ಕುಂದಾಪುರ: ತಾಲೂಕಿನಲ್ಲಿ ನಡೆಯುತ್ತಿರುವ ಹೆದ್ದಾರಿ ಚತುಷ್ಪತ ಅವೈಜ್ನಾನಿಕ ಕಾಮಗಾರಿಯಿಂದಾಗಿ ತಡರಾತ್ರಿ ಅವಘಡವೊಂದು ನಡೆದಿದೆ. ಇಲ್ಲಿನ ಬಸ್ರೂರು ಮೂರುಕೈಯ ಬೊಬ್ಬರ್ಯನ ಕಟ್ಟೆ ಬಳಿ ಮಂಗಳವಾರ ರಾತ್ರಿ ಲಾರಿ ಮಗುಚಿ ಬಿದ್ದಿದೆ.

ಮೂರುಕೈ ಪ್ರದೇಶದಲ್ಲಿ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು, ಇಕ್ಕಟ್ಟಾದ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿವೆ. ಪಕ್ಕದಲ್ಲಿ ಫ್ಲೈಓವರ್ ನಿರ್ಮಾಣಕ್ಕಾಗಿ ಉದ್ದಕ್ಕೂ ಹೊಂಡ ತೆಗೆದಿದ್ದು, ಮಂಗಳೂರಿನಿಂದ ಕೋಕ್ ತುಂಬಿಕೊಂಡು ಬರುತ್ತಿದ್ದ 12 ಚಕ್ರದ ಲಾರಿ ನಿಯಂತ್ರಣ ತಪ್ಪಿ ಆ ಹೊಂಡದಲ್ಲಿ ಬಿದ್ದಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿದ್ದರು.
Comments are closed.