ಗಲ್ಫ್

ದುಬೈನಲ್ಲಿ ಫೆ.22 ರಂದು ಗಮ್ಮತ್ ಕಲಾವಿದರಿಂದ ’ಬಯ್ಯ ಮಲ್ಲಿಗೆ’ ನಾಟಕ ಪ್ರದರ್ಶನ

Pinterest LinkedIn Tumblr

ದುಬೈ: ದುಬೈಯ ಗಮ್ಮತ್ ಕಲಾವಿದೆರ್ ಆಶ್ರಯದಲ್ಲಿ ಪ್ರೀಶಿಯಸ್ ಪಾರ್ಟೀಸ್ ಆನ್ಡ್ ಎಂಟರ್ಟೈನ್ಮೆಂಟ್ ಇವರ ಸಂಯೋಗದೊಂದಿಗೆ ಫೆ.22 ಶುಕ್ರವಾರ ಸಂಜೆ 5 ಗಂಟೆಗೆ ದುಬೈಯ ಊದ್ ಮೇತಾದಲ್ಲಿರುವ ಇಂಡಿಯನ್ ಹೈಸ್ಕೂಲಿನ ಶೇಖ್ ರಶೀದ್ ಸಭಾಂಗಣದಲ್ಲಿ ಸಾಂಸಾರಿಕ ನಾಟಕ ಬಯ್ಯ ಮಲ್ಲಿಗೆ’ ಪ್ರದರ್ಶನಗೊಳ್ಳಲಿದೆ.

ತುಳು ನಾಟಕ ಎಂದರೆ ನಗಿಸಲಷ್ಟೇ ಸೀಮಿತ ಎಂದು ಭಾವಿಸಲಾಗುವ ಈ ದಿನಗಳಲ್ಲಿ ಹಿಂದಿನ ತುಳು ನಾಟಕದ ಘನತೆಯನ್ನು ಎತ್ತಿ ತೋರಿಸುವಂಥ ಸಾಹಸಕ್ಕೆ ಗಮ್ಮತ್ ಕಲಾವಿದೆರ್ ಕೈಹಾಕಿದ್ದಾರೆ.

ಪರದೆ ನಾಟಕಗಳು ಬಹುತೇಕ ನೇಪಥ್ಯಕ್ಕೆ ಸರಿದಿರುವ ಈ ದಿನಗಳಲ್ಲಿ 54 ವರ್ಷಗಳ ಹಿಂದೆ ಡಾ| ಸಂಜೀವ ದಂಡೆಕೇರಿ ಅವರು ಬರೆದಿರುವ, ನಂತರ ಸಿನಿಮಾ ಆಗಿಯೂ ತೆರೆಕಂಡಿರುವ ಬಯ್ಯ ಮಲ್ಲಿಗೆ ನಾಟಕವನ್ನು ವಿಶ್ವನಾಥ್ ಶೆಟ್ಟಿ ನಿರ್ದೇಶಿಸಲಿದ್ದು, ಸಾಕ್ಷಿ ಕಲಾವಿದೆರ್ ಬೆಳಪು ತಂಡದ ಸಾರಥಿ ಶುಭಕರ್ ಬೆಳಪು ಇವರು ಸಂಗೀತ ನೀಡಲಿದ್ದಾರೆ. ದುಬೈನಲ್ಲಿರುವ ತುಳು ನಾಟಕ ಅಭಿಮಾನಿಗಳಿಗೆ ನಾಟಕ ಸವಿ ಉಣಲು ಇದೊಂದು ಉತ್ತಮ ಅವಕಾಶ ಎಂದು ಗಮ್ಮತ್ ಕಲಾವಿದೆರ್ ಅಧ್ಯಕ್ಷೆ ಶ್ರೀಮತಿ ಸುವರ್ಣ ಸತೀಶ್ ಪೂಜಾರಿ ತಿಳಿಸಿದ್ದಾರೆ.

Comments are closed.