ಕರಾವಳಿ

” ಲವ್ ಎಟ್ ಫಸ್ಟ್ ಸೈಟ್” ಅನ್ನುವ ಮಾತು ಎಷ್ಟರಾ ಮಟ್ಟಿಗೆ ನಿಜ..ತಿಳಿಯಿರಿ..!

Pinterest LinkedIn Tumblr

ಪ್ರೀತಿ ಪ್ರೇಮದ ಬಗ್ಗೆ ಮಾತ್ನಾಡ್ತಾ ಹೋದ್ರೆ ಅದಕ್ಕೆ ಎಂಡೇ ಇಲ್ಲ ಬಿಡಿ. ಅದಕ್ಕೆ ತಿಳಿದೋರು, ಬುದ್ಧಿಜೀವಿ ಅಂತ ಕರಿಸ್ಕೊಂಡೋರು ಪ್ರೀತಿ ಗೀತಿ ಇತ್ಯಾದಿ ಅಂತ ಹೇಳಿ ಸುಮ್ನಾಗ್ಬಿಟ್ಟಿದ್ದಾರೆ. ಇನ್ನು ಲವ್ ಎಟ್ ಫಸ್ಟ್ ಸೈಟ್ ಅಂತಾರೆ. ಹೀಗೆ ಅದೆಷ್ಟೋ ಸಿನಿಮಾಗಳಲ್ಲಿ ನೋಡಿದ್ದೂ ಉಂಟು. ನಮ್ಮ ಹೀರೋ ಹಂಗೆ ಬೈಕ್ ಮೇಲೆ ಹೋಗ್ತಾ ಇದ್ದು, ಅತ್ತ ಓಪನ್ ಹೇರ್ ಬಿಟ್ಕೊಂಡು ಹೋಗ್ತಾ ಇದ್ದ ಹೀರೋಯಿನ್ ನೋಡಿ ಹೀರೋಗೆ ಅಲ್ಲೇ ಜೀವ ಝಲ್ ಅಂತದೆ ಅನ್ನೋ ಟ್ಯೂನ್ ಹಾಡೋಕೆ ಶುರುವಾಗುತ್ತೆ. ಹೀಗೆ ಒಂದೇ ನೋಟದಲ್ಲಿ ಹೀರೋಗೆ ಹೀರೋಯಿನ್ ಮೇಲೆ ಪುಸುಕ್ಕನೆ ಲವ್ ಆಗಿಯೇ ಬಿಡುತ್ತೆ.
ಆದ್ರೆ ಇದೆಲ್ಲ ಹಂಗಾಗೋದಿಲ್ಲ ಮಾರಾಯ್ರೇ, ಅಂತಾರೆ ಸಂಶೋಧಕರು. ಲವ್ ಎಟ್ ಫಸ್ಟ್ ಸೈಟ್ ಅನ್ನೋದೇ ಶುದ್ಧ ಸುಳ್ಳಂತೆ ಇವ್ರ ಪ್ರಕಾರ. ಇದೆಲ್ಲ ಬರೀ ಸಿನಿಮಾಗಳಲ್ಲಿ ಮಾತ್ರ ಅಂತಾರೆ ಸಂಶೋಧನೆ ಮಾಡಿದೋರು.

ಅಂದಹಾಗೆ ಈ ವಿಷ್ಯವಾಗಿ ರೀಸರ್ಚ್ ಮಾಡಿದೋರು. ನ್ಯೂಯಾರ್ಕ್ನ ಹ್ಯಾಮಿಲ್ಟನ್ ಕಾಲೇಜಿನ ಸೈಕಾಲಜಿ ಡಿಪಾರ್ಟ್ಮೆಂಟ್ನೋರು. ಇವ್ರು ಹೇಳೋ ಪ್ರಕಾರ ಲವ್ ಎಟ್ ಫಸ್ಟ್ ಸೈಟ್ ಆಗೋದಿಲ್ಲ. ಯುವಕ ಯುವತಿಯರು ಲವ್ವಲ್ಲಿ ಬೀಳೋಕೆ ಕಡಿಮೆ ಅಂದ್ರು ನಾಲ್ಕು ಬಾರಿಯಾದ್ರೂ ಒಬ್ಬರನ್ನೊಬ್ಬರು ಮುಖಾಮೂಖಿಯಾದಾ ಗ್ಲೇ   ಅಲ್ಲಿ ಪ್ರೇಮ ಗೀತೆ ಹಾಡಿ, ವಿರಹಗೀತೆ ಹಾಡೋಕೆ ಶುರುವಾಗುತ್ತೆ ಅಂತ.

ಲವ್ ಎಟ್ ಫಸ್ಟ್ ಸೈಟ್ ಬಗ್ಗೆ ರೀಸರ್ಚ್ ಮಾಡಲು ಕೆಲ ಯುವಕ ಮತ್ತು ಯುವತಿರನ್ನು ಸೆಲೆಕ್ಟ್ ಮಾಡಿಕೊಂಡು ಅವ್ರ ಆಲೋಚನೆಗಳನ್ನು ಗಮನಿಸಲಾಯ್ತು. ಹೀಗೆ ಯುವಕ ಮತ್ತು ಯುವತಿಯರ ಗುಂಪಿಗೆ ಪರಸ್ಪರ ಫೋಟೋ ತೋರಿಸಲಾಯ್ತು. ಹೀಗೆ ನಾಲ್ಕು ಬಾರಿ ಫೋಟೋ ತೋರಿಸಿದಾಗ ಪ್ರತೀ ಬಾರಿ ಯುವಕ ಯುವತಿಯರ ಫೋಟೋ ನೋಡಿದಾಗ ಅವ್ರ ಮುಖಚಹರೆಯಲ್ಲಾದ ಬದಲಾವಣೆಗನ್ನು ಗಣನೆಗೆ ತೆಗೆದುಕೊಂಡು ಕೊನೆಗೊಂದು ನಿರ್ಧಾರಕ್ಕೆ ಬರ್ಲಾಯ್ತು. ಅದು ಹೇಗಪ್ಪ ಅಂದ್ರೆ ಯುವಕನೊಬ್ಬನಿಗೆ ಒಬ್ಬ ಯುವತಿಯ ಫೋಟೋ ತೋರಿಸಲಾಯ್ತು. ಮೊದಲನೇ ಬಾರಿ ನೋಡಿದಾಗ ಏನೋ ಒಂಥರ ಸಂತೋಷವಾಯ್ತು ಆ ಯುವಕನಿಗೆ. ಎರಡನೇ ಬಾರಿ ಅದೇ ಫೋಟೋ ತೋರಿಸಿದಾಗ ಆಕರ್ಷಣೆ ಹುಟ್ಟಿತು. ಮೂರನೇ ಬಾರಿ ಕುತೂಹಲಕ್ಕೆರಳಿತು. ನಾಲ್ಕನೇ ಬಾರಿಗೆ ಆ ಸಂತೋಷ, ಕುತೂಹಲ, ಆಕರ್ಷಣೆಗಳೆಲ್ಲವೂ ಹೆಚ್ಚಾಗಿ ಪ್ರೀತಿ ಹುಟ್ಟಿತು.

ಈ ಮೇಲಿನ ಎಲ್ಲಾ ಹಂತಗಳನ್ನು ಗಮನಿಸಿದ ಸಂಶೋಧಕರ ತಂಡ ಕೊನೆದಾಗಿ ಕೊಟ್ಟ ಫಲಿತಾಂಶ. ಲವ್ ಎಟ್ ಫಸ್ಟ್ ಸೈಟ್ ಆಗೋದಿಲ್ಲ. ಯುವಕ ಯುವತಿಯ ನಡುವೆ ಪ್ರೀತಿ ಹುಟ್ಟಲು ಮೂರ್ನಾಲ್ಕು ಬಾರಿಯಾದ್ರೂ ಅವ್ರು ಪರಸ್ಪರ ಭೇಟಿ ಆದಾಗಲೇ ಲವ್ವಾಗೋದು ಅಂತ ಹೇಳಿ ಅವ್ರ ಸಂಶೋಧನೆಗೆ ಫುಲ್ಸ್ಟಾಪ್ ಇಟ್ರು. ಇನ್ನು ಮುಂದೆ ಫ್ರೆಂಡ್ಸ್ ಯಾರಾದ್ರೂ ‘ಮಗ ನಂಗೆ ಲವ್ ಎಟ್ ಫಸ್ಟ್ ಸೈಟ್ ಆಗಿದೆ’ ಅಂದ್ರೆ ಅದು ನಿಜವಾದ ಲವ್ವಾ ಅಥವಾ ಜಸ್ಟ್ ಆಕರ್ಷಣೇನಾ ಅಂತ ನೀವೇ ಮನವರಿಕೆ ಮಾಡಿಕೊಡಿ.

Comments are closed.