ಕರಾವಳಿ

ಆಕ್ರಮ ಮರದ ದಿಮ್ಮಿಗಳ ಸಾಗಾಟ : ವಾಹನ ಸಹಿತಾ 2.50 ಲಕ್ಷ ರೂ. ಮೌಲ್ಯದ ಸೊತ್ತು ವಶ

Pinterest LinkedIn Tumblr

ಮಂಗಳೂರು ಫೆಬ್ರವರಿ 1 : ಬಂಟ್ವಾಳ ತಾಲೂಕು, ರಾಷ್ಟ್ರೀಯ ಹೆದ್ದಾರಿ 73 ರ ತುಂಬೆ ಎಂಬಲ್ಲಿ ಮರದ ದಿಮ್ಮಿಗಳನ್ನು ವಾಹನದಲ್ಲಿ ಹೇರಿಕೊಂಡು ಯಾವೂದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರು ವಾಹನ ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಟ್ವಾಳ ತಾಲೂಕು, ರಾಷ್ಟ್ರೀಯ ಹೆದ್ದಾರಿ 73 ರ ತುಂಬೆ ಎಂಬಲ್ಲಿ ಜನವರಿ 30ರಂದು ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸುತ್ತಿದ್ದಾಗ ಸ್ವರಾಜ್ ಮಜ್ದಾ ಟೆಂಪೋ ವಾಹನ ನೊಂದಣೆ ಸಂಖ್ಯೆ: ಕೆಎ-21-1828ರಲ್ಲಿ ಮತ್ತಿ, ಮಾವು, ಅಂಡಿಪುನಾರ್ ಜಾತಿಯ ಮರದ ದಿಮ್ಮಿಗಳನ್ನು ಹೇರಿಕೊಂಡು ಸಾಗಾಟ ಮಾಡುತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ವಾಹನ ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದು ಅರಣ್ಯ ಮೊಕದ್ದಮೆಯನ್ನು ದಾಖಲಿಸಿರುತ್ತಾರೆ.

ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಹೆಚ್ ಆರ್ ಸುಬ್ರಹ್ಮಣ್ಯ ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿಯಾದ ಪ್ರವೀಣ್ ಕುಮಾರ್ ಶೆಟ್ಟಿ ಪಿ.ಎನ್, ಇವರ ನೇತ್ರತ್ವದಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ವಿಕಾಶ್ ಶೆಟ್ಟಿ. ಕೆ, ಯಶೋಧರ ಕೆ., ರಾಜಶೇಖರ್ ಕ್ಯಾತ್ನಾರ್, ಸಂಜು ಡಿ. ಲಮಾಣಿ, ಹಾಗೂ ವಾಹನ ಚಾಲಕ ಜಯಪ್ರಕಾಶ್ ಕಾರ್ಯಚರಣೆ ನಡೆಸಿರುತ್ತಾರೆ.

ಲಾರಿ ಚಾಲಕ ಗೋಪಾಲಕೃಷ್ಣ, ಎಂಬವರನ್ನು ವಿಚಾರಿಸಿದಂತೆ ಸದ್ರಿ ಸೊತ್ತನ್ನು ಬಂಟ್ವಾಳ ತಾಲೂಕು, ಕುರಿಯಾಳ ಗ್ರಾಮದಿಂದ ಕಡಿದು ವಾಹನದಲ್ಲಿ ತುಂಬಿಸಿ ಸಾಗಿಸುತ್ತಿರುವುದಾಗಿ ತಿಳಿಸಿರುತ್ತಾನೆ. ವಶಪಡಿಸಿಕೊಂಡ ವಾಹನ ಹಾಗೂ ಸೊತ್ತಿನ ಮೌಲ್ಯ ರೂ. 2.50 ಲಕ್ಷ ಅಂದಾಜಿಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಅರಣ್ಯ ಸಂಚಾರಿ ದಳ(ಜಾಗೃತ) ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.