ಕರಾವಳಿ

ನಕಲಿ ಚಿನ್ನಾಭರಣ ನೀಡಿ ಮಲಬಾರ್ ಗೋಲ್ಡ್ ಸಂಸ್ಥೆಗೆ ನಾಮ ಹಾಕಿದ ಮಹಿಳೆ!

Pinterest LinkedIn Tumblr

ಉಡುಪಿ: ಹಾಲ್‌ ಮಾರ್ಕ್‌ ಚಿನ್ನವೆಂದು ನಂಬಿಸಿ 83 ಸಾ.ರೂ.ಮೌಲ್ಯದ ಚಿನ್ನ ಖರೀದಿಸಿ ಮಲಬಾರ್‌ ಗೋಲ್ಡ್‌ ಸಂಸ್ಥೆಗೆ ಮಹಿಳೆಯೊಬ್ಬರು ವಂಚನೆ ಎಸಗಿರುವ ಘಟನೆ ಜ.29ರಂದು ನಡೆದಿದೆ.

(ಸಾಂದರ್ಭಿಕ ಚಿತ್ರ)

ಸರಿತಾ ಪಾಂಡೆ ಎಂಬವರು 26.440 ಗ್ರಾಂನ ಚಿನ್ನ ಸರವನ್ನು ಕೊಟ್ಟು ಬದಲಿ ಚಿನ್ನಾಭರಣ ಖರೀದಿಸುವುದಾಗಿ ತಿಳಿಸಿದ್ದರು. ಪ‌ರೀಕ್ಷಿಸಿದಾಗ 91.6 ಪರಿಶುದ್ಧತೆ ತೋರಿಸಿದ್ದು, ಹಾಲ್‌ ಮಾರ್ಕ್‌ ಕೂಡ ಇತ್ತು. ಅನಂತರ 14.01 ಗ್ರಾಂ ಪೆಂಡೆಂಟ್, 4.430 ಗ್ರಾಂ ಕಿವಿಯೋಲೆ, 3.130 ಗ್ರಾಂ ಅನ್‌ ಕಟ್ ಡೈಮಂಡ್‌ ಉಂಗುರವನ್ನು ಖರೀದಿಸಿದ್ದರು. ಉಳಿದ 2,750 ರೂ. ಮೊತ್ತವನ್ನು ಮಹಿಳೆಗೆ ನೀಡಿದರು. ಆದರೆ ಅದೇ ದಿನ ಮರು ಪರೀಕ್ಷೆ ಮಾಡಿದಾಗ ಮಹಿಳೆ ನೀಡಿರುವ ಸರದಲ್ಲಿ ತಾಮ್ರದ ಅಂಶ ಒಳಗೆ ಇರುವುದು ಪತ್ತೆಯಾಗಿದೆ. ಈ ಮಹಿಳೆ ಸಂಸ್ಥೆಗೆ ಹಾಲ್‌ ಮಾರ್ಕ್‌ ಚಿನ್ನವೆಂದು ನಂಬಿಸಿ ವಂಚನೆ ಮಾಡಿದ್ದಾರೆನ್ನಲಾಗಿದೆ.

ಈ ಬಗ್ಗೆ ಮಲಬಾರ್‌ ಗೋಲ್ಡ್‌ ಮ್ಯಾನೇಜರ್‌ ಹಫೀಜ್‌ ರೆಹಮಾನ್‌ ಅವರು ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ

Comments are closed.