ಕರಾವಳಿ

ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಯುವಕನ ಬಂಧನ

Pinterest LinkedIn Tumblr

ಉಡುಪಿ: ಪಡುಬಿದ್ರೆಯ ವಾಣಿಜ್ಯ ಸಂಕೀರ್ಣವೊಂದರಲ್ಲಿರುವ ಐಸ್‌ಕ್ರೀಂ ಪಾರ್ಲರ್‌ಗೆ ನುಗ್ಗಿ ಅಂಗಡಿ ಮಾಲಕಿಯ ಮಾನ ಭಂಗಕ್ಕೆ ಯತ್ನಿಸಿ ತಪ್ಪಿಸಿಕೊಂಡಿದ್ದ ಆರೋಪಿ ಪಲಿಮಾರು ಮೇಲ್ಮಠ ಮನೆ ನಿವಾಸಿ ಕಬೀರ್‌(23)ನನ್ನು ಪಡುಬಿದ್ರಿ ಪೊಲೀಸರು ಶನಿವಾರ ಪಲಿಮಾರಿನಲ್ಲಿ ಬಂಧಿಸಿದ್ದಾರೆ.

ಪಡುಬಿದ್ರಿಯ ಹೊಟೇರಿನಲ್ಲಿ ಸಪ್ಲಾಯರ್‌ ಆಗಿದ್ದ ಆರೋಪಿ ಜ. 20ರಂದು ರಾತ್ರಿಯ ವೇಳೆ ಐಸ್‌ಕ್ರೀಂ ಮಳಿಗೆಗೆ ಬಂದು ಗಡ್‌ಬಡ್‌ಗೆ ಐಸ್ ಕ್ರೀ ಆರ್ಡರ್ ಹೇಳಿದ್ದ. ಬಳಿಕ ಅದನ್ನು ಸಿದ್ಧಪಡಿಸುತ್ತಿದ್ದ ಮಾಲಕಿ ಜೊತೆ ಅನುಚಿತವಾಗಿ ವರ್ತಿಸಿ ಮಾನ ಭಂಗಕ್ಕೆ ಯತ್ನಿ ಸಿದ್ದು ಮಹಿಳೆ ಕೂಗಿದಾಗ ಆತ ಪರಾರಿಯಾಗಿದ್ದ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಆರೋಪಿಯನ್ನು ಪಲಿಮಾರು ಪೇಟೆಯಲ್ಲಿ ಬಂಧಿಸಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Comments are closed.