ಕರಾವಳಿ

ಮಾನವರಿಗೆ ಅಪಾಯಕಾರಿಯಾದ ಆಂಟಿಬಯೋಟಿಕ್ಸ್ ಫಾರಂ ಕೋಳಿ…?

Pinterest LinkedIn Tumblr

ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ಕೋಳಿ ಮಾಂಸ ಎಂದರೆ ಮನೆಯಲ್ಲಿ ಸಾಕಿದ ನಾಟಿ ಕೋಳಿಗಳೇ ಆಗಿರುತ್ತಿದ್ದವು. ಇವು ದುರ್ಲಭ ಮತ್ತು ಸಾಕಲು ಕೊಂಚ ಕಷ್ಟಕರವಾದುದರಿಂದ ಅಪರೂಪಕ್ಕೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸೇವಿಸಲಾಗುತ್ತಿತ್ತು. ಆದರೆ ಇಂದು ಮಾರುಕಟ್ಟೆಯಲ್ಲಿ ಶೇಖಡಾ 99ರಷ್ಟು ಪೌಲ್ಟ್ರಿ ಫಾರಂಗಳಿಂದ ಬಂದ ಬ್ರಾಯ್ಲರ್ ಕೋಳಿಗಳೇ ಲಭ್ಯವಿವೆ. ಜನರ ಬೇಡಿಕೆಗೆ ಅಗತ್ಯವಿರುವಷ್ಟು ಪ್ರಮಾಣವನ್ನು ಪೂರೈಸಲು ಈ ಫಾರಂಗಳಿಂದ ಮಾತ್ರ ಸಾಧ್ಯ.

ಅಪ್ಪಟ ವ್ಯಾಪಾರಿ ವ್ಯವಹಾರವಾದ ಈ ಫಾರಂಗಳಿಂದ ಬರುವ ಕೋಳಿಗಳನ್ನು ವಿವಿಧ ಔಷಧಿ, ಹಾರ್ಮೋನುಗಳು ಮತ್ತು ಆಂಟಿ ಬಯೋಟಿಕ್ ಗಳನ್ನು ನೀಡಿ ತಿನ್ನಿಸಿದ ಆಹಾರಕ್ಕೆ ತಕ್ಕ ಮಾಂಸ ಬಲವಂತವಾಗಿ ಬೆಳೆಯುವಂತೆ ಮಾಡಿ ಬಳಿಕ ಸಂಸ್ಕರಿಸಲಾಗಿರುತ್ತದೆ. ವಾಸ್ತವವಾಗಿ ಈ ಕೋಳಿಗಳ ಮಾಂಸದಲ್ಲಿ ಹಲವಾರು ವಿಷಕಾರಿ ಅಂಶಗಳಿದ್ದು ಆರೋಗ್ಯಕ್ಕೆ ಮಾರಕವಾಗಿವೆ. ಏಕೆಂದರೆ ಮಾಂಸ ಬೆಳೆಯಲೆಂದು ತಿನ್ನಿಸಿದ್ದ ಹಾರ್ಮೋನುಗಳು ಕೋಳಿ ಮಾಂಸದಲ್ಲಿ ಮಿಳಿತಗೊಂಡು ತಿಂದ ವ್ಯಕ್ತಿಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಪೌಲ್ಟ್ರಿ ಫಾರಂ ಗಳಿಂದ ಹೊರಬಂದ ಈ ಮಾಂಸದ ಉತ್ಪನ್ನಗಳನ್ನು ಇದುವರೆಗೆ ಅರಿವಿರದೇ ತಿನ್ನುತ್ತಾ ಬಂದಿದ್ದು ಈಗಾಗಲೇ ಕೆಲವು ತೊಂದರೆಗಳಿಗೆ ನಮ್ಮನ್ನು ನಾವೇ ಒಡ್ಡಿಕೊಂಡಿರಬಹುದು. ಆದರೆ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿಗಳ ಮೂಲಕ ಈ ಬಗ್ಗೆ ಅರಿವನ್ನು ನೀಡಲಾಗಿದ್ದು ಮುಂದಿನ ಬಾರಿ ಈ ಮಾಂಸವನ್ನು ಕೊಳ್ಳುವ ಮುನ್ನ ಎರಡು ಬಾರಿ ಯೋಚಿಸುವುದು ಉತ್ತಮ.

ಈ ಮಾಂಸದ ಸೇವನೆಯಿಂದ ಕಿಡ್ನಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ವಿಶೇಷವಾಗಿ ಪುರುಷರಲ್ಲಿ ನಪುಂಸಕತೆಯನ್ನು ಉಂಟುಮಾಡುತ್ತದೆ ಎಂಬ ಮಾಹಿತಿ ಆಘಾತಕಾರಿಯಾಗಿದೆ. ಆದ್ದರಿಂದ ಮುಂದಿನ ಬಾರಿ ಕೋಳಿ ಮಾಂಸ ಕೊಳ್ಳುವ ಮೊದಲು ಈ ಕೋಳಿಗಳು ಸಾವಯವ ಆಹಾರವನ್ನು ಸೇವಿಸಿ ಬೆಳೆದಿವೆ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಈ ಮಾಂಸದಲ್ಲಿ ಕೊಬ್ಬು ವಿಪರೀತವಾಗಿರುವ ಕಾರಣ ದೇಹದಲ್ಲಿ ಕೊಬ್ಬು ಬೆಳೆಯಲೂ ಕಾರಣವಾಗುತ್ತದೆ. ಇದು ನೇರವಾಗಿ ಸ್ಥೂಲಕಾಯಕ್ಕೆ ಆಹ್ವಾನ ನೀಡುತ್ತದೆ. ಅಲ್ಲದೇ ಮಾಂಸದ ತುಂಡು ಸಾಕಷ್ಟು ದೊಡ್ಡದಿದ್ದರೆ ಅದರತ್ತ ಆಕರ್ಷಣೆಯೂ ಹೆಚ್ಚುವ ಕಾರಣ ಹೋಟೆಲುಗಳು ದೊಡ್ಡ ತುಂಡುಗಳನ್ನೇ ನೀಡುತ್ತವೆ. ಇದು ಪ್ರತ್ಯಕ್ಷವಾಗಿ ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಬನ್ನಿ, ಈ ಅಪಾಯಕಾರಿ ಮಾಂಸದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈಗ ನೋಡೋಣ..

ಮಾನವರಿಗೆ ಅಪಾಯಕಾರಿಯಾದ ಆಂಟಿಬಯೋಟಿಕ್ಸ್
ಕೋಳಿಗಳು ಬೇಗನೇ ಮತ್ತು ಕಡಿಮೆ ಆಹಾರದಲ್ಲಿ ಅತಿಹೆಚ್ಚಿನ ಪ್ರಮಾಣದ ಮಾಂಸ ಹೊಂದುವಂತೆ ಕೋಳಿಗಳು ಮರಿಗಳಾಗಿದ್ದಾಗಿನಿಂದಲೇ ಕೆಲವು ಆಂಟಿ ಬಯೋಟಿಕ್ಸ್ ಔಷಧಿಗಳನ್ನು ನೀಡಲಾಗುತ್ತದೆ. ಇದು ಅಪ್ಪಟ ವ್ಯಾಪಾರಿ ವ್ಯವಹಾರವಾಗಿದ್ದು ಹಾಕಿದ್ದ ಬಂಡವಾಳದ ಗರಿಷ್ಟ ಲಾಭ ಬರುವಂತೆ ನೋಡಿಕೊಳ್ಳುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಾನವರಿಗೆ ಅಪಾಯಕಾರಿಯಾದ ಆಂಟಿಬಯೋಟಿಕ್ಸ್
ಈ ಆಂಟಿಬಯೋಟಿಕ್‌ಗಳು ಮಾಂಸದ ಮೂಲಕ ಸೇವಿಸಿದವರ ದೇಹ ಪ್ರವೇಶಿಸಿದರೂ ತನ್ನ ಪ್ರಭಾವವನ್ನು ಇನ್ನೂ ಉಳಿಸಿಕೊಂಡಿರುತ್ತದೆ. ಇದು ಮನುಷ್ಯರಿಗೆ ಯಾವ ರೀತಿಯಲ್ಲಿ ಹಾನಿ ಮಾಡುತ್ತದೆ ಎಂಬುದನ್ನು ಖಚಿತವಾಗಿ ಹೇಳಲಾಗದಿದ್ದರೂ ಕೆಲವು ರೀತಿಯ ಹಾನಿಯನ್ನಂತೂ ಖಂಡಿತಾ ಮಾಡುತ್ತವೆ.

ಕೋಳಿ ಬೆಳೆಯಲು ನೀಡಲಾಗುವ ಗ್ರೋಥ್ ಹಾರ್ಮೋನುಗಳು
ಬ್ರಾಯ್ಲರ್ ಕೋಳಿಗಳು ನಾಟಿ ಕೋಳಿಗಳಿಗಿಂತಲೂ ತೂಕದಲ್ಲಿ ಹೆಚ್ಚು ತೂಗುತ್ತವೆ ಹಾಗೂ ಈ ತೂಕ ಅವುಗಳಿಗೆ ಕೆಲವು ವಾರಗಳಲ್ಲಿಯೇ ಬಂದುಬಿಡಲು ಕಾರಣ ಏನು ಗೊತ್ತೇ? ಇದಕ್ಕೆ ಇವುಗಳ ಆಹಾರ ಮತ್ತು ಔಷಧಿಗಳಲ್ಲಿ ಬೆಳವಣಿಗೆ ಹೆಚ್ಚಿಸುವ ಗ್ರೋಥ್ ಹಾರ್ಮೋನುಗಳು ಎಂಬ ರಸದೂತಗಳನ್ನು ನೀಡಲಾಗಿರುತ್ತದೆ.
ಇದರಿಂದ ಕೋಳಿ ಕೃತಕ ಬೆಳವಣಿಗೆ ಪಡೆದು ತೂಕ ಪಡೆದುಕೊಂಡಿರುತ್ತದೆ. ಈ ರಸದೂತಗಳು ಮಾಂಸದಲ್ಲಿ ಉಳಿದಿದ್ದು ಬೇಯಿಸಿದ ಬಳಿಕವೂ ಇದರ ಪ್ರಭಾವ ಬಲುಭಾಗ ಉಳಿದಿರುತ್ತದೆ. ಇದು ಕೋಳಿಗಳ ತೂಕವನ್ನು ಹೇಗೆ ಹೆಚ್ಚಿಸಿತೋ ಹಾಗೇ ಸೇವಿಸಿದರವ ತೂಕವನ್ನೂ ಏರಿಸುತ್ತದೆ. ಅಲ್ಲದೇ ಇನ್ನೂ ಕೆಲವಾರು ಅಡ್ಡಪರಿಣಾಮಗಳನ್ನು ನಮ್ಮ ದೇಹಕ್ಕೆ ಉಂಟುಮಾಡಬಹುದು.

ಮಾಂಸ ಬ್ಯಾಕ್ಟೀರಿಯಾಗಳಿಂದ ಬಾಧಿತವಾಗಿರುತ್ತದೆ
ಒಂದು ಸಮೀಕ್ಷೆಯ ಪ್ರಕಾರಮಾರುಕಟ್ಟೆಯಲ್ಲಿ ದೊರಕುವ ಕೋಳಿಯ ಎದೆಭಾಗದ ಮಾಂಸದ ಶೇ 97 ರಷ್ಟು ಪಾಲಿನಲ್ಲಿ ಸೋಂಕು ಹರಡಲು ಸಕ್ಷಮವಿರುವ ಬ್ಯಾಕ್ಟೀರಿಯಾಗಳನ್ನು ಹೊಂದಿದೆ. ಇದಕ್ಕೆ ಹಾರ್ಮೋನು ಮತ್ತು ಆಂಟಿಬಯೋಟಿಕ್ ಔಷಧಿಗಳು ನೇರವಾಗಿ ಕಾರಣವಲ್ಲದಿದ್ದರೂ ಮಾಂಸದಲ್ಲಿ ಬ್ಯಾಕ್ಟೀರಿಯಾಗಳಂತೂ ಕಂಡುಬಂದಿವೆ. ಈ ಬ್ಯಾಕ್ಟೀರಿಯಾಗಳು ಶೈತ್ಯೀಕರಿಸಿದ ಬಳಿಕವೂ ಜೀವಂತವಾಗಿದ್ದು ಬೇಯಿಸಿದ ಬಳಿಕವೂ ಹಾನಿ ಮಾಡಬಲ್ಲಷ್ಟು ಪ್ರಮಾಣದ ಬ್ಯಾಕ್ಟೀರಿಯಾಗಳು ಆಹಾರದ ಮೂಲಕ ಹೊಟ್ಟೆ ಸೇರುತ್ತದೆ.

ಈ ಹಾನಿಕಾರಕ ಮಾಂಸದಿಂದ ತಪ್ಪಿಸಿಕೊಳ್ಳುವುದು ಹೇಗೆ?
ಹಸಿಮಾಂಸದಲ್ಲಿದ್ದ ಬ್ಯಾಕ್ಟೀರಿಯಾ ಹೇಗೋ ಮನುಷ್ಯರ ರಕ್ತ ಅಥವಾ ಹೊಟ್ಟೆ ಸೇರಿದರೆ ಅಸ್ವಸ್ಥರಾಗಿಸುವಷ್ಟು ಇವು ಪ್ರಭಾವ ಬೀರಬಹುದು. ಆದ್ದರಿಂದ ಇದರಿಂದ ತಪ್ಪಿಸಿಕೊಳ್ಳಲು ಕೆಲವಾರು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅಗತ್ಯ. ಮಾಂಸವನ್ನು ತೊಳೆದುಕೊಳ್ಳುವ ಮುನ್ನ ಮತ್ತು ಬಳಿಕ ಸೋಂಕು ನಿವಾರಕ ದ್ರವದಿಂದ ಸ್ವಚ್ಛಗೊಳಿಸುವುದು ಅಗತ್ಯ. ಮಾಂಸವನ್ನು ಚೆನ್ನಾಗಿ ತೊಳೆದ ಬಳಿಕ, ರಕ್ತವೆಲ್ಲಾ ಹೋದ ಬಳಿಕವೂ ಈ ಮಾಂಸವನ್ನು ಚೆನ್ನಾಗಿ ಬೇಯಿಸಬೇಕು.
ಬ್ರಾಯ್ಲರ್ ಗಿಂತ ನಾಟಿ ಕೋಳಿಯೇ ಉತ್ತಮ. ಬ್ರಾಯ್ಲರ್ ಕೊಳ್ಳುವುದಾದರೆ ಕೊಂಚ ದುಬಾರಿಯಾದರೂ ತೊಂದರೆಯಿಲ್ಲ, ಉತ್ತಮ ಗುಣಮಟ್ಟದ ಕೋಳಿಯನ್ನೇ ಕೊಳ್ಳಿ. ಕೊಂಡ ಬಳಿಕ ಪ್ಲಾಸ್ಟಿಕ್ ಚೀಲದಲ್ಲಿಯೇ ತನ್ನಿ ಹಾಗೂ ಪ್ರತಿ ಬಾರಿ ತಾಜಾ ಕೋಳಿಯ ಮಾಂಸವನ್ನೇ ಬಯಸಿ. ಸಾಧ್ಯವಾದಷ್ಟು ಕಡಿಮೆ ತೂಕದ ಕೋಳಿಗಳನ್ನು ಕೊಳ್ಳುವುದು ಇನ್ನೂ ಉತ್ತಮ.

Roxarsone ಎಂಬ ಔಷಧಿ ನೀಡಲಾಗುತ್ತಿದೆಯೋ ಗಮನಿಸಿ
2011ರವರೆಗೂ Roxarsone ಎಂಬ ಔಷಧಿಯನ್ನು ಕೋಳಿಗಳಿಗೆ ನೀಡಲಾಗುತ್ತಿತ್ತು. ಇದರಿಂದ ಕೋಳಿಗಳು ಅಲ್ಪ ಸಮಯದಲ್ಲಿಯೇ ಭಾರೀ ಪ್ರಮಾಣದ ಆಹಾರವನ್ನು ಸೇವಿಸಿ ಕೊಬ್ಬಿ ಮೈತುಂಬಿಕೊಳ್ಳುತ್ತಿದ್ದವು. ಆದರೆ 2011ರಲ್ಲಿ FDA (Food And Drug Administration) ವಿಭಾಗ ಈ ಔಷಧಿಯನ್ನು ನಿಷೇಧಿಸಿತು. ಈ ಔಷಧಿ ಮಾಂಸದಲ್ಲಿ ಉಳಿದುಕೊಂಡು ಸೇವಿಸಿದವರ ಆರೋಗ್ಯವನ್ನು ಪ್ರಭಾವಗೊಳಿಸುತ್ತದೆ ಎಂಬ ಕಾರಣಕ್ಕಾಗಿ ಇದನ್ನು ನಿಷೇಧಿಸಲಾಗಿತ್ತು. ಆದರೆ ಕೆಲವು ಪೌಲ್ಟ್ರಿ ಫಾರಂ ಗಳು ಇಂದಿಗೂ ಇವನ್ನು ಬಳಸುತ್ತಿರುವುದು ಆಘಾತಕಾರಿಯಾಗಿದೆ.

ಕೋಳಿಗಳಲ್ಲಿ ಕಂಡುಬಂದ ಆರ್ಸೆನಿಕ್ ಎಂಬ ವಿಷ
ಕೆಲವು ಕೋಳಿಗಳ ಮಾಂಸದಲ್ಲಿ ಆರ್ಸೆನಿಕ್ ಎಂಬ ಭಯಾನಕ ವಿಷದ ಕಣಗಳು ಕಂಡುಬಂದಿವೆ. ಇದರ ಅಲ್ಪ ಪ್ರಮಾಣವೂ ಮನುಷ್ಯರಿಗೆ ಪ್ರಾಣಾಪಾಯ ಉಂಟುಮಾಡಬಲ್ಲುದು. ಕೋಳಿಗಳಿಗೆ ಬೇಗನೇ ತೂಕ ಬರಲು ತಿನ್ನಿಸುವ ಹಾರ್ಮೋನುಗಳು, ಆಂಟಿಬಯೋಟಿಕ್ ಮತ್ತಿತರ ಔಷಧಿಗಳಿಂದ ಇದರ ದೇಹದಲ್ಲಿ ಆರ್ಸೆನಿಕ್ ಒಂದು ಉಪ ಉತ್ಪನ್ನವಾಗಿ ಬಿಡುಗಡೆಯಾಗುತ್ತದೆ. ವಿಚಿತ್ರವೆಂದರೆ ಈ ವಿಷ ಕೋಳಿಯ ದೇಹದಲ್ಲಿದ್ದರೂ ಕೋಳಿ ಈ ವಿಷಕ್ಕೆ ಸಾಯುವುದಿಲ್ಲ. ಬದಲಿಗೆ ಇದರ ಮಾಂಸವನ್ನು ಸೇವಿಸಿದವರಿಗೆ ಪ್ರಾಣಾಪಾಯ ಉಂಟುಮಾಡುತ್ತದೆ.

ಮಾಂಸದ ಕೋಳಿಗಳೆಲ್ಲವೂ ಹೇಂಟೆಗಳೇ ಆಗಿವೆ
ಮಾಂಸದ ಕೋಳಿಗಳೆಲ್ಲವೂ ಹೇಂಟೆ ಅಥವಾ ಹೆಣ್ಣು ಕೋಳಿಗಳೇ ಆಗಿವೆ. ಏಕೆಂದರೆ ಆಹಾರ ತಿಂದು ಮಾಂಸ ಉತ್ಪನ್ನ ಮಾಡಲು ಹುಂಜಗಳಿಗಿಂತ ಹೇಂಟೆಗಳೇ ಹೆಚ್ಚು ಕ್ಷಮತೆ ಹೊಂದಿವೆ. ಮೊಟ್ಟೆಯನ್ನು ಮರಿ ಮಾಡುವಾಗ ಹೆಣ್ಣು ಮರಿಯಾಗುವ ಮೊಟ್ಟೆಯನ್ನೇ ಆಯ್ದುಕೊಳ್ಳಲು ಸಿಬ್ಬಂದಿ ನುರಿತರಾಗಿರುತ್ತಾರಾದರೂ ಇವರಿಂದ ಕೇವಲ ಶೇಖಡಾ ಎರಡರಷ್ಟು ತಪ್ಪು ಆಗಲು ಮಾತ್ರ ಅವಕಾಶವಿದೆ. ಸಿಬ್ಬಂದಿಯ ಶೇಖಡಾ ಎರಡಕ್ಕಿಂತಲೂ ಕಡಿಮೆ ತಪ್ಪಿನಿಂದ ಉತ್ಪನ್ನವಾದ ಈ ಹುಂಜದ ಮರಿಗಳ ಸಂಖ್ಯೆ ಸುಮಾರು ಎಪ್ಪತ್ತು ಲಕ್ಷ! ಈ ಆಗಾಧ ಪ್ರಮಾಣದ ಮರಿಗಳನ್ನು ಮಾಡುವುದಾದರೂ ಏನು? ಕೆಲವರು ಇವುಗಳ ಮೇಲೆ ಬಣ್ಣದ ಪುಡಿಯನ್ನು ಎರಚಿ ಮಾರುಕಟ್ಟೆಗೆ ಚಿಲ್ಲರೆ ಬೆಲೆಯಲ್ಲಿ ಮಾರಲು ತರುತ್ತಾರೆ. ಇನ್ನುಳಿದ ಮರಿಗಳನ್ನು ನಿರ್ದಾಕ್ಷಿಣ್ಯವಾಗಿ ಉಸಿರುಗಟ್ಟಿಸಿ ಕೊಲ್ಲಲಾಗುತ್ತದೆ. ಸಮಯ ಉಳಿಸಲು ಕೊಂದ ಅಷ್ಟೂ ಮರಿಗಳನ್ನು ದೊಡ್ಡ ಅರೆಯುವ ಯಂತ್ರದಲ್ಲಿ ಅರೆದು ವಿಸರ್ಜಿಸಲಾಗುತ್ತದೆ. ಕೋಳಿಮಾಂಸದ ಬೇಡಿಕೆ ಹೆಚ್ಚಿದಷ್ಟೂ ಈ ಅಮಾನುಷ ಮತ್ತು ಕ್ರೂರ ವಿಧಾನ ಮುಂದುವರೆಯುತ್ತಲೇ ಇರುತ್ತದೆ.

Comments are closed.