ಕರಾವಳಿ

ಮುಂಬಯಿಯಲ್ಲಿ ವಿಜಯ ಕಾಲೇಜು ಮುಲ್ಕಿ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಸಮ್ಮಿಲನ

Pinterest LinkedIn Tumblr

ಮುಂಬಯಿ: ವಿಜಯ ಕಾಲೇಜು ಮುಲ್ಕಿ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ಫೆ. 23 ರಂದು ಸಾಕಿನಾಕಾದ ಹೊಟೇಲ್‌ ಪೆನಿನ್ಸೂಲಾ ಗ್ರಾಂಡ್‌ ಹೊಟೇಲ್‌ನ ಸಭಾಗೃಹದಲ್ಲಿ ನಡೆಯಿತು.

ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಘಟಕದ ಅಧ್ಯಕ್ಷ ಆನಂದ ಶೆಟ್ಟಿ ಯವರು ಅಧ್ಯಕ್ಷತೆಯನ್ನು ವಹಿಸಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹಳೆ ವಿದ್ಯಾರ್ಥಿ ಹಾಗೂ ಫೆಡರೇಶನ್‌ ಆಫ್‌ ವರ್ಲ್ಡ್ ಬಂಟ್ಸ್‌ ಅಸೋಸಿಯೇಶನಿನ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಯವರು ಉಪಸ್ಥಿರಿತರಿದ್ದು ಶುಭ ಹಾರೈಸಿದರು.

ಸಿಎ ಸೋಮನಾಥ ಕುಂದರ್‌ ದೀಪಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಗೌರವ ಅತಿಥಿಗಳಾಗಿ ಬಂಟರ ಸಂಘದ ಎಸ್‌ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಕಾರ್ಯಾಧ್ಯಕ್ಷ ಸಿಎ ಶಂಕರ ಬಿ. ಶೆಟ್ಟಿ, ಬಂಟ್ಸ್‌ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಎಸ್‌ಎಂ ಶೆಟ್ಟಿ ನಿತ್ಯಾನಂದ ಹೆಗ್ಡೆ, ವಿಜಯ ಕಾಲೇಜು ಮೂಲ್ಕಿ ಗರ್ವನಿಂಗ್‌ ಕೌನ್ಸಿಲಿಂಗ್‌ನ ಕಾರ್ಯಾಧ್ಯಕ್ಷ ಸುಹಾಸ್‌ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಭಾಸ್ಕರ್‌ ಶೆಟ್ಟಿ , ಸಿಎ ಐ. ಆರ್‌. ಶೆಟ್ಟಿ, ಗುಣಪಾಲ್‌ ಶೆಟ್ಟಿ ಐಕಳ, ಜಯಂತ್‌ ಪ್ರಭು, ಸಿಎ ಸುಂದರ್‌ ಜಿ. ಭಂಡಾರಿ, ಅರುಣ್‌ ಕುಮಾರ್‌ ಕೋಟ್ಯಾನ್‌, ಕಿಶೋರ್‌ ಕುಮಾರ್‌ ಶೆಟ್ಟಿ ಕುತ್ಯಾರ್‌, ಲಾರೇನ್ಸ್‌ ಡಿ’ಸೋಜಾ, ರಂಜನ್‌ ಶೆಟ್ಟಿ, ಲಿಗೋರಿ ಡಿ’ಸೋಜಾ, ಪುಷ್ಪಾ ಶೆಟ್ಟಿ, ಸಿಎ ಅಶ್ವಜಿತ್‌ ಹೆಜ್ಮಾಡಿ, ತಾರನಾಥ್‌ ಶೆಟ್ಟಿ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು, ಕಾಲೇಜ್‌ನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಚಾರ್ಯ ಪ್ರೊ| ಡಾ| ಯು. ಕೆ. ಶ್ಯಾಮ ಭಟ್‌ ಮತ್ತು ರಾಜಶ್ರೀ ಎಸ್‌. ಭಟ್‌, ಇಂಗ್ಲೀಷ್‌ ವಿಭಾಗದ ವಿಶ್ರಾಂತ ಪ್ರಾಚಾರ್ಯ ಪ್ರೊ| ಡಾ| ರಘುರಾಮ್‌ ರಾವ್‌ ಮತ್ತು ಹೇಮಲತಾ ಆರ್‌. ರಾವ್‌ ದಂಪತಿಗಳಿಗೆ ಪದಾಧಿಕಾರಿಗಳು ಮತ್ತು ಹಳೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು.

ಉದ್ಯಮಿ, ರಮೇಶ್‌ ಶೆಟ್ಟಿ, ಭಾರತ್‌ ಬ್ಯಾಂಕಿನ ನಿರ್ದೇಶಕ ಭಾಸ್ಕರ್‌ ಎಂ. ಸಾಲ್ಯಾನ್‌, ಸಿಎ ವಿಶ್ವನಾಥ್‌ ಶೆಟ್ಟಿ ದಂಪತಿಗಳನ್ನು ಸಮ್ಮಾನಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ಮಿಸ್‌ ಬಂಟ್‌ ಮೇಘಾ ಜಿ. ಶೆಟ್ಟಿ ಇವರನ್ನೂ ಅಬಿನಂದಿಸಲಾಯಿತು.

ಚಿತ್ರಾ ಗಣೇಶ್‌ ಶೆಟ್ಟಿ ಪ್ರಾರ್ಥನೆಗೈದರು. ಸಿಎ ಸೋಮನಾಥ ಕುಂದರ್‌ ಸ್ವಾಗತಿಸಿದರು. ಉಪಾಧ್ಯಕ್ಷ ವಾಸುದೇವ ಎಂ. ಸಾಲ್ಯಾನ್‌, ಸಿಎ ಕಿಶೋರ್‌ ಕುಮಾರ್‌ ಸುವರ್ಣ, ದಿನೇಶ್‌ ಸಿ. ಸಾಲ್ಯಾನ್‌, ಸಿಎ ರೋಹಿತಾಕ್ಷ ದೇವಾಡಿಗ ಸಮ್ಮಾನಿತರನ್ನು ಪರಿಚಯಿಸಿದರು. ಕೋಶಾಧಿಕಾರಿ ಅಶೋಕ್‌ ದೇವಾಡಿಗ ಗತ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.

ಹರೀಶ್‌ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನ್ಯಾಯವಾದಿ ಶೇಖರ ಎಸ್‌. ಭಂಡಾರಿ ವಾರ್ಷಿಕ ವರದಿ ವಾಚಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಅಮಿತಾ ಜತ್ತಿನ್‌ ಬಳಗದಿಂದ ನೃತ್ಯ ವೈವಿಧ್ಯ ನೆರವೇರಿತು. ಶಶಿಧರ್‌ ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ವರದಿ : ಈಶ್ವರ ಎಂ. ಐಲ್   / ಚಿತ್ರ : ದಿನೇಶ್ ಕುಲಾಲ್

Comments are closed.