ಕರಾವಳಿ

ಉಗ್ರ ದಾಳಿಗೆ ತೀವ್ರ ಖಂಡನೆ – ಸೇನೆ, ಸರಕಾರದೊಂದಿಗೆ ನಾವಿದ್ದೇವೆ : ಸಾಹಿತ್ಯ ಪರಿಷತ್ತು

Pinterest LinkedIn Tumblr

ಮಂಗಳೂರು :ಜಮ್ಮು ಕಾಶ್ಮೀರದಲ್ಲಿ ನಡೆದ ಕ್ರೂರ ಮತ್ತು ಹೇಯ ಭಯೋತ್ಪಾದನಾ ದಾಳಿಯಿಂದಾಗಿ ಹುತಾತ್ಮರಾಗಿ ದೇಶದ ರಕ್ಷಣೆಗಾಗಿ ಜೀವತ್ಯಾಗ ಮಾಡಿದ ನಮ್ಮ ವೀರ ಸೈನಿಕರ ದಿವ್ಯಾತ್ಮಗಳಿಗೆ ನಮ್ಮ ಶ್ರದ್ಧಾನಮನಗಳನ್ನು ಸಲ್ಲಿಸುತ್ತಾ‌ ಎಲ್ಲಾ ದೇಶಗಳ ಅಸ್ತಿತ್ವಕ್ಕೆ , ಐಕ್ಯಕ್ಕೆ ಮತ್ತು ಭವಿಷ್ಯಕ್ಕೆದೊಡ್ಡ ಸವಾಲಾಗಿರುವ ಭಯೋತ್ಪಾದನೆಯನ್ನು ಕಠಿಣವಾಗಿ‌ ಇದಿರಿಸ ಬೇಕೆಂದು ಸಂಬಂಧಪಟ್ಟ‌ ಎಲ್ಲರನ್ನೂ‌ ಒತ್ತಾಯಿಸುವುದಾಗಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಖಂಡನಾ ನಿರ್ಣಯದಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿಯಾವುದೇದಾಕ್ಷಿಣ್ಯವಿಲ್ಲದೆ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿನಿಗ್ರಹಿಸಿದೇಶವನ್ನು‌ಅದರಿಂದ ಮುಕ್ತಗೊಳಿಸುವ ಯಾವುದೇ ಪ್ರಯತ್ನಕ್ಕೆ ನಮ್ಮೆಲ್ಲರ ಬೆಂಬಲ ಅಗತ್ಯವಿದೆ. ರಾಷ್ಟ್ರೀಯದುರಂತದ ಈ ಸಂದರ್ಭದಲ್ಲಿ ನಾವೆಲ್ಲರೂ ಸರಕಾರ ಮತ್ತು ಸೇನೆಯನ್ನು ಪೂರ್ಣವಾಗಿ ಬೆಂಬಲಿಸಿ ಉಗ್ರ ಪ್ರತಿಕ್ರಮಕ್ಕಾಗಿ‌ಒತ್ತಾಯಿಸುತ್ತೇವೆ.

ಈ ಸಂಬಂಧವಾಗಿ‌ ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಂಸ್ಥೆಗಳು, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಸಂದರ್ಭದ ಗಂಭೀರತೆಯ ಕುರಿತು‌ ಅರಿವು ಮೂಡಿಸಿ ಹುತಾತ್ಮರಿಗೆ ಗೌರವಾರ್ಪಣೆ ಮತ್ತು ಸೂಕ್ತ ಕ್ರಮಕ್ಕಾ ಗಿ‌ಒತ್ತಾಯಿಸುವ ಕಾರ್ಯಕ್ರಮಗಳನ್ನು ಕೈಗೊಂಡು ಸಂವಹನ ನೀಡಬೇಕೆಂದು ನಾವು ವಿನಂತಿಸುತ್ತೇವೆ ಎಂದು ಈ ವೇಳೆ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.

Comments are closed.