ಕರಾವಳಿ

“ಆಕ್ಯೂಪಂಕ್ಚರ್” ಮಹಿಳೆಯರ ಬಂಜೆತನ ನಿವಾರಣೆಗೆ ಉತ್ತಮ ಚಿಕೆತ್ಸೆ

Pinterest LinkedIn Tumblr

ಆಕ್ಯೂಪಂಕ್ಚರ್ ಒಂದು ಬದಲಿ ವೈದ್ಯಕೀಯ ಚಿಕಿತ್ಸೆ. ಸಾಂಪ್ರದಾಯಿಕ ಚೀನಿ ವೈದ್ಯಕೀಯ ಚಿಕಿತ್ಸೆಯ ಭಾಗವಾಗಿರುವ ಇದರಲ್ಲಿ ದೇಹದ ಆಕ್ಯೂಪಂಕ್ಚರ್‍ಬಿಂದುಗಳಲ್ಲಿ ತೆಳ್ಳನೆಯ ಸೂಜಿಗಳನ್ನು ಚುಚ್ಚಲಾಗುತ್ತದೆ. ಇದರೊಂದಿಗೆ ಶಾಖಾ, ಒತ್ತಡ ಅಥವ ಲೇಸರ್ ಬೆಳಕು ನೀಡದೆ ಅಲ್ಲದೆ ಇದನ್ನು ನೋವಿನಿಂದ ಪರಿಹಾರ ಪಡೆಯಲು ಬಳಸಲಾಗುತ್ತದೆ.

ಇಂದು ಆಕ್ಯೂಪಂಕ್ಚರ್ ಕೇವಲ ನೋವಿನಿಂದ ಪರಿಹಾರ ಪಡೆಯಲು ಸೀಮಿತವಾಗಿಲ್ಲ. ಅದನ್ನು ಈಗ ಮಕ್ಕಳನ್ನು ಪಡೆಯಲು ಬಯಸುವ ಮಹಿಳೆಯರಲ್ಲಿ ಬಂಜೆತನವನ್ನು ಯಾವುದೇ ದುಷ್ಪರಿಣಾಮಗಳಿಲ್ಲದೆ ಗುಣಪಡಿಸಲು ಉತ್ತಮ ಬದಲಿ ಚಿಕಿತ್ಸೆಯಾಗಿ ಗುರುತಿಸಲಾಗಿದೆ. ಪಾಶ್ಚಿಮಾತ್ಯ ಫಲವಂತಿಕೆಯ ಚಿಕಿತ್ಸೆಯೊಂದಿಗೆ ಬಳಸಿದಾಗ ಗರ್ಭಧಾರಣೆಯ ಸಾಧ್ಯತೆಯನ್ನು ಆಕ್ಯೂಪಂಕ್ಚರ್ ಶೇ.26ರಷ್ಟು ಹೆಚ್ಚಿಸುತ್ತದೆ. ಇತ್ತೀಚೆಗೆ ಟೆಲ್ ಅವೀವ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ವರದಿ ಪ್ರಕಾರ ಐಯುಐನೊಂದಿಗೆ ಸಾಂಪ್ರದಾಯಿಕ ಚೀನಿ ವೈದ್ಯಕೀಯ ಚಿಕಿತ್ಸೆ ಸೇರಿಸುವುದರಿಂದ ಪರೀಕ್ಷಾ ಸಮೂಹದ ಶೇ.65ರಷ್ಟು ಮಹಿಳೆಯರಲ್ಲಿ ಗರ್ಭಧಾರಣೆ ಕಂಡುಬಂದಿದ್ದು ಯಾವುದೇ ಮೂಲಿಕಾ ಅಥವ ಆಕ್ಯೂಪಂಕ್ಚರ್ ಚಿಕಿತ್ಸೆ ಪಡೆಯದ ಸಾಮಾನ್ಯ ಸಮೂಹದಲ್ಲಿ ಇದು ಶೇ.39.4ರಷ್ಟಿತ್ತು.

ವ್ಯಾಯಾಮರಹಿತ ಜೀವನ ಅನಾರೋಗ್ಯಕರ ಆಹಾರಾಭ್ಯಾಸಗಳು ಬಂಜೆತನಕ್ಕೆ ಪ್ರಮುಖ ಕಾರಣಗಳಾಗಿವೆ. ಅನೇಕ ತಾರೆಗಳು ಗರ್ಭಧರಿಸಲು ಮತ್ತು ಗರ್ಭಾವಸ್ಥೆಯಲ್ಲಿ ಉತ್ತಮ ಆರೋಗ್ಯ ಉಳಿಸಿಕೊಳ್ಳಲು ಆಕ್ಯೂಪಂಕ್ಚರ್ ನೆರವಾಯಿತು ಎಂಬುದನ್ನು ದೃಢಪಡಿಸುತ್ತಿರುವುದು ಇದಕ್ಕೆ ಮತ್ತೊಂದು ನಿದರ್ಶನವಾಗಿದೆ. ಹಲವಾರು ವರ್ಷಗಳ ಕಾಲ ಬಂಜೆತನದ ತೊಂದರೆ ಹೊಂದಿದ್ದ ಸೆಲೀನ್ ಡಿಯಾನ್ ಆಕ್ಯೂಪಂಕ್ಚರ್ ಮತ್ತು ಐವಿಎಫ್ ನೆರವಿನಿಂದ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಮರಿಯಾ ಕ್ಯಾರೇ ಅವರು 2010ರಲ್ಲಿ ಐವಿಎಫ್ ಸಹಾಯವಿಲ್ಲದೆ ಅವಳಿ ಮಕ್ಕಳಿಗೆ ಜನ್ಮ ನೀಡುವಲ್ಲಿ ಆಕ್ಯೂಪಂಕ್ಚರ್ ನೆರವಾಯಿತು ಎಂದಿದ್ದಾರೆ.

ಚಿಕಿತ್ಸೆಯಾಗಿ ಆಕ್ಯೂಪಂಕ್ಚರ್

ಬದಲಿ ವೈದ್ಯಕೀಯ ಚಿಕಿತ್ಸೆಯಾಗಿರುವ ಆಕ್ಯೂಪಂಕ್ಚರ್‍ನಲ್ಲಿ ದೇಹದ ನಿರ್ದಿಷ್ಟ ಸ್ಥಳಗಳಲ್ಲಿ ತೆಳ್ಳನೆಯ ಸೂಜಿಗಳನ್ನು ಚುಚ್ಚಲಾಗುತ್ತದೆ. ಈ ರೇಖೆಗಳನ್ನು ಶಕ್ತಿ ರೇಖೆಗಳು ಎನ್ನಲಾಗುತ್ತದೆ. ಈ ಚಿಕಿತ್ಸೆಯನ್ನು ಹಲವಾರು ದೈಹಿಕ ಮತ್ತು ಮಾನಸಿಕ ಸ್ಥಿತಿಗಳ ಚಿಕಿತ್ಸೆಗಳಿಗೆ ಬಳಸಲಾಗುತ್ತದೆ. ದೇಹದಲ್ಲಿ 2000ಕ್ಕೂ ಹೆಚ್ಚಿನ ಆಕ್ಯೂಪಂಕ್ಚರ್ ಬಿಂದುಗಳಿದ್ದು ಇವು ಮನುಷ್ಯ ದೇಹದಲ್ಲಿ ಮೆರಿಡಿಯನ್ಸ್ ಎನ್ನಲಾಗುವ 14 ಪ್ರಮುಖ ಮಾರ್ಗಗಳನ್ನು ಜೋಡಿಸುತ್ತವೆ. ಈ ತಂತ್ರಜ್ಞಾನವನ್ನು ಈಗ ಬಂಜೆತನದ ಚಿಕಿತ್ಸೆಗಾಗಿ ಬಳಸಲಾಗುತ್ತಿದ್ದು ಇದರಿಂದ ಫಲವತ್ತತೆಯ ಸಾಧ್ಯತೆ ಹೆಚ್ಚಿಸಲು ಹೆಚ್ಚು ಉಪಯುಕ್ತ. ಈ ಮೆರಿಡಿಯನ್‍ಗಳು ದೇಹದ ಮೇಲ್ಮೈನಿಂದ ಆಂತರಿಕ ಅಂಗಗಳ ನಡುವೆ ಶಕ್ತಿಯನ್ನು ರವಾನಿಸುತ್ತವೆ ಎಂದು ಚೀನಿ ಚಿಕಿತ್ಸಕರು ನಂಬಿದ್ದಾರೆ. ದೇಹದಲ್ಲಿ ಶಕ್ತಿಯ ಸಾಮಾನ್ಯ ಅರಿವನ್ನು ಉಳಿಸಲು ಆಕ್ಯೂಪಂಕ್ಚರ್ ಸಹಾಯ ಮಾಡುತ್ತದೆ. ಆಕ್ಯೂಪಂಕ್ಚರ್ ಅನ್ನು ಕಳಪೆ ಎಂಡೋಮೇಟ್ರಿಯಮ್, ಕಡಿಮೆ ಅಂಡಾಶಯದ ಮೀಸಲು ಮತ್ತು ಅನಿಗದಿತ ಮುಟ್ಟಿನ ತೊಂದರೆ ಹೊಂದಿರುವವರಿಗೆ ಚಿಕಿತ್ಸೆ ನೀಡಲು ಆಕ್ಯೂಪಂಕ್ಚರ್ ಅನ್ನು ಬಳಸಬಹುದು ಎನ್ನಲಾಗಿದೆ.

ಬಳಸುವ ಕ್ರಮ :
ಪುರುಷ ಮತ್ತು ಮಹಿಳೆಯರ ಫಲವತ್ತತೆಯಲ್ಲಿ ಪ್ರಮುಖ ಅಂಶವಾಗಿರುವ ಒತ್ತಡವನ್ನು ಕಡಿಮೆ ಮಾಡಿ ಆಕ್ಯೂಪಂಕ್ಚರ್ ಚಿಕಿತ್ಸೆ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮನುಷ್ಯರು ಒತ್ತಡದಲ್ಲಿರುವಾಗ ಮೆದುಳಿನಿಂದ ಕಾರ್ಟಿಸಾಲ್ ಹಾರ್ಮೋನ್ ಬಿಡುಗಡೆ ಆಗುತ್ತದೆ. ಇದು ಮೆದುಳಿನ ನರ ರಾಸಾಯನಿಕ ಸಮತೋಲನವನ್ನು ಬದಲಿಸುತ್ತದೆ. ಇದರಿಂದ ಹಾರ್ಮೋನ್‍ಗಳ ಮಟ್ಟ ಬದಲಾಗಿ ಪ್ರಜನನ ಆವೃತ್ತಿಯಲ್ಲಿ ಪ್ರಮುಖವಾಗಿರುವ ಪಿಟ್ಯೂಟರಿಯ ಸಮತೋಲನಕ್ಕೆ ಅಡ್ಡಿಯಾಗುತ್ತದೆ. ಚೀನಿ ವೈದ್ಯಕೀಯ ಮಹಿಳೆಗೆ ಅವರ ಜೀವನದ ಪ್ರಮುಖ ಸಮಯದಲ್ಲಿ ಬೆಂಬಲದ ಸಹಾಯ ನೀಡಬಲ್ಲದಲ್ಲದೆ ಮಾನಸಿಕ ಅಥವ ದೈಹಿಕವಾಗಿ ಆಕ್ಯೂಪಂಕ್ಚರ್ ಕೇವಲ ಗರ್ಭಧಾರಣೆಗಿಂತಲು ಹೆಚ್ಚಿನ ಸಹಾಯ ಮಾಡುತ್ತದೆ. ಬೆಳಗಿನ ಅಸ್ವಸ್ಥತೆ, ವಾಕರಿಕೆ, ನೋವುಗಳು(ಬೆನ್ನಿನ ಕೆಳಭಾಗದ ನೋವು ಮುಂತಾದವುಗಳು), ಮಗುವಿನ ಜನ್ಮಕ್ಕೆ ಸಿದ್ಧವಾಗುವ ಸಮಯದಲ್ಲಿ ಆತಂಕ, ನಿದ್ರಾಹೀನತೆ ಮುಂತಾದವುಗಳಲ್ಲಿ ಇದು ನೆರವಾಗಬಹುದು ಎಂದು ಚಿಕಿತ್ಸೆ ಪಡೆದಿರುವ ರೋಗಿಗಳು ಪ್ರತಿಕ್ರಿಯೆ ನೀಡಿರುತ್ತಾರೆ. ನಿರ್ನಾಳಗ್ರಂಥಿ ವ್ಯವಸ್ಥೆಯ ಸಮತೋಲನ ಕಾಯ್ದುಕೊಳ್ಳುತ್ತದೆ. ಚೈನೀಸ್ ವೈದ್ಯಕೀಯದಿಂದ ಬಂಜೆತನಕ್ಕೆ ಚಿಕಿತ್ಸೆಯ ಉದ್ದೇಶ ಎಂದರೆ ಕೇವಲ ಗರ್ಭಿಣಿ ಆಗುವುದಲ್ಲಷ್ಟೆ ಅಲ್ಲದೆ ಉತ್ತಮ ಆರೋಗ್ಯ ಹೊಂದಿರುವ ಮಗು ಜನಿಸುವವರೆಗೆ ಸಹಾಯವಾಗುತ್ತದೆ.

ಆಕ್ಯೂಪಂಕ್ಚರ್‍ನಿಂದ ಆಗುವ ಲಾಭಗಳು :
ಆಕ್ಯೂಪಂಕ್ಚರ್ ಅಂಡಾಶಯಗಳು ಮತ್ತು ಗರ್ಭಾಶಯಕ್ಕೆ ಹೆಚ್ಚು ಉತ್ತಮ ರಕ್ತದ ಹರಿವನ್ನು ಪೂರೈಸಬಹುದು. ಅಲ್ಲದೆ ಅಂಡವೊಂದು ಸೂಕ್ತ ಪೋಷಣೆ ಪಡೆದು ಗರ್ಭ ಧರಿಸಲು ಹೆಚ್ಚು ಸೂಕ್ತವಾದ ಅವಕಾಶ ದೊರೆಯುತ್ತದೆ. ಬಂಜೆತನಕ್ಕೆ ಕಾರಣವಾಗುವ ಒತ್ತಡದ ಹಾರ್ಮೋನ್‍ಗಳನ್ನು ಕಡಿಮೆ ಮಾಡಲು ಆಕ್ಯೂಪಂಕ್ಚರ್ ಸಹಾಯ ಮಾಡುತ್ತದೆ. ಗರ್ಭಾಶಯಕ್ಕೆ ರಕ್ತದ ಹರಿವು ಹೆಚ್ಚಾಗಲು ಆಕ್ಯೂಪಂಚರ್ ನೆರವಾಗುತ್ತದೆ. ಫಲವತ್ತತೆಯ ಹಾರ್ಮೋನ್‍ಗಳ ಪ್ಲಾಸ್ಮಾ ಮಟ್ಟಗಳಿಗೆ ಚಾಲನೆ ನೀಡುತ್ತದೆ. ಹೈಪೋಥಲಮಿಕ್ ಪಿಟುಟರಿ ಓವೇರಿಯನ್ ಆಕ್ಸಿಸ್ ಸಾಮಾನ್ಯವಾಗಲು ಸಹಾಯ ಮಾಡುತ್ತದೆ. ಕುಟುಂಬ ಯೋಜನೆ ಸುಲಭವಾಗಲು ಋತುಚಕ್ರ ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾರ್ಮೋನ್‍ಗಳ ಅಸಮತೋಲನದಿಂದಾಗಿ ಪಾಲಿಸಿಸ್ಟಿಕ್ ಒವರಿ ಸ್ಥಿತಿಯಿಂದ ಬಳಲುತ್ತಿರುವ ಮಹಿಳೆಯರಿಗೆ ಸಹಾಯ  ಮಾಡುತ್ತದೆ. ಫಲವತ್ತತೆಯ ಸಾಧ್ಯತೆಗಳನ್ನು ಕಡಿಮೆ ಮಾಡುವಂತಹ ಅಸ್ವಸ್ಥತೆ ಮತ್ತು ದೌರ್ಬಲ್ಯಗಳನ್ನು ತಡೆಯುವ ನಿರೋಧಕ ಶಕ್ತಿ ನಿರ್ಮಿಸಿಕೊಳ್ಳಲು ಸಹಾಯ ಮಾಡುತ್ತದೆ.

ಫಲಿತಾಂಶ :
ಮಹಿಳೆಯರಿಗೆ ಸೂಚಿಸಲಾಗುವ ಫಲವತ್ತತೆಯ ಔಷಧಗಳಿಂದ ಶೇ.20ರಿಂದ 60ರವರೆಗೆ ಗರ್ಭಿಣಿಯರಾಗುವ ಸಾಧ್ಯತೆಯ ದರ ಇದ್ದು, ಆಕ್ಯೂಪಂಕ್ಚರ್‍ನ ಬಂಜೆತನದ ಚಿಕಿತ್ಸೆಯಲ್ಲಿ ಅತ್ಯಂತ ಕಡಿಮೆ ಅಥವ ಯಾವುದೇ ದುಷ್ಪರಿಣಾ ಮಗಳಿರುವುದಿಲ್ಲ. ಔóಷಧಗಳು ಮಾಡುವ ಕೆಲಸದೊಂದಿಗೆ ಹೈಪೋಥಲಮಸ್‍ಗೆ ಚಾಲನೆ ನೀಡಿ ಎಂಡೋಕ್ರೈನ್ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಸಮತೋಲನ ತರುತ್ತದೆ. ಐವಿಎಫ್ ರೋಗಿಗಳಿಗೆ 8ರಿಂದ 10 ದಿನಗಳ ಸೆಷನ್‍ಗಳು ಇದ್ದರೆ ಇತರೆ ಬಂಜೆತನದ ತೊಂದರೆಗಳಿಗೆ 2ರಿಂದ 3 ಸೆಷನ್‍ಗಳನ್ನು ಶಿಫಾರಸು ಮಾಡಲಾಗುತ್ತದೆ.

Comments are closed.