ಕರಾವಳಿ

ಮುಲ್ಕಿ ಪೊಲೀಸರಿಂದ ತಮಿಳುನಾಡು ಮೂಲದ ನಾಲ್ಕು ಮಂದಿ ಮಹಿಳಾ ಕಳ್ಳಿಯರ ಬಂಧನ

Pinterest LinkedIn Tumblr

ಮಂಗಳೂರು : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ಮೂಲದ ನಾಲ್ಕು ಮಂದಿ ಮಹಿಳಾ ಕಳ್ಳಿಯರನ್ನು ಬಂಧಿಸಿರುವ ಮುಲ್ಕಿ ಪೊಲೀಸರು ಬಂಧಿತರಿಂದ ಕಳವುಗೈದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ತಮಿಳುನಾಡಿನ ಪೆರಿಚಲ್ ಪಿಳ್ಳೆಯಾರ್ ದೇವಸ್ಥಾನದ ಬಳಿಯ ನಿವಾಸಿಗಳಾದ ಶ್ರೀಮತಿ ಸೊಡಲ @ ಸೊಡಲೈ @ ಸತ್ಯ (30), ಶ್ರೀಮತಿ ಹರಿಣಿ @ ಇಂದ್ರಾಣಿ @ ಇಂದಿರಾಣಿ (29), ಶ್ರೀಮತಿ ರೋಹಿಣಿ @ ಮಾರಿಮುತ್ತು (30) ಹಾಗೂ ಶ್ರೀಮತಿ ದಿವ್ಯ ( 23) ಎಂದು ಗುರುತಿಸಲಾಗಿದೆ.

ಮಂಗಳೂರು ತಾಲೂಕು, ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ರಾಲ್ ಗ್ರಾಮದ ಪಕ್ಷಿಕೆರೆ ಚಚ್೯ ಬಳಿ ಶ್ರೀಮತಿ ರತ್ನ ಎಂಬವರು ಸುಮಾರು 3 ಪವನ್ ತೂಕದ ಬಂಗಾರದ ಹವಳದ ಸರವನ್ನು ಅಪರಿಚಿತ 4 ಜನ ಮಹಿಳೆಯರು ಕಸಿದುಕೊಂಡು ಹೋಗಿದ್ದು, ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂದಿಸಿದಂತೆ 4 ಜನ ತಮಿಳುನಾಡು ರಾಜ್ಯದವರನ್ನು ಮುಲ್ಕಿ ಪೊಲೀಸ್ ನಿರೀಕ್ಷಕರಾದ ಅನಂತಪದ್ಮನಾಭ ಹಾಗೂ ಸಿಬ್ಬಂದಿಯವರು ದಸ್ತಗಿರಿ ಮಾಡಿ ಅವರಿಂದ ಸುಲಿಗೆ ಮಾಡಿದ ರೂ.50,000/- ಮೌಲ್ಯದ 3 ಪವನ್ ತೂಕದ ಬಂಗಾರದ ಹವಳದ ಸರವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಆರೋಪಿತರ ಮೇಲೆ, ಈಗಾಗಲೇ ಕಾವೂರು, ಮಂಗಳೂರು ಉತ್ತರ ಪೊಲೀಸ್ ಠಾಣೆ, ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ಸರ ಸುಲಿಗೆ ಪ್ರಕರಣ ದಾಖಲಾಗಿದ್ದು, ಕಾವೂರು ಠಾಣಾ ವ್ಯಾಪ್ತಿಯಲ್ಲಿ 2008ನೇ ಇಸವಿಯಲ್ಲಿ ಸರ ಸುಲಿಗೆ ಪ್ರಕರಣದಲ್ಲಿ ಕಳೆದ 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿರುತ್ತಾರೆ.

ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ಐಪಿಎಸ್ ರವರ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಅನಂತಪದ್ಮನಾಭ ಪೊಲೀಸ್ ನಿರೀಕ್ಷಕರು, ಶೀತಲ್ ಅಲಗೂರ, ಪೊಲೀಸ್ ಉಪ ನಿರೀಕ್ಷಕರು (ಕಾ&ಸು) ಶ್ರೀಮತಿ ಕಮಲಾ ಪೊಲೀಸ್ ಉಪ ನಿರೀಕ್ಷಕರು, ಎ.ಎಸ್.ಐ ಚಂದ್ರಶೇಖರ್, ಸಿಬ್ಬಂದಿಗಳಾದ ಮೆಲ್ವೀನ್ ಪಿಂಟೋ, ತಾರನಾಥ, ಧರ್ಮೆಂದ್ರ, ವಿವೇಕಾನಂದ, ಮಹೇಶ್, ಅಣ್ಣಪ್ಪ, ಮೊಹಮ್ಮದ್ ಹುಸೇನ್, ರಾಜೇಶ್,ದಿನೇಶ್, ಚಂದ್ರಶೇಖರ್, ಶ್ರೀಮತಿ ಸೌಮ್ಯ, ಶ್ರೀಮತಿ ಅಕ್ಷಯ, ಸಬೀಯಾ ಬಾನು, ಮೇಘ, ಶಾರದ, ರೇಣುಕಾ, ವಿಜಯ ಲಾಮಣಿರವರು ಪಾಲ್ಗೊಂಡಿರುತ್ತಾರೆ.

Comments are closed.