ಕರಾವಳಿ

ಕಟ್ಟಡ ನಿರ್ಮಾಣ ಸಾಮಾಗ್ರಿ ಸಾಗಾಟ ಸ್ಥಗಿತಗೊಳಿಸಿ ಟಿಪ್ಪರ್ ಮಾಲಕರ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ಗಣಿಗೆ ಸಂಬಂಧಿಸಿದ ಕಟ್ಟಡ ನಿರ್ಮಾಣ ಸಾಮಗ್ರಿ ಸ್ಥಗಿತಗೊಳಿಸಲಾಗಿದೆ ಎಂದು ಟಿಪ್ಪರ್‌ ಮಾಲಕರ ಸಂಘದ ಪ್ರಕಟನೆ ತಿಳಿಸಿದೆ.

ಜಿಲ್ಲಾಡಳಿತ ಗಣಿಗೆ ಸಂಬಂಧಿಸಿದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಾಟಕ್ಕೆ ನಿರ್ಬಂಧ ಹೇರಿದ್ದು ಪ್ರಸ್ತುತ ಪೊಲೀಸ್‌ ಇಲಾಖೆ ಕೇವಲ ಕೆಲವೇ ಟಿಪ್ಪರ್‌ಗಳನ್ನು ಮುಟ್ಟುಗೋಲು ಹಾಕುತ್ತಿದೆ. ಬಡ ಟಿಪ್ಪರ್‌ ಮಾಲಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದೇ ರೀತಿ ಮುಂದುವರಿದರೆ ಬದುಕು ಸಾಗಿಸುವುದು ಕಷ್ಟ. ಒಂದೋ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ತಮ್ಮ ವ್ಯಾಪ್ತಿಗೆ ಬರುವ ಎಲ್ಲ ಪರವಾನಗಿ ಇಲ್ಲದೆ ಸಂಚರಿಸುವ ವಾಹನಗಳನ್ನೂ ಮುಟ್ಟುಗೋಲು ಹಾಕಬೇಕು. ಇಲ್ಲದಿದ್ದರೆ ಈವರೆಗೆ ನಡೆದುಬಂದಂತೆ ಸಹಕಾರ ನೀಡಬೇಕು.

ಈ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ಟಿಪ್ಪರ್‌ ಮಾಲಕರು ತಮ್ಮ ಎಲ್ಲ ಟಿಪ್ಪರ್‌ಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಕುಂದಾಪುರ ಟಿಪ್ಪರ್‌ ಮಾಲಕರ ಸಂಘದವರು ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ, ಕುಂದಾಪುರ ಸರ್ಕಲ್‌ ಇನ್ಸ್‌ಪೆಕ್ಟರ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ಗೆ ಮನವಿ ನೀಡಿದ್ದಾರೆ.

Comments are closed.