ಕರಾವಳಿ

ನೆನಪಿನ ಶಕ್ತಿ ಹೆಚ್ಚು ಮಾಡುವುದರಲ್ಲಿ ಪಾಲಕ್ ಸೋಪ್ಪಿನ ಪಾತ್ರ ಏನು..ಬಲ್ಲಿರಾ.?

Pinterest LinkedIn Tumblr

ಪ್ರತಿಯೊಬ್ಬರಿಗೂ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಡವಾಗಿರುವಲ್ಲಿ ಹಣ್ಣು,ತರಕಾರಿಗಳು ಹಾಗೂ ಸೊಪ್ಪು ಬಹಳ ಮುಖ್ಯ ಪಾತ್ರವಹಿಸುತ್ತದೆ. ಅದರಲ್ಲೂ ಪಾಲಾಕ್ ಸೊಪ್ಪು ಬಹಳಮುಖ್ಯವಾಗಿದೆ ಎಂಬುವುದನ್ನು ನಾವು ಈ ಸಮಯದಲ್ಲಿ ತಿಳಿಯೊಣ.

ಪಾಲಾಕ್ ಸೊಪ್ಪಿನಲ್ಲಿ ವಿವಿಧ ರೀತಿಯ ವಿಟಮಿನ್ ಗಳನ್ನು ಕಾಣಬಹುದು ಅದರಲ್ಲಿ ಎ ಹಾಗೂ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಕೂದಲು ಉದುರುವುದನ್ನು ತಡೆದು ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಆಹಾರದಲ್ಲಿ ಪಾಲಾಕ್ ಸೊಪ್ಪನ್ನು ನಾವು ಹೆಚ್ಚಾಗಿ ಬಳಸುವುದರಿಂದ ನಮ್ಮ ಮುಖದಲ್ಲಿನ ಮೊಡವೆಗಳು ಹಾಗೂ ಮುಖದ ಮೇಲಿನ ಸುಕ್ಕುಗಳು ಮಾಯವಾಗಿ ಮುಖದಲ್ಲಿನ ಕಾಂತಿ ಹೆಚ್ಚಾಗುತ್ತದೆ.

ನಮ್ಮ ದೇಹಕ್ಕೆ ಬೇಕಾಗಿರುವ ವಿಟಮಿನ್ ಅಂಶವು ಹೆಚ್ಚಾಗಿರುವುದರಿಂದ ಕಣ್ಣಿನ ದೃಷ್ಟಿ ಹೀನತೆ ಹಾಗೂ ರಕ್ತದೊತ್ತಡ ಸಮಸ್ಯೆಗೆ ಪಾಲಾಕ್ ಸೊಪ್ಪು ಅತ್ತೀ ಹೆಚ್ಚು ಪಾತ್ರವಹಿಸುತ್ತದೆ.

ಪಾಲಾಕ್ ಸೊಪ್ಪಿನ ಸುಮಾರು 4 ರಿಂದ 5 ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿ ಅದರ ರಸವನ್ನು ದಿನ ಸೇವಿಸುವುದರಿಂದ ರಕ್ತ ಹೀನತೆ ನಿವಾರಣೆಯಾಗುತ್ತದೆ. ಆಹಾರದಲ್ಲಿ ಪಾಲಾಕ್ಸೊಪ್ಪನ್ನು ಬಳಸುವುದರಿಂದ ಮಕ್ಕಳು ಮತ್ತು ವಯೊವೃಧ್ಧರ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಾಮಾನ್ಯವಾಗಿ ವ್ಯಕ್ತಿಯ ದೇಹವು ದಿನದಿಂದ ದಿನಕ್ಕೆ ವಯಸ್ಸು ಕಳೆದಂತೆ ನರ ದೌರ್ಬಲ್ಯವಾಗುತ್ತದೆ ಇದನ್ನು ತಡೆಯಲು ಪಾಲಕ್ ಸೊಪ್ಪು ತುಂಬ ಶ್ರಮ ವಹಿಸಿ ಆರೋಗ್ಯವನ್ನು ತುಂಬ ಚೆನ್ನಾಗಿಇಡುತ್ತದೆ. ಪಾಲಾಕ್ ಸೋಪ್ಪು ಬಹಳ ಭಯಾನಕ ರೋಗವಾದ ಕ್ಯಾನ್ಸರ್ ನ್ನು ಸಹ ಬಹಳ ಸುಲಭವಾಗಿ ನಿಯಂತ್ರಣ ಮಾಡುವ ಗುಣ ಹೊಂದಿದೆ.

ವ್ಯಕ್ತಿಯ ಜೀವನ ಶೈಲಿಯಲ್ಲಿ ದೇಹವು ಮಾನ ಬಂದತೆ ಬೆಳವಣೆಗೆ ಹೊಂದಿರುವ ಹಿನ್ನಲೇ ದೇಹದ ತೂಕ ಹೆಚ್ಚುತ್ತಿದೆ. ದೇಹದಲ್ಲಿರುವ ವ್ಯರ್ಥ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವು ದರಲ್ಲಿ ಪಾಲಕ್ ಸೊಪ್ಪು ತುಂಬ ಯೋಗ್ಯವಾಗಿದೆ. ನಿಮ್ಮಲ್ಲಿ ಬಹಳ ನೆನಪಿನ ಶಕ್ತಿ ಕಡಿಮೆಯಾಗುತ್ತಿದ್ದರೆ ನೀವು ಪಾಲಕ್ ಸೋಪ್ಪನ್ನು ನೆನಪಿನ ಶಕ್ತಿ ಹೆಚ್ಚು ಮಾಡುವುದರಲ್ಲಿ ತುಂಬ ಪಾತ್ರ ವಹಿಸುತ್ತದೆ. ಅದರಲ್ಲೂ ಹೆಚ್ಚು ನಾರಿನಂಶ ಹಾಗೂ ನೀರಿನಂ ಶವನ್ನು ನಾವು ಪಾಲಾಕ್ ಸೊಪ್ಪಿನಲ್ಲಿ ಇರುವುದರಿಂದ ಜೀರ್ಣಶಕ್ತಿಗೆ ಹೆಚ್ಚು ಆದ್ಯತೆ ನೀಡುತ್ತದೆ.

Comments are closed.