ಕರಾವಳಿ

ನಾಪತ್ತೆಯಾದ ಬೋಟ್ ಸುಳಿವು ಅಲಭ್ಯ: ಹುಡುಕಾಟಕ್ಕೆ ತೆರಳಿದ ತಂಡಗಳು ವಾಪಸ್‌

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾ ಪೊಲೀಸರ ನೇತೃತ್ವದಲ್ಲಿ ಮಹಾರಾಷ್ಟ್ರದ ರತ್ನಾಗಿರಿ, ಸಿಂಧುದುರ್ಗಾ ಮತ್ತು ಗೋವಾ ನದಿ ತೀರದಲ್ಲಿ ಶೋಧ ಕಾರ್ಯಕ್ಕೆ ತೆರಳಿದ್ದ 2 ತಂಡಗಳು ಯಾವುದೇ ಸುಳಿವು ಸಿಗದೆ ಸೋಮವಾರ ರಾತ್ರಿ ಅಲ್ಲಿಂದ ಹಿಂದಿರುಗಿವೆ.

ಸೋಮವಾರ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಮುಖ್ಯ ಕಾರ್ಯದರ್ಶಿ ಮಂಜುನಾಥ್‌ ನಾಯಕ್‌ ಉಡುಪಿಗೆ ಆಗಮಿಸಿ ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳು ಮತ್ತು ಮೀನುಗಾರರ ಸಭೆ ನಡೆಸಿದ್ದಾರೆ. ಇಸ್ರೊಗೆ ಈಗಾಗಲೇ ಪತ್ರ ಬರೆಯಲಾಗಿದ್ದು ಅವರು ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ. ಬೋಟ್ ಮುಳುಗಡೆಗೊಂಡಿದೆಯೋ ಎಂದು ತಿಳಿಯಲು ಸಮುದ್ರದ ಅಡಿ ಭಾಗದಲ್ಲಿ ಶೋಧಿಸಬಲ್ಲ ನೌಕಾಪಡೆಯ ‘ಸೋನಾರ್‌’ ಹಡಗನ್ನು ತರಿಸಲಾಗಿದ್ದು, ಮಹಾರಾಷ್ಟ್ರ ಮತ್ತು ಗೋವಾ ಭಾಗದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

Comments are closed.