ಕರಾವಳಿ

ಹೈಪರ್ ಪಿಗ್ಮಂಟೇಷನ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಮನೆ ಮದ್ದು

Pinterest LinkedIn Tumblr

ವಾತಾವರಣದಲ್ಲಿ ಉಂಟಾಗುವ ವ್ಯತ್ಯಾಸಗಳಿಂದ ಚರ್ಮದಲ್ಲಿ ಬಣ್ಣದಲ್ಲಿ ಕಂಡುಬರುವ ಬದಲಾವಣೆಗಳನ್ನು ಹೈಪರ್ ಪಿಗ್ಮಂಟೇಷನ್ ಎನ್ನುತ್ತಾರೆ. ಇದೂ ಒಂದು ರೀತಿಯ ಚರ್ಮದ ಸಮಸ್ಯೆಯೇ. ಇದೀಗ ಬೇಸಿಗೆ ಹತ್ತಿರವಾಗುತ್ತಿದ್ದು, ಚರ್ಮದ ಬಣ್ಣವು ಕಪ್ಪಗೆ ಬದಲಾಗುವುದನ್ನು ಯಾರೂ ಇಷ್ಟಪಡುವುದಿಲ್ಲ. ಮುಖ್ಯವಾಗಿ ಹೊರಗೆ ಓಡಾಡುವ ಮಹಿಳೆಯರು, ಯುವಕರು ಇದರಿಂದ ಚಿಂತೆಗೊಳಗಾಗುತ್ತಾರೆ. ಈ ಸಮಸ್ಯೆಯಿಂದ ಹೊರಬೀಳಲು ಅದ್ಭುತವಾದ, ಶಕ್ತಿಯುತವಾದ ಮನೆ ಮದ್ದು ಇದೆ. ಇದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್ ಇರುವುದಿಲ್ಲ. ತಡ ಮಾಡದೆ ಅದು ಏನೆಂದು ತಿಳಿಯೋಣ ಬನ್ನಿ…..

ಬೇಕಾಗುವ ಪದಾರ್ಥಗಳು :-
ಕಡಲೇಹಿಟ್ಟು-2 ಚಮಚ, ತಕ್ಕಷ್ಟು ಹಾಲು,

ಮಾಡುವ ವಿಧಾನ :-

1. ಕಡಲೇಹಿಟ್ಟನ್ನು ಹಾಲಿನೊಂದಿಗೆ ಬೆರೆಸಿ ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು, 1/2 ಗಂಟೆಯ ನಂತರ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯುವುದರಿಂದ ಚರ್ಮದ ಪಿಗ್ಮೆಂಟೇಷನ್ ಕಡಿಮೆ ಆಗುತ್ತದೆ. ಹೀಗೆ ವಾರಕ್ಕೆ 2 ಬಾರಿ ಮಾಡಿದಲ್ಲಿ 1 ತಿಂಗಳಲ್ಲೇ ಚರ್ಮದ ಬಣ್ಣ ಬದಲಾಗುತ್ತದೆ. ಆದ್ದರಿಂದಲೇ ಹಲವು ಜನರು ಸಾಬೂನಿನ ಬದಲಾಗಿ ಕಡಲೇಹಿಟ್ಟನಿಂದ ಸ್ನಾನ ಮಾಡುತ್ತಾರೆ.

2.ಚರ್ಮವು ಕಪ್ಪಗೆ ಕಾಣುವ ಸ್ಥಳಗಳಲ್ಲಿ ಹಾಲನ್ನು ಹಚ್ಚಿ 10-15 ನಿಮಿಷಗಳ ನಂತರ ಹತ್ತಿಯಿಂದ ಒರೆಸಬೇಕು. ಒಳ್ಳೆಯ ಫಲಿತಾಂಶ ಕಾಣುವವರೆಗೂ ಕ್ರಮ ತಪ್ಪದೆ ಹೀಗೆ ಮಾಡಬೇಕು. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಚರ್ಮದ ಪಿಗ್ಮೆಂಟೇಷನ್ ಅನ್ನು ನಿವಾರಣೆ ಮಾಡುವುದಲ್ಲದೆ ಚರ್ಮಕ್ಕೆ ಯಾವುದೇ ರೀತಿಯ ಹಾನಿ ಉಂಟಾಗದೆ ಚರ್ಮ ಮೃದುವಾಗಿರುತ್ತದೆ.

3.ನಿಂಬೆರಸವನ್ನು ಹಚ್ಚಿಕೊಂಡು 15-20 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ಸ್ವಚ್ಛಗೊಳಿಸಬೇಕು. ಇದು ಬ್ಲೀಚಿಂಗ್ ಏಜೆಂಟ್ ನಂತೆ ಕಾರ್ಯ ನಿರ್ವಹಿಸುವುದಲ್ಲದೆ ಚರ್ಮವನ್ನು ಮೃದುವಾಗಿ, ಕಾಂತಿಯುತವಾಗಿರಿಸುತ್ತದೆ.

4.ಹೈಪರ್ ಪಿಗ್ಮೆಂಟೇಷನ್ ಸಮಸ್ಯೆಗೆ ಮುಖ್ಯ ಕಾರಣ ಒಣಗಿದ ಚರ್ಮ. ಇಂತಹ ಚರ್ಮಕ್ಕೆ ಅಲೋವೆರ ಜೆಲ್ ಅದ್ಭುತವಾಗಿ ಕೆಲಸಮಾಡುತ್ತದೆ. ಪ್ರತಿ ದಿನ ರಾತ್ರಿ ಮಲಗುವ ಮೊದಲು ಅಲೋವೆರ ಹಚ್ಚುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

5.ಸ್ಟ್ರಾಬೆರ್ರಿಯಲ್ಲಿರುವ ಆಸಿಡ್ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಸ್ಟ್ರಾಬೆರ್ರಿಯನ್ನು ಮೃದುವಾಗಿ ಅರೆದು ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿಕೊಂಡ 1/2 ಗಂಟೆಯ ನಂತರ ತಣ್ಣನೆಯ ನೀರಿನಿಂದ ಶುಭ್ರಗೊಳಿಸುವುದರಿಂದ ಸ್ಕಿನ್ ಪಿಗ್ಮೆಂಟೇಷನ್ ನಿವಾರಣೆಯಾಗುತ್ತದೆ.

6.ಪಪ್ಪಾಯಿ ಹಣ್ಣಿನಲ್ಲಿ ಎಂಜೈಮ್ಸ್ ಅಧಿಕವಾಗಿರುತ್ತವೆ. ಪಪ್ಪಾಯಿ ಹಣ್ಣನ್ನು ಮೃದುವಾಗಿ ಹಿಸುಕಿ ಆ ಪೇಸ್ಟ್ ಅನ್ನು ಪ್ಯಾಕ್ ನಂತೆ ಮುಖಕ್ಕೆ ಹಚ್ಚಿಕೊಂಡ 1 ಗಂಟೆಯ ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳುವುದರಿಂದ ಸ್ಕಿನ್ ಪಿಗ್ಮೆಂಟೇಷನ್     ನಿವಾರಣೆಯಾಗುತ್ತದೆ.

Comments are closed.