ಕರಾವಳಿ

ಮಂಗಳೂರು : ಪುಲ್ವಾಮದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ

Pinterest LinkedIn Tumblr

ಮಂಗಳೂರು ಫೆಬ್ರವರಿ 21: ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಪುಲ್ವಾಮದಲ್ಲಿ ಹುತಾತ್ಮರಾದ ಸಿಆರ್‍ಪಿಎಫ್ ವೀರ ಯೋಧರಿಗೆ ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸೈನಿಕ ಸಂಘದ ಅಧ್ಯಕ್ಷ ವಿಕ್ರಂದತ್ತ, ಇವರು ಮಾತನಾಡಿ ಪ್ರತಿಯೊಂದು ಯೋಧರ ಜೀವನ ಅತ್ಯಂತ ಅಮೂಲ್ಯ ಯೋಧರ ಸಾವಿನಿಂದಾಗಿ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಆಶಿಸಿದರು.

ಸಮಾದೇಷ್ಟ ಡಾ: ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ ಯೋಧರು ದೇಶದ ಗಡಿಯಲ್ಲಿ ಕಾಯುತ್ತಿದ್ದರೆ, ಗೃಹರಕ್ಷಕರು ದೇಶದ ಒಳಗೆ ದೇಶ ಕಾಯುವ ಕೆಲಸ ಮಾಡುತ್ತಿದ್ದಾರೆ. ಸಂಶಯಾಸ್ಪದ ರೀತಿಯಲ್ಲಿ ಚಲನವಲನ ಕಂಡುಬಂದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ದೇಶ ರಕ್ಷಿಸುವ ಕೆಲಸ ಮಾಡಬೇಕು. ದೇಶದ ಐಕ್ಯತೆಗೆ ಮತ್ತು ಭದ್ರತೆಗೆ ತೊಂದರೆ ತರುವಂತಹ ಎಲ್ಲಾ ರೀತಿಯ ಚಟುವಟಿಕೆಗಳನ್ನು ಗೃಹರಕ್ಷಕರು ಆರಂಭಿಕ ಹಂತದಲ್ಲಿ ನಿರ್ಮೂಲನೆ ಮಾಡಬೇಕು ಎಂದು ಕರೆನೀಡಿದರು.
ಕರ್ನಲ್ ದೀಪಕ್ ಅಡ್ಯಂತಾಯ, ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯ್ ವಿಷ್ಣು ಮಯ್ಯ ಮಾತನಾಡಿದರು. ಉಪ ಸಮಾದೇಷ್ಟರಾದ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಗೃಹರಕ್ಷಕರಾದ ರಮೇಶ್ ಭಂಡಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಹೇಮಾ ರಾವ್, ಅಧ್ಯಕ್ಷರಾದ ಜ್ಯೋತಿ ಶೆಟ್ಟಿ, ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್ ಶೇರ್, ಕಚೇರಿಯ ಅಧೀಕ್ಷಕ ರತ್ನಾಕರ್ ಉಪಸ್ಥಿತರಿದ್ದರು. ಮಂಗಳೂರು ಘಟಕದ ನೂರಕ್ಕೂ ಹೆಚ್ಚು ಗೃಹರಕ್ಷಕರು ಮತ್ತು ಅಧಿಕಾರಿಗಳು ಯೋಧರಿಗೆ ಪುಷ್ಪನಮನ ಸಲ್ಲಿಸಿ, ಯೋಧರಿಗೆ ಮುಂಬತ್ತಿ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಿದರು.

Comments are closed.