ಕರಾವಳಿ

ಮಗುವಿನಂತಹ ಮೃದು ಚರ್ಮ ನಿಮ್ಮಾದಾಗಿಸುವ ನೈಸರ್ಗಿಕ ಮಾಯಿಶ್ಚರೈಸರ್

Pinterest LinkedIn Tumblr

ಹಿಂದಿನಿಂದಲೂ ಬೆಣ್ಣೆಯನ್ನು ನಮ್ಮ ಆಹಾರ ಕ್ರಮದಲ್ಲಿ ಬಳಸಿಕೊಂಡು ಬರಲಾಗುತ್ತಿದೆ. ಆದರೆ ಈಗೀಗ ಇದು ತೂಕವನ್ನು ಹೆಚ್ಚಿಸುತ್ತದೆ ಎನ್ನುವ ಕಾರಣಕ್ಕಾಗಿ ಕಡೆಗಣಿಸಲ್ಪಟ್ಟಿದೆ. ಬೆಣ್ಣೆಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಬೆಣ್ಣೆಯಿಂದ ಚರ್ಮಕ್ಕೂ ಹಲವಾರು ಲಾಭಗಳಿವೆ ಎಂಬುದು ಎಷ್ಟೋ ಯುವತಿಯರಿಗೆ ತಿಳಿದೇ ಇಲ್ಲ…..

ಬೆಣ್ಣೆಯು ಚರ್ಮಕ್ಕೆ ಒಳ್ಳೆಯ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುವುದರ ಜೊತೆಗೆ ಚರ್ಮ ಕಾಂತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ, ಅಲ್ಲದೇ ಚರ್ಮಕ್ಕೆ ಸಂಬಂಧಿಸಿದಂತಹ ಕೆಲವೊಂದು ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುತ್ತದೆ…

*ಚರ್ಮವು ತುಂಬಾ ಒಣಗಿರುವಂತವರಿಗೆ ಬೆಣ್ಣೆಯು ಒಳ್ಳೆಯ ಮದ್ದು. ಸ್ನಾನಕ್ಕೆ ಮೊದಲು ಬೆಣ್ಣೆಯನ್ನು ಹಚ್ಚಿಕೊಂಡು ಸ್ವಲ್ಪ ಮಸಾಜ್ ಮಾಡಿಕೊಳ್ಳಿ. ಇದು ಚರ್ಮದಲ್ಲಿ ತೇವಾಂಶವನ್ನು ಉಂಟುಮಾಡುವುದು ಮತ್ತು ಚರ್ಮವನ್ನು ಮೃದುವಾಗಿಸುವುದು.
* ಚಳಿಗಾಲದಲ್ಲಿ ತುಟಿಗಳು ಒಡೆದುಹೋದಾಗ ಅದಕ್ಕೆ ಬೆಣ್ಣೆ ಹಚ್ಚಿಕೊಂಡರೆ ಒಡೆದ ತುಟಿಗಳಿಗೆ ಪರಿಹಾರ ಸಿಗುವುದು. ಬೆಣ್ಣೆ ಹಾಕಿಕೊಂಡು ತುಟಿಗಳಿಗೆ ಮಸಾಜ್ ಮಾಡಿದರೆ ತುಟಿ ಕಪ್ಪಗಾಗುವುದು ತಪ್ಪುವುದು. ಇದು ಬೆಣ್ಣೆಯ ಮತ್ತೊಂದು ಲಾಭ.
* ಹೆಚ್ಚಿನ ಎಲ್ಲಾ ವಿಧದ ಚರ್ಮಗಳಿಗೆ ಮಾಯಿಶ್ಚರೈಸರ್ ಬೇಕಾಗುತ್ತದೆ. ಇದನ್ನು ನೈಸರ್ಗಿಕ ರೀತಿಯಿಂದ ಮಾಡಿಕೊಂಡರೆ ಒಳ್ಳೆಯದು. ಬೆಣ್ಣೆ, ರೋಸ್ ವಾಟರ್, ಜೇನು ಮತ್ತು ಸಾರಭೂತ ತೈಲವು ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಸಿದರೆ ಫಲಿತಾಂಶ ಕಾಣಬಹುದು.
* ಸಣ್ಣಪುಟ್ಟ ಸುಟ್ಟ ಗಾಯಗಳಿಗೆ ಬೆಣ್ಣೆ ಒಳ್ಳೆಯ ಮನೆಮದ್ದು. ಸುಟ್ಟ ಗಾಯಗಳನ್ನು ಪರಿಣಾಮಕಾರಿಯಾಗಿ ಇದು ನಿವಾರಣೆ ಮಾಡುವುದು. ಇದು ಗಾಯದಲ್ಲಿನ ಉಷ್ಣತೆಯನ್ನು ಕಡಿಮೆ ಮಾಡಿಕೊಂಡು ಚರ್ಮವನ್ನು ತಂಪಾಗಿಸುವುದು.
*ಪಾದಗಳು ಒಡೆದು ತುಂಬಾ ಕೆಟ್ಟದಾಗಿ ಕಾಣಿಸಿಕೊಳ್ಳಲು ಹಲವಾರು ಕಾರಣಗಳು ಇವೆ. ಅದರಲ್ಲಿ ಪ್ರಮುಖ ಕಾರಣವೆಂದರೆ ಒಣಚರ್ಮ ಹಾಗೂ ವಾತಾವರಣದಲ್ಲಿನ ಬದಲಾವಣೆ. ಒಡೆದ ಪಾದಗಳಿಂದಾಗಿ ತುಂಬಾ ನೋವಾಗುತ್ತಾ ಇದ್ದರೆ ಬೆಣ್ಣೆಯ ಚಿಕಿತ್ಸೆ ನೀಡಿ ಒಡೆದ ಪಾದಗಳಿಂದ ಮುಕ್ತಿ ಪಡೆಯಿರಿ.
* ಮುಖದಲ್ಲಿ ಕೆಲವೊಂದು ಕಾರಣಗಳಿಂದ ಮೂಡುವಂತಹ ಕಪ್ಪು ಕಲೆಗಳನ್ನು ಬೆಣ್ಣೆಯ ಬಳಕೆಯಿಂದ ನಿವಾರಣೆ ಮಾಡಬಹುದು. ರಾತ್ರಿ ವೇಳೆ ಮುಖಕ್ಕೆ ಬೆಣ್ಣೆ ಹಚ್ಚಿಕೊಂಡರೆ ಕಪ್ಪು ಕಲೆಗಳ ನಿವಾರಿಸಲು ಸಾಧ್ಯ. ಬೆಣ್ಣೆಯನ್ನು ಚರ್ಮದ ಆರೈಕೆಗೆ ಬಳಸಿಕೊಂಡು ಆರೋಗ್ಯಕರ ಚರ್ಮವನ್ನು ಪಡೆಯಬಹುದ ಎಂದು ತಜ್ಞರು ಹೇಳುತ್ತಾರೆ.

Comments are closed.