ಕರಾವಳಿ

ವಾರಕ್ಕೊಮೆ ಈ ರೀತಿಯ ರಸಂ ಮಾಡಿ ಸವಿಯಿರಿ ಆರೋಗ್ಯವನ್ನು ಕಾಪಾಡಿ..!

Pinterest LinkedIn Tumblr

ನೀವು ಪ್ರತಿದಿನ ಮಾಡುವಂತ ಅಡುಗೆಗಳು ನಮ್ಮ ದೇಹದ ಮೇಲೆ ಹಾಗು ಆರೋಗ್ಯದ ಮೇಲೆ ಪ್ರಭಾವ ಬಿರುತ್ತಿರುತ್ತದೆ. ಸೇವಿಸುವಂತ ಆಹಾರ ಉತ್ತಮ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ದೇಹದ ಬೆಳವಣಿಗೆಗೆ ಪೂರಕವಾಗಿರುತ್ತದೆ.

ಮನೆಯಲ್ಲಿ ಹಲವು ರೀತಿಯ ಹೊಸ ಬಗೆಯ ಅಡುಗೆಗಳನ್ನು ಮಾಡುತ್ತಿರುತ್ತೀರ, ಅವುಗಳ ಜೊತೆಗೆ ವಾರಕ್ಕೊಮೆ ಅಥವಾ ಎರಡು ಬಾರಿ ಈ ರೀತಿಯ ರಸಂಮಾಡಿ ಸವಿಯಿರಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಷ್ಟಕ್ಕೂ ಆ ರಸಂ ಯಾವುದು ಅದನ್ನು ಹೇಗೆ ಮಾಡಬೇಕು? ಅನ್ನೋದನ್ನ ತಿಳಿಸುತ್ತೇವೆ ನೋಡಿ.

ಇದು ವಿಳ್ಳೇದೆಲೆಯಿಂದ ತಯಾರಿಸುವ ರಸಂ ಆಗಿದೆ, ಈ ರಸಂ ಶೀತ ಕೆಮ್ಮು ನೆಗಡಿ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ವಿಳ್ಳೇದೆಲೆಯಲ್ಲಿ ಕ್ಯಾಲಿಷಿಯಂ, ಪ್ರೊಟೀನ್, ಐರಾನ್, ಮುಂತಾದ ಪೋಷಕಾಂಶಗಳಿವೆ ಆಗಾಗಿ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ.

ತಯಾರಿಸಲು ಬೇಕಾಗುವ ಪದಾರ್ಥ:
ಒಣಮೆಣಸಿನಕಾಯಿ ಎರಡು
ಬೆಳ್ಳುಳಿ ಎಸಳು4-5
ಕಾಳುಮೆಣಸು 8-9
ಅರ್ಧ ಚಮಚ ಜೀರಿಗೆ
2-3 ವಿಳ್ಳೇದೆಲೆ
2 ಟೊಮೊಟೊ
ಹುಣಸೆಹಣ್ಣಿನ ರಸ ಸ್ವಲ್ಪ

ತಯಾರಿಸುವ ವಿಧಾನ: ಮೊದಲು ಬೆಳ್ಳುಳ್ಳಿ, ಕಾಳಿಮೆಣಸು, ಜೀರಿಗೆ,ಒಣಮೆಣಸಿಕಾಯಿ, ವಿಳ್ಳೇದೆಲೆ ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ, ಇದರ ಜೊತೆಗೆ ಟೊಮೊಟೊವನ್ನು ರುಬ್ಬಿಕೊಳ್ಳಿ ಹಾಗು ಸ್ವಲ್ಪ ಹುಣಸೆ ಹಣ್ಣಿನ ರಸವನ್ನು ಪಕ್ಕದಲ್ಲೇ ಇಟ್ಟುಕೊಳ್ಳಿ. ನಂತರ ಒಲೆಯ ಮೇಲೆ ಒಂದು ಪಾತ್ರೆಯನ್ನು ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಮೇಲೆ ಪುಡಿ ಮಾಡಿಕೊಂಡ ಮಿಶ್ರಣವನ್ನು ಹಾಕಿ ಹುರಿಯಿರಿ.

ಜೊತೆಗೆ ರುಬ್ಬಿಕೊಂಡಿರುವ ಟೊಮೊಟೊ ಹಾಗು ಹುಣಸೆ ಹಣ್ಣಿನ ರಸ ಹಾಗು ಉಪ್ಪನ್ನು ರುಚಿಗೆ ತಕ್ಕಷ್ಟು ಹಾಕಿ ಕುದಿಸಿ ಕುದಿಯುತ್ತಿರುವ ಸಂದರ್ಭದಲ್ಲಿ ಸ್ವಲ್ಪ ಕರಿಬೇವು ಹಾಗು ಕೊತ್ತಂಬರಿಯನ್ನು ನುಣ್ಣಗೆ ಕಟ್ಮಾಡಿ ಹಾಕಿ ನಂತರ 5 ರಿಂದ 10 ನಿಮಿಷ ಕುದಿಸಿದ ನಂತರ ಒಲೆಯಿಂದ ಕೆಳಗಿಳಿಸಿ. ಇದನ್ನು ಅನ್ನದ ಜೊತೆಯಲ್ಲೂ ಸವಿಯಬಹುದು ಹಾಗು ಹಾಗೆ ಸೂಪ್ ರೀತಿಯಲ್ಲಿ ಕೂಡ ಸೇವಿಸಬಹುದು.

Comments are closed.