ಕರಾವಳಿ

ಪಾರ್ಶ್ವವಾಯುವಿನ ಬಗ್ಗೆ ಸಂಪೂರ್ಣ ಮಾಹಿತಿ

Pinterest LinkedIn Tumblr

ಪಾರ್ಶ್ವವಾಯು ಎಂಬುದು ತುರ್ತು ಚಿಕಿತ್ಸೆ ಅಗತ್ಯವಿರುವ ಒಂದು ಗಂಭೀರ ಖಾಯಿಲೆ. ಇದು ಯಾವ ಸಮಯದಲ್ಲಿ ಬೇಕಾದರೂ ಯಾರಿಗಾದರೂ ಸಂಭವಿಸಬಹುದು.ಮೆದುಳಿಗೆ ರಕ್ತ ಪೂರೈಸುವ ನರದಲ್ಲಿ ಉಂಟಾಗುವ ವ್ಯತ್ಯಾಸದಿಂದ ಪಾರ್ಶ್ವವಾಯು ಸಂಭವಿಸುತ್ತದೆ.

ಪಾರ್ಶ್ವವಾಯುವಿನಲ್ಲಿ ಎರಡು ವಿಧಗಳಿವೆ –
1.ರಕ್ತಕೊರತೆಯಿಂದ ಉಂಟಾಗುವ ಪಾರ್ಶ್ವವಾಯು: ಸಾಮಾನ್ಯವಾಗಿ ಮೆದುಳಿಗೆ ರಕ್ತ ಸರಬರಾಜು ಸರಿಯಾಗಿ ನಡೆಯದೇ ಇದ್ದ ಸಮಯದಲ್ಲಿ ಈ ಬಗೆಯ ಪಾರ್ಶ್ವವಾಯು ಸಂಭವಿಸುತ್ತದೆ.
2.ರಕ್ತಸ್ರಾವದಿಂದ ಉಂಟಾಗುವ ಪಾರ್ಶ್ವವಾಯು: ಮೆದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳವು ದುರ್ಭಲಗೊಂಡಾಗ ಅಥವಾ ರಕ್ತನಾಳವು ವಿಫಲಗೊಂಡಾಗ ಈ ಬಗೆಯ ಪಾರ್ಶ್ವವಾಯು ಉಂಟಾಗುತ್ತದೆ.

ಪಾರ್ಶ್ವವಾಯುವಿನ ಅಪಾಯಕಾರಿ ಅಂಶಗಳು:
ಇದು ಉಂಟಾಗುಲು ವಯಸ್ಸು, ಕೆಲಸದ ಒತ್ತಡ ಜೊತೆಯಲ್ಲಿಯೇ ಕುಟುಂಬದ ಇತಿಹಾಸ ಕೂಡಾ ಕಾರಣವಾಗುತ್ತದೆ. ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಆದರೆ ಆಧಿನಿಕತೆಯ ಈ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ. ಮತ್ತು ಆರೋಗ್ಯಕರವಾದ ಆಹಾರವನ್ನು ಸೇವಿಸುವುದರಿಂದ ಪಾರ್ಶ್ವವಾಯುವಿನ ಅಪಾಯವನ್ನು ತಡೆಯಬಹುದು.

ಜೀವನ ಶೈಲಿಯ ಅಪಾಯಕಾರಿ ಅಂಶಗಳು:
ಅತಿಯಾದ ತೂಕ ಅಥವಾ ಬೊಜ್ಜು, ದೇಹದ ಜಡತ್ವ, ಆಹಾರ ಕ್ರಮಗಳು ಅಂದರೆ ಅತಿಯಾಗಿ ಆಹಾರ ಸೇವನೆ ಅಥವಾ ಸೇವಿಸದೇ ಇರುವುದು,ಮದ್ಯಪಾನ ಮಾಡುವುದು, ದೂಮಪಾನ ಮಾಡುವುದು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.

ವೈದ್ಯಕೀಯ ಅಂಶಗಳು:
ರಕ್ತದೊತ್ತಡ ಇರುವವರಿಗೆ,ಕೊಲೆಸ್ಟ್ರಾಲ್ ಇಂದ ಬಳಲುತ್ತಿರುವವರಿಗೆ,ಮಧುಮೇಹಿಗಳಿಗೆ, ನಿದ್ರಾಹೀನತೆ ಇರುವವರಿಗೆ,ಹಾಗೂ ಹೃದಯ ಸಂಭಂಧಿ ಖಾಯಲಿಲೆಯಿಂದ ಬಳಲುತ್ತಿರುವವರಿಗೆ ಇದರ ಅಪಾಯ ಹೆಚ್ಚು. ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದರಿಂದ ಮತ್ತು ವೈದ್ಯಕೀಯ ಅಂಶಗಳ ನಿಯಂತ್ರಣಕ್ಕೆ ಸರಿಯಾದ ಔಷಧಿಗಳನ್ನು ಸೇವಿಸುವುದರಿಂದ ಪಾರ್ಶ್ವವಾಯುವಿನ ಅಪಾಯವನ್ನು ತಡೆಯಬಹುದು.

Comments are closed.