ಕರಾವಳಿ

‘ಉರಿ’ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಪೇಜಾವರ ಶ್ರೀಗಳು, ಸೋದೆ ಶ್ರೀ

Pinterest LinkedIn Tumblr

ಉಡುಪಿ: ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದನಾ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಘಟನಾವಳಿ ಆಧಾರಿತ ‘ಉರಿ’ ಸಿನಿಮಾವನ್ನು ಗುರುವಾರ ರಾತ್ರಿ ಮಣಿಪಾಲದ ಮಲ್ಟಿಫ್ಲೆಕ್ಸ್ ಆಗಿರುವ ಭಾರತ್ ಸಿನೆಮಾ ಚಿತ್ರಮಂದಿರದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ತಮ್ಮ ಶಿಷ್ಯರೊಂದಿಗೆ ವೀಕ್ಷಿಸಿದರು.

ಮಠದ ಭಕ್ತರೊಬ್ಬರು ಶ್ರೀಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಸಂತರು ಮತ್ತು ಸೈನಿಕರು ಸಮಾಜಕ್ಕಾಗಿಯೇ ಬದುಕು ಅರ್ಪಣೆ ಮಾಡಿರುತ್ತಾರೆ. ದೇಶಭಕ್ತಿ ಮತ್ತು ಯೋಧರ ಮೇಲಿನ ಅಭಿಮಾನದಿಂದ ಸಿನಿಮಾ ವೀಕ್ಷಿಸಲು ಬಂದಿದ್ದೇವೆ ಎಂದು ಸೋದೆ ಶ್ರೀಗಳು ಈ ಸಂದರ್ಭ ಹೇಳಿದರು.

ದೇಶಾದ್ಯಂತ ಸಂಚಲನ ಮೂಡಿಸಿದ ಉರಿ ಚಿತ್ರವನ್ನು ಪ್ರಧಾನಿ, ಉಪರಾಷ್ಟ್ರಪತಿ, ರಕ್ಷಣಾ ಸಚಿವರು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ಕಥೆ ಆಧರಿಸಿ ಬಾಲಿವುಡ್‍ನಲ್ಲಿ ಉರಿ ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ.

Comments are closed.