ಕರಾವಳಿ

ಭಾರತದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅತ್ಯದ್ಭುತ ಬಜೆಟ್ : ವೇದವ್ಯಾಸ್ ಕಾಮತ್

Pinterest LinkedIn Tumblr

ಮಂಗಳೂರು : ಭಾರತದ ಇತಿಹಾಸದಲ್ಲೇ ಸಾಮಾಜಿಕ ಕಳಕಳಿಯಿಂದ ಕೂಡಿದ ಬಜೆಟ್ ಇದಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.

2019-20ರ ಸಾಲಿನ ಕೊನೆಯ ಬಜೆಟನ್ನು ರೈತರಿಗೆ,ಮಧ್ಯಮ ವರ್ಗದ ಜನರಿಗೆ ವಿಶೇಷ ಆಸ್ಥೆ ವಹಿಸಿ ಸಿದ್ಧಪಡಿಸಿದ ಹಾಗಿದೆ ಎಂದಿದ್ದಾರೆ.

ಹಾಗೆಯೇ ಕರಾವಳಿ ಭಾಗವನ್ನೂ ವಿಶೇಷವಾಗಿ ಪರಿಗಣಿಸಿ ಪ್ರತ್ಯೇಕ ಮೀನುಗಾರಿಕಾ ಇಲಾಖೆ ಸ್ಥಾಪನೆ,ಮೀನುಗಾರರ ಆರ್ಥಿಕ ಸುಧಾರಣೆಗಾಗಿ ಮತ್ತು ಪಶು ಸಂಗೋಪನಾ ಕ್ಷೇತ್ರಕ್ಕೂ ಶೇಖಡ 2 ರಷ್ಟು ಬಡ್ಡಿ ವಿನಾಯಿತಿ,ಸಾಗರಮಾಲಾ ಯೋಜನೆಯ ಮೂಲಕ ಬಂದರು ಅಭಿವೃದ್ಧಿಯನ್ನು ವಿಶೇಷವಾಗಿ ಪರಿಗಣಿಸಿದ ಪ್ರಧಾನಿ ನರೇಂದ್ರ ಮೋದಿ,ವಿತ್ತ ಸಚಿವರಾದ ಅರುಣ್ ಜೇಟ್ಲಿ ಮತ್ತು ಬಜೆಟ್ ಮಂಡಿಸಿದ ಪಿಯೂಷ್ ಗೋಯಲ್ ಅವರಿಗೆ ಕರಾವಳಿಗರ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಹಾಗೆಯೇ ರೈತರ ಸಂಕಷ್ಟವನ್ನು ಮನದಲ್ಲಿಟ್ಟುಕೊಂಡು ಎರಡು ಹೆಕ್ಟೇರ್ ಭೂಮಿಯಿರುವ ರೈತನ ಖಾತೆಗೆ 6 ಸಾವಿರ ಸಹಾಯಧನ,ರೈತರ ಸಾಲಕ್ಕೆ ಶೇಯಡ 2 ರಷ್ಟು ಬಡ್ಡಿ ವಿನಾಯಿತಿ,ಅಸಂಘಟಿತ ವಲಯದ 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಪ್ರಧಾನಮಂತ್ರಿ ಶ್ರಮಯೋಗಿ ಯೋಜನೆಯಡಿ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣಿ ನೀಡುವ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ಜನರ ಬಗ್ಗೆ ಕಾಳಜಿ ವಹಿಸಿ ಬಜೆಟ್ ಘೋಷಿಸಲಾಗಿದೆ ಎನ್ನುವುದು ನಿಜಕ್ಕೂ ಸಂತೋಷದ ವಿಚಾರ.

ಗೃಹ ಸಾಲ 3 ಲಕ್ಷದ ವರೆಗೆ ತೆರಿಗೆ ವಿನಾಯಿತಿ,ಗೃಹ ಯೋಜನೆಗಳಿಗೆ ತೆರಿಗೆ ವಿನಾಯಿತಿ ಮಿತಿ 1 ವರ್ಷ ವಿಸ್ತರಣೆ,ಮಾರಾಟವಾಗದ ಮನೆ,ಅಪಾರ್ಟ್ಮೆಂಟ್ ಗಳಿಗೆ ತೆರಿಗೆ ವಿನಾಯಿತಿ,ಮನೆ ಬಾಡಿಯ ಮೇಲೆ ಸೆಸ್ ಇಳಿಕೆ,ಇ.ಎಸ್.ಐ ಸೌಲಭ್ಯ ಪಡೆಯುವ ವೇತನ ಮಿತಿ 15 ಸಾವಿರದಿಂದ 21 ಸಾವಿರಕ್ಕೆ ಏರಿಸಿರುವುದು,ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಹೆಚ್ಚಿಸಿರುವುದರಿಂದ ಎಲ್ಲರಿಗೂ ತೃಪ್ತಿದಾಯಕ ಎನಿಸುವ ಬಜೆಟ್ ಇದಾಗಿದೆ.

ದೇಶದ ಭದ್ರತೆಯ ದೃಷ್ಠಿಯಲ್ಲಿ ರಕ್ಷಣಾ ವಲಯಕ್ಕೆ 3 ಲಕ್ಷ ಕೋಟಿ ಘೋಷಿಸಿರುವುದು ಸುರಕ್ಷತೆಯ ದೂರದೃಷ್ಠಿಯನ್ನು ತೋರಿಸುತ್ತದೆ.ದೇಶದಲ್ಲಿ 100 ಹೊಸ‌ವಿಮಾನ ನಿಲ್ದಾಣ ನಿರ್ಮಾಣ,ಉಡಾನ್ ಯೋಜನೆಯ ಮೂಲಕ ಮದ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ವಿಮಾನ ಯಾನ ಸೌಲಭ್ಯ,ಗ್ರಾಮೀಣ ಭಾಗದ 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ,ಆಹಾರ ಪದಾರ್ಥಗಳಿಗೆ ಸಬ್ಸಿಡಿ ದ್ವಿಗುಣಗೊಳಿಸಿರುವುದು,36 ದಿನಬಳಕೆಯ ವಸ್ತುಗಳ ಮೇಲಿನ ಜಿ.ಎಸ್ಟಿ ಇಳಿಸಿರುವುದು,ಹಿರಿಯ ನಾಗರಿಕರಿಗೆ 6.5 ಲಕ್ಷ ತೆರಿಗೆ ವಿನಾಯಿತಿ,ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ಮೂಲಕ ಪ್ರತಿಯೊಬ್ಬ ನಾಗರಿಕರನಿಗೂ ಅನ್ವಯಿಸುವಂತಹ ಬಜೆಟ್ ಮಂಡಿಸಿದ ಕೇಂದ್ರ ಸರಕಾರಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುವುದಾಗಿ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ

Comments are closed.