ಕರಾವಳಿ

ವೈದ್ಯಪದ್ಧತಿ ಪ್ರಕಾರ ಟೀಂಚರ್ ಆಗಿ ಬಳಸುವ ಸರ್ಪಗಂಧ ಸಸ್ಯದ ಗುಣಗಳು

Pinterest LinkedIn Tumblr

ಸಸ್ಯಜನ್ಯವಾದ ಗಿಡಮೂಲಿಕೆಗಳಿಂದ ಹಲವು ರೋಗಗಳನ್ನು ನಿವಾರಿಸಬಹುದು ಎಂಬುದು ಅದು ಗತಕಾಲದಿಂದಲೂ ಕಂಡುಬಂದಿರುವತಂಹ ಸತ್ಯ . ಅಂಥ ಔಷಧೀಯ ಗುಣವುಳ್ಳ ಸಸ್ಯಗಳಲ್ಲಿ ಸರ್ಪಗಂಧವೂ ಒಂದು.

ಉಜ್ವಲ ಹಸಿರಿನ, ಹೊಳಪುಳ್ಳ ಎಲೆಗಳು, ಕೆಂಪು ಪುಷ್ಪಪತ್ರದ ಬಿಳಿಯ ಛಾಯೆಯ ಹೂಗಳು ಇದರ ಪ್ರಮುಖ ಲಕ್ಷಣ. ಇದು ಎರಡರಿಂದ ಮೂರು ಅಡಿ ಎತ್ತರ ಬೆಳೆಯುತ್ತದೆ.ಇದರ ಎಲೆ ನಾಲ್ಕರಿಂದ ಆರು ಅಂಗುಲ ಉದ್ದ, ಸುಮಾರು ಒಂದೂವರೆಯಿಂದ ಎರಡು ಅಂಗುಲ ಅಗಲವಿದ್ದು, ಹಸಿರು ಹೊಳಪನ್ನು ಹೊಂದಿರುತ್ತದೆ. ಹೂಗಳು ಗೊಂಚಲು ಗೊಂಚಲಾಗಿ ಬಿಡುವಂತಿದ್ದು, ಗುಲಾಬಿ ಅಥವಾ ಬಿಳಿಯ ಬಣ್ಣದಿಂದ ಕೂಡಿರುತ್ತವೆ. ಕಾಯಿಗಳು ನಾಟಿ ಬಟಾಣಿಯ ಗಾತ್ರದಲ್ಲಿದ್ದು ಪ್ರಾರಂಭದಲ್ಲಿ ಹಸಿರಾಗಿದ್ದು,ಹಣ್ಣಾದಾಗ ಕಪ್ಪುಬಣ್ಣಕ್ಕೆ ತಿರುಗುತ್ತವೆ.

ಕರ್ನಾಟಕದ ಮಲೆನಾಡು ಪ್ರದೇಶಗಳಾದ ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಹಾಗೂ ಪಶ್ಚಿಮ ಘಟ್ಟಗಳಲ್ಲಿ ಈ ಸರ್ಪಗಂದ ಸಸ್ಯವನ್ನು ಹೆಚ್ಚಾಗಿ ಕಾಣಬಹುದು.ಹಳ್ಳಿ ಜನರಿಗೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ತಿಳಿದಿರುತ್ತದೆ. ಅವರು ಈ ಗಿಡವನ್ನು ಮನೆಯ ಮುಂದಿರುವ ತುಳಸಿಯೊಂದಿಗೆ ನೆಡುತ್ತಾರೆ. ಚಿಕಿತ್ಸೆಗೆ ಇದರ ಕಹಿಯಾದ ಬೇರನ್ನು ಬಳಸುವುದರಿಂದ ಮನೆಯ ಎದುರೇ ಈ ಸಸ್ಯವನ್ನು ನೆಡುವುದು ವಾಡಿಕೆ.

ಸಾವಿರಾರು ವರ್ಷಗಳಿಂದಲೂ ಈ ಸಸ್ಯವನ್ನು ಔಷಧರೂಪವಾಗಿ ಬಳಸಲಾಗುತ್ತಿತ್ತು. ಇದರ ಬೇರಿನಲ್ಲಿ 20ಕ್ಕೂ ಹೆಚ್ಚು ವಿಧದ ರಾಸಾಯನಿಕತೆಗಳಿರುವುದರಿಂದ ಇದಕ್ಕೆ ಅನೇಕ ರೋಗಗಳನ್ನು ನಿವಾರಿಸುವ ಗುಣವಿದೆ. ಇದರ ಬೇರಿನಲ್ಲಿ ರಿಸರ್ಪಿನ್ ಎಂಬ ಸಸ್ಯಕ್ಷಾರವಿದ್ದು, ಆಯುರ್ವೇದ ಪದ್ಧತಿಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಇದು ಹೆಚ್ಚಿನ ಎಲ್ಲ ವೈದ್ಯಪದ್ಧತಿಗಳಲ್ಲೂ ಬಳಸುವ ಸಸ್ಯವಾಗಿದೆ.

ಸಸ್ಯದಲ್ಲಿರುವ ಮಹತ್ತರ ಶಕ್ತಿಗಳು:
* ಈ ಸಸ್ಯದ ಬೇರಿನಲ್ಲಿ ನಿದ್ದೆ ಬರಿಸುವ ಸ್ತಂಭನಗುಣ ಇರುವುದರಿಂದ ಅದು ಅಪಸ್ಮಾರ, ರಕ್ತದೊತ್ತಡ, ಹಾಗೆಯೇ ಕೋಪವನ್ನು ಶಮನಮಾಡುವ ಗುಣ ಹೊಂದಿದೆ.
* ಇದರ ಕಹಿ ಗುಣ ಆಯುರ್ವೇದ ವೈದ್ಯಕೀಯ ದೃಷ್ಠಿಯಲ್ಲಿ ನಂಜು,ಕಜ್ಜಿ,ತುರಿ, ಇಸುಬು, ಸರ್ಪಸುತ್ತು ಮತ್ತು ಎಲ್ಲ ಥರದ ಚರ್ಮರೋಗ ನಿವಾರಿಸುತ್ತದೆ.
* ಬ್ಯಾಕ್ಟೀರಿಯಾ, ವೈರಸ್ ಮುಂತಾದುವುಗಳಿಂದ ಉಂಟಾಗುವ ರೋಗಗಳಿಗೆ ಔಷಧವಾಗಿ ಅತ್ಯುತ್ತಮ ಪರಿಣಾಮ ಬೀರಬಲ್ಲದು.
* ಈ ಸಸ್ಯದ ಬೇರನ್ನು ಅರೆದು ಸರ್ಪಸುತ್ತಿನ ಮೇಲೆ ಹಚ್ಚುವುದರಿಂದ ಕಾಯಿಲೆ ಬೇಗ ನಿವಾರಣೆಯಾಗುತ್ತದೆ.
* ಮಾನಸಿಕ ಮತ್ತು ನರಮಂಡಲದ ರೋಗಗಳನ್ನು ನಿವಾರಿಸುವ ಶಕ್ತಿ ಈ ಸಸ್ಯಕ್ಕಿದೆ.
* ಹಾವಿನ ಕಡಿತ, ಚೇಳು, ಬೆಕ್ಕು, ಇಲಿಯಂತಹ ವಿಷಜಂತುಗಳ ಕಡಿತಕ್ಕೂ ಇದು ದಿವ್ಯೌಷಧವಾಗಿದೆ.

ಸರ್ಪಗಂಧವು ಆಯಂಟಿಬಯೋಟಿಕ್ ಮತ್ತು ಸ್ಟೆರೈಡ್ಸ್ ನಂತೆ ಕೆಲಸ ಮಾಡುತ್ತದೆ. ಆದರೆ ಇತರೆ ಸ್ಟೆರೈಡ್ ಗಳಂತೆ ದುಷ್ಪರಿಣಾಮ ಬೀರುವುದಿಲ್ಲ. ಇದನ್ನು ಹೋಮಿಯೋಪಥಿ ವೈದ್ಯಪದ್ಧತಿ ಪ್ರಕಾರ ಟೀಂಚರ್ ಮಾಡಿ ಬಳಸಿದಲ್ಲಿ ಶೀಘ್ರ ಪರಿಣಾಮ ಬೀರುತ್ತದೆ

Comments are closed.