ಕರಾವಳಿ

ಫ್ರಾನ್ಸ್ ಮೂಲದ ಮಹಿಳೆಗೆ ಮಂಗನ ಕಾಯಿಲೆ; ಮಣಿಪಾಲ ಕೆಎಂಸಿಗೆ ದಾಖಲು

Pinterest LinkedIn Tumblr

ಉಡುಪಿ: ಫ್ರಾನ್ಸ್‌ನ ಮಹಿಳೆಯೋರ್ವರು ಮಂಗನ ಕಾಯಿಲೆ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಶನಿವಾರ ದಾಖಲಾಗಿದ್ದಾರೆ.

33 ವರ್ಷದ ಈಕೆ ಕೆಲವು ದಿನಗಳ ಹಿಂದೆ ಉ.ಕ. ಜಿಲ್ಲೆಯ ಯಾಣ, ಗೋಕರ್ಣ ಮೊದಲಾದೆಡೆಗೆ ಪ್ರವಾಸಕ್ಕೆ ಬಂದಿದ್ದರು. ಅನಂತರ ಜ್ವರ ಕಾಣಿಸಿಕೊಂಡು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಬಳಿಕ ಕೆಎಂಸಿಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಯಾರಿಗೂ ಮಂಗನ ಕಾಯಿಲೆ ಇರುವುದು ಪತ್ತೆಯಾಗಿಲ್ಲ. ಆದರೆ ಶನಿವಾರವೂ ಜಿಲ್ಲೆಯ ಮಣಿಪುರ ಮತ್ತು ಹಳ್ಳಿಹೊಳೆಯಲ್ಲಿ ತಲಾ ಒಂದು ಮಂಗಗಳ ಶವ ಪತ್ತೆಯಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 100ಕ್ಕೂ ಅಧಿಕ ಮಂಗಗಳ ಶವಗಳು ಪತ್ತೆಯಾಗಿವೆ. ತೀರ್ಥಹಳ್ಳಿ ಲಚ್ಚು ಪೂಜಾರಿ (77) ಶುಕ್ರವಾರ ಮೃತಪಟ್ಟಿದ್ದು ಮಂಗನ ಕಾಯಿಲೆಯಿಂದ ಒಟ್ಟು ಶಿವಮೊಗ್ಗ ಜಿಲ್ಲೆಯ ಇಬ್ಬರು ಮೃತಪಟ್ಟಂತಾಗಿದೆ.

ಇದುವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಆಸುಪಾಸಿನ ಸುಮಾರು 152 ಮಂದಿ ಶಂಕಿತ ಮಂಗನ ಕಾಯಿಲೆ ರೋಗಕ್ಕೆ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 120 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. 30 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿಯ ತಪಾಸಣಾ ವರದಿ ಇನ್ನೂ ಬಾಕಿ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

Comments are closed.