ರಾಷ್ಟ್ರೀಯ

ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿರುವ ವೈಮಾನಿಕ ದಾಳಿಯ ನಕಲಿ ವಿಡಿಯೋಗಳು !

Pinterest LinkedIn Tumblr

ಬೆಂಗಳೂರು: ಭಾರತೀಯ ವಾಯುಪಡೆಯ ವಿಮಾನಗಳು ಪಾಕಿಸ್ತಾನದ ಗಡಿಯೊಳಗೆ ನುಗ್ಗಿ 350ಕ್ಕು ಹೆಚ್ಚು ಉಗ್ರರನ್ನು ಹೊಡೆದುರುಳಿಸಿದ ಸುದ್ದಿ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈಮಾನಿಕ ದಾಳಿಯ ನಕಲಿ ವಿಡಿಯೋಗಳು ಸದ್ದು ಮಾಡುತ್ತಿವೆ.

ಬಾಲಕೋಟ್ ವೈಮಾನಿಕ ದಾಳಿಯ ದೃಶ್ಯ ಇದು ಎಂದು, ಮೂರು ವರ್ಷಗಳ ಹಿಂದೆ ಇಸ್ಲಾಮಾಬಾದ್ ನಿಂದ ರಾತ್ರಿ ಟೇಕಾಫ್ ಆಗುವ ಪಾಕಿಸ್ತಾನ ವಾಯುಪಡೆಯ ವಿಮಾನವೊಂದರ ದೃಶ್ಯ ಹಾಗೂ ವಿಡಿಯೋ ಗೇಮ್ ದೃಶ್ಯದ ತುಟುಕೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ.

ಈ ಎರಡು ವಿಡಿಯೋಗಳಲ್ಲಿರುವುದು ವೈಮಾನಿಕ ದಾಳಿಯ ದೃಶ್ಯವಲ್ಲ ಎಂಬದು ಖಚಿತವಾಗಿದೆ. ವೈಮಾನಿಕ ದಾಳಿಯ ದೃಶ್ಯಗಳನ್ನು ಭಾರತೀಯ ಸೇನೆ ಅಥವಾ ವಾಯುಪಡೆ ಮಾತ್ರ ಬಿಡುಗಡೆ ಮಾಡುತ್ತವೆ. ಆದರೆ ಈಗ ವೈರಲ್ ಆಗಿರುವ ವಿಡಿಯೋಗಳನ್ನು ಸೇನಾಪಡೆ ಬಿಡುಗಡೆ ಮಾಡಿಲ್ಲ.

Comments are closed.