ಕರಾವಳಿ

ಶಕ್ತಿನಗರದ ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸರ ದಾಳಿ : ಇಬ್ಬರು ಮಹಿಳೆಯರ ರಕ್ಷಣೆ- ಗಿರೀಶ್ ಪರಾರಿ

Pinterest LinkedIn Tumblr

ಮಂಗಳೂರು : ಶಕ್ತಿನಗರದ ಫ್ಲಾಟ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ನಡೆಸಿದ ಎಕೊನಾಮಿಕ್ ಎಂಡ್ ನಾರ್ಕೊಟಿಕ್ ಠಾಣೆ ಹಾಗೂ ಕಂಕನಾಡಿ ನಗರ ಠಾಣೆಯ ಪೊಲೀಸರು ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಕ್ತಿನಗರ ಎಂಬಲ್ಲಿನ ಫ್ಲಾಟ್ ಒಂದರಲ್ಲಿ ಗಿರೀಶ್ ಎಂಬಾತನು ಇಬ್ಬರು ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದ ಪೊಲೀಸರು ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಗಿರೀಶ್ ಎಂಬಾತನು ತಲೆ ಮರೆಸಿಕೊಂಡಿದ್ದು, ಮಹಿಳೆಯರಿಗೆ ವೇಶ್ಯಾವಾಟಿಕೆ ನಡೆಸುವಂತೆ ಪುಸುಲಾಯಿಸಿ ವೇಶ್ಯಾವಾಟಿಕೆಗೆ ಆಹ್ವಾನಿಸುತ್ತಿದ್ದ ಗಿರೀಶ್‌ ಎಂಬಾತನ ವಿರುದ್ಧ ಐ.ಟಿ.ಪಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯನ್ನು ಇಸ್‌ಸ್ಪೆಕ್ಟರ್ ರಾಮಕೃಷ್ಣ ಹಾಗೂ ಅವರ ಸಿಬ್ಬಂದಿಗಳು ಮತ್ತು ಕಂಕನಾಡಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅಶೋಕ್, ಪೊಲೀಸ್ ಉಪ ನಿರೀಕ್ಷಕರಾದ ಶ್ರೀಮತಿ ಜಾನಕಿ ಹಾಗೂ ಠಾಣಾ ಸಿಬ್ಬಂದಿಗಳು ನಡೆಸಿರುತ್ತಾರೆ.

Comments are closed.