ಕರಾವಳಿ

ಶೀತ, ಕೆಮ್ಮು, ಗಂಟಲು ಕೆರತ ಸಮಸ್ಯೆಗಳಿಗೆ ರಾಮಬಾಣ ಲವಂಗ

Pinterest LinkedIn Tumblr

ಲವಂಗವನ್ನು ಅಡುಗೆ ಘಮ್ಮೆಂದು ರುಚಿಕರವಾಗಿರಲಿ ಎಂದು ಬಳಸುತ್ತೇವೆ. ಚಕ್ಕೆ ಲವಂಗ ಹಾಕಿ ತಯಾರಿಸಿದ ಅಡುಗೆ ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಹಲ್ಲು ನೋವಿದ್ದರೆ ಆ ಭಾಗಕ್ಕೆ ಲವಂಗ ಇಟ್ಟರೆ ಸಾಕು ನೋವು ಕಡಿಮೆಯಾಗುವುದು, ಶೀತ, ಗೆಂಟಲು ಕೆರತ ಇದ್ದರೆ ಇದನ್ನು ಹಾಕಿ ತಯಾರಿಸಿದ ಟೀ ಕುಡಿದರೆ ಈ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಬಹುದು.

ಇವುಗಳಲ್ಲದೆ ಲವಂಗವನ್ನು ಅಡುಗೆಯಲ್ಲಿ ಸೇರಿಸುವುದರಿಂದ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:
1. ಬಾಯಿ ಮತ್ತು ಗಂಟಲಿನ ಆರೋಗ್ಯ ಶೀತ, ಗೆಂಟಲು ಕೆರತ, ಕೆಮ್ಮು ಈ ರೀತಿಯ ಸಮಸ್ಯೆ ಇದ್ದರೆ ಲವಂಗ ತಿಂದರೆ ಸಾಕು ಕಡಿಮೆಯಾಗುವುದು. ಅಲ್ಲದೆ ಬಾಯಿ ಹುಣ್ಣಾದರೆ ಇದನ್ನು ಜಗಿದರೆ ಸಾಕು, ಹುಣ್ಣು ಬೇಗನೆ ಒಣಗುವುದು. ಹಲ್ಲು ನೋವು, ವಸಡಿನಲ್ಲಿ ರಕ್ತ ಒಸರುವುದು ಈ ರೀತಿಯ ಸಮಸ್ಯೆಗಳು ಉಂಟಾಗದಂತೆ ತಡೆಗಟ್ಟುತ್ತದೆ.
2. ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ ಲವಂಗ ತಿಂದರೆ ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ ಹಾಗೂ ರಕ್ತ ಸಂಚಾರ ದೇಹದ ಎಲ್ಲಾ ಭಾಗಗಳಿಗೆ ಸರಿಯಾಗಿ ಸಂಚಾರವಾಗುವಂತೆ ಮಾಡುತ್ತದೆ.
3. ಹೊಟ್ಟೆ ಸಮಸ್ಯೆಯನ್ನು ಪರಿಹರಿಸುತ್ತದೆ ಬೇಧಿ ಉಂಟಾದರೆ ಲವಂಗ ತಿಂದರೆ ಸಾಕು ತಕ್ಷಣ ಕಡಿಮೆಯಾಗುವುದು. ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್ ಸಮಸ್ಯೆ, ತಲೆ ಸುತ್ತು ಈ ರೀತಿ ಕಂಡು ಬಂದರೆ ಲವಂಗ ತಿಂದರೆ ಸಾಕು ಕಡಿಮೆಯಾಗುವುದು. ಅಜೀರ್ಣ ಸಮಸ್ಯೆ ಇದ್ದವರು ಊಟದ ನಂತರ ಒಂದು ಲವಂಗ ತಿಂದರೆ ಸಾಕು ಆ ಸಮಸ್ಯೆಯಿಂದ ಪರಿಹಾರ ಹೊಂದಬಹುದು.
4. ಸಂಧಿ ನೋವು ಕಡಿಮೆ ಮಾಡುತ್ತದೆ ಸಂಧಿ ನೋವು ಇದ್ದವರು ಇದನ್ನು ಪೇಸ್ಟ್ ರೀತಿಯಲ್ಲಿ ಮಾಡಿ ಆ ಭಾಗಕ್ಕೆ ಹಚ್ಚುವುದರಿಂದ ಸಂಧಿ ನೋವು ಕಡಿಮೆಯಾಗುವುದು. ಅಡುಗೆಯಲ್ಲಿ ಲವಂಗವನ್ನು ಬಳಸಿ.
5. ಗಾಯವನ್ನು ಗುಣಪಡಿಸಲು ತ್ವಚೆ ಗಾಯವಾಗಿ ಊದಿಕೊಂಡಿದ್ದರೆ ಆ ಭಾಗಕ್ಕೆ ಇದರ ಪೇಸ್ಟ್ ಅನ್ನು ಹಚ್ಚಿದರೆ ಸಾಕು ಊತ ಕಡಿಮೆಯಾಗುವುದು. ಗಾಯ ಕೂಡ ಗುಣಮುಖವಾಗುತ್ತದೆ.
6. ಮೂಡ್ ಹೆಚ್ಚಿಸುತ್ತದೆ ಲವಂಗ ತಿಂದರೆ ಸೆನ್ಸೂಯಲ್ ಮೂಡ್ ಹೆಚ್ಚಿಸುತ್ತದೆ. ಇದು ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತದೆ ಹಾಗೂ ತ್ವಚೆಯ ಸೌಂದರ್ಯವನ್ನು ಕೂಡ ಕಾಪಾಡುತ್ತದೆ.

Comments are closed.