ಕರಾವಳಿ

ತಲೆ ಕೂದಲಿಗೆ ಉಪ್ಪಿನಿಂದ ಯಾವ ರೀತಿಯ ಪ್ರಯೋಜನವಿದೆ, ಬಲ್ಲಿರಾ..!

Pinterest LinkedIn Tumblr

ಉಪ್ಪು ಇಲ್ಲದೆ ಅಡುಗೆಯಲ್ಲಿ ರುಚಿ ಇರುವುದಿಲ್ಲ, ಇದೇ ಕಾರಣಕ್ಕಾಗಿ ಬ್ರಿಟಿಷರು ಉಪ್ಪಿನ ಮೇಲೆ ಅಧಿಕ ತೆರಿಗೆಯನ್ನು ವಿಧಿಸಿದ್ದರು, ಇದನ್ನು ವಿರೋಧಿಸಿ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹವನ್ನು ಮಾಡಿದ್ದರು, ಇದೆಲ್ಲವೂ ಸತ್ಯ ಇತಿಹಾಸ, ಆದರೆ ಉಪ್ಪನ್ನು ನಾವು ಹಲವು ರೀತಿಯಲ್ಲಿ ಉಪಯೋಗ ಮಾಡಬಹುದು, ಇನ್ನು ತಲೆ ಕೂದಲಿಗೆ ಉಪ್ಪಿನಿಂದ ಯಾವ ರೀತಿಯ ಪ್ರಯೋಜನಗಳು ಸಿಗಲಿದೆ ಎಂಬುದರ ಬಗ್ಗೆ ಎಂದು ತಿಳಿಯೋಣ.

ಉಪ್ಪನ್ನು ನೀವು ಪ್ರತಿನಿತ್ಯ ತಲೆ ಸ್ನಾನ ಮಾಡಲು ಬಳಸುವ ಶಾಂಪು ಅಲ್ಲಿ ಮಿಶ್ರಣ ಮಾಡಿ ಸ್ನಾನ ಮಾಡುವುದರಿಂದ, ಕೂದಲಿನಲ್ಲಿರುವ ಜಿಡ್ಡು ಮಾಯವಾಗುತ್ತದೆ ಹಾಗೂ ಸ್ನಾನ ಮಾಡಿದ ನಂತರ ಕಂಡಿಷ್ನರ್ ಗಳನ್ನು ಬಳಸುವ ಅವಶ್ಯಕತೆ ಇರುವುದಿಲ್ಲ, ಕೂದಲು ಬಹಳ ನಯವಾಗುತ್ತದೆ ಹಾಗೂ ಉದುರುವುದು ಕಡಿಮೆಯಾಗುತ್ತದೆ.

ಅಷ್ಟೇ ಅಲ್ಲದೆ ಮುಖವನ್ನು ಸ್ವಚ್ಛಗೊಳಿಸಲು ನೀವು ಕೆಲವು ಕ್ರೀಮ್ ಗಳನ್ನು ಬಳಸುತ್ತಿದ್ದರೆ ಅದರಲ್ಲೂ ಸಹ ಸ್ವಲ್ಪ ಉಪ್ಪನ್ನು ಬಳಸಿ ಮುಖವನ್ನು ಸ್ವಚ್ಛಗೊಳಿಸುವುದು ರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳಲು ಸಹಾಯವಾಗಿ ಕಪ್ಪು ಕಲೆ ಹಾಗೂ ಜಿದ್ದು ಗಳನ್ನು ತೆಗೆಯಲು ಅನುಕೂಲ ಮಾಡಿಕೊಡುತ್ತದೆ.

ಕಾಲಿನ ಪಾದಗಳು ಹೊಡೆದರೆ ಅಥವಾ ಬೆರಳುಗಳ ಮಧ್ಯೆ ಚರ್ಮ ಒಣಗಿದರೆ ಯೋಚನೆ ಬೇಡ, ಆಲಿವ್ ಎಣ್ಣೆಯನ್ನು ಸ್ವಲ್ಪ ಉಪ್ಪಿನಲ್ಲಿ ಕಳಿಸಿ ಆ ಮಿಶ್ರಣವನ್ನು ಹಚ್ಚಿದರೆ ಉಪಶಮನ ಬಹುಬೇಗ ದೊರೆಯುತ್ತದೆ.

ಮೈ ನೋವು ವಾಸಿಮಾಡುವಲ್ಲಿ ಯೂ ಸಹ ಉಪ್ಪು ಬಹಳ ಪ್ರಯೋಜನಕಾರಿ, ನಿಮಗೇನಾದರೂ ತಲೆ ನೋವು ಕಾಡುತ್ತಿದ್ದರೆ ಬಿಸಿ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿ ಕುಡಿದರೆ ಬಹು ಬೇಗ ಶಮನವಾಗುತ್ತದೆ.

Comments are closed.