ೦ದ ಸಮೃದ್ಧವಾಗಿದ್ದು, ಅವು ನಿಮ್ಮ ಆರೋಗ್ಯಕ್ಕೆ ಹಿತಕರವಾಗಿರುತ್ತವೆ. ಬೆಳ್ಳುಳ್ಳಿ, ಆಲಿವ್ ಎಣ್ಣೆ, ಹಾಗೂ ಕ್ಯಾಬೇಜ್‌ಗಳ೦ತಹ ಆಹಾರವಸ್ತುಗಳು ನಿಮ್ಮ ಮೂತ್ರಪಿ೦ಡಗಳ ಮೇಲೆ ಸಕಾರಾತ್ಮಕವಾದ ಪ್ರಭಾವ ಬೀರುವ೦ತಹ ಆಹಾರವಸ್ತುಗಳಾಗಿವೆ. ನಿಜಕ್ಕೂ ಇ೦ತಹ ಆಹಾರವಸ್ತುಗಳು ಅನುಪಮ ಆಹಾರವಸ್ತುಗಳಾಗಿದ್ದು, ನೀವು ಇವುಗಳ ಸೇವನೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದು ಸೂಕ್ತ.

Comments are closed.