ಕರಾವಳಿ

ತುಳಸಿ ಎಲೆಯನ್ನು ಬೆಳಗ್ಗೆ ಯಾಕೆ ಸೇವಿಸಬೇಕು…?

Pinterest LinkedIn Tumblr

ತುಳಸಿ ಎಲೆಗಳು ಪ್ರಕೃತಿದತ್ತವಾಗಿ ಸಿಕ್ಕಿರುವ ದಿವ್ಯೌಷಧಿ. ಮಹಾಭಾರತದ ಕಾಲದಲ್ಲಿ ಘಟೋತ್ಕಜನು ಸಹ ಹೊರಲಾರದಂತಹ ಶ್ರೀ ಮಹಾವಿಷ್ಣುವನ್ನು ಒಂದು ತುಲಸಿ ಎಲೆ ಸರಿದೂಗಿಸಿದೆ. ಅಷ್ಟು ಉನ್ನತವಾದದ್ದು ಈ ತುಳಸಿ. ನಮ್ಮ ದೇಶದಲ್ಲಿ ತುಂಬಾ ಜನರು ತುಲಸಿ ಗಿಡವನ್ನು ದೈವವಂತೆ ಭಾವಿಸಿ ಪೂಜಿಸುತ್ತಾರೆ. ಪುರಾಣಗಳಲ್ಲಿ ಈ ಗಿಡಕ್ಕೆ ಒಂದು ಪ್ರತ್ಯೇಕವಾದ ಸ್ಥಾನವಿದೆ. ಇದು ನಮ್ಮ ಹಿತ್ತಲಲ್ಲಿ, ದೊರೆಯುವ ದಿವ್ಯೌಷದವೇ ಸರಿ… ಇದೆಲ್ಲಾ ತುಳಸಿ ಗಿಡಕ್ಕೆ ಇರುವ ಪ್ರಾಧಾನ್ಯತೆ, ಇನ್ನೂ ಇದರಲ್ಲಿರುವ ಔಷಧ ಗುಣಗಳೇನು, ಇದನ್ನು ಎಷ್ಟು ವಿಧವಾಗಿ ಉಪಯೋಗಿಸಿಕೊಳ್ಳಬಹುದು, ತಿಳಿದುಕೊಳ್ಳೋಣ….
ಕೆಲವು ತುಳಸಿ ಎಲೆಗಳನ್ನು ನೀರಿನಲ್ಲಿ ರಾತ್ರಿಯೆಲ್ಲ ನೆನೆಸಿಟ್ಟು ಆ ನೀರಿನಿಂದ ಬೆಳಿಗ್ಗೆ ಹಲ್ಲುಜ್ಜಿದರೆ, ಬಾಯಿಯ ದುರ್ವಾಸನೆ, ಬಾಯಿಹುಣ್ಣುಗಳು ಕಡಿಮೆ ಆಗುತ್ತವೆ.

ಬೆಳಿಗ್ಗೆ ತುಳಸಿ ಎಲೆಗಳನ್ನು ಹಿಡಿಯಷ್ಟು ತೆಗೆದುಕೊಂಡು ಜಜ್ಜಿ ಕಷಾಯವಾಗಿ ಬೇಯಿಸಿಯಾದರೂ, ಅಥವಾ ಆ ರಸದಲ್ಲಿ ಒಂದು ಚಮಚ ಜೇನುತುಪ್ಪ ಸೇರಿಸಿಯಾದರೂ ಕುಡಿದರೆ ಕಫಾ ಕಡಿಮೆಯಾಗುತ್ತದೆ.
ತುಲಸಿ ಎಲೆಗಳ ರಸದಲ್ಲಿ ಜೀನುತುಪ್ಪ ಸೇರಿಸಿ ದಿನಕ್ಕೆರಡು ಬಾರಿ ತೆಗೆದುಕೊಂಡರೆ, ಕೆಮ್ಮು, ನೆಗಡೆ ಕಡಿಮೆಯಾಗುತ್ತದೆ.

ಕಣ್ಣಿನ ಉರಿ, ಕಣ್ಣುಗಳಿಂದ ನೀರು ಸುರಿಯುವುದು, ಇಂತಹ ಸಮಸ್ಯೆಗಳಿಂದ ನರಳುತ್ತಿರುವವರಿಗೆ ತುಳಸಿಎಲೆಗಳ ರಸವನ್ನು, ಹತ್ತಿಯಿಂದ ಕಣ್ಣಿನ ರೆಪ್ಪೆ ಮೇಲೆ ಹಚ್ಚಿಕೊಳ್ಳಬೇಕು (ಕಣ್ಣಿನಲ್ಲಿ ಬೀಳದಂತೆ ಎಚ್ಚರ ವಹಿಸಿ)
ತುಳಸಿ ಎಲೆಗಳ ರಸವು ಶರೀರದ ಉಷ್ಣತೆಯನ್ನು ಸಮತೋಲನದಲ್ಲಿಡುವ ಗೂಣವನ್ನೊಂದಿದೆ. ತುಳಸಿ ಎಲೆಗಳನ್ನು ಪುದೀನ ಎಲೆಗಳನ್ನು ಸೇರಿಸಿ ಕಷಾಯವಾಗಿ ತಯಾರಿಸಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
ತುಳಸಿಎಲೆಗಳನ್ನು ನೀರಿನಲ್ಲಿ ಹಾಕಿ, ಕುದಿಸಿ, ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ, ಗಂಟಲಿನ ನೋವು ನಿವಾರಣೆಯಾಗುತ್ತದೆ.
ನೆಗಡೆ, ಕೆಮ್ಮಿನಿಂದ ತೊಂದರೆ ಅನುಭವಿಸುತ್ತಿರುವವರು, ಒಂದು ಟೀಸ್ಪೂನ್ ಶುಂಠಿ, ಒಂದು ಟೀ ಸ್ಫೂನ್ ಮೆಣಸಿನಪುಡಿ, ಐದು-ಹತ್ತು ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದುಸಿ, ನೀರನ್ನು(ಕಷಾಯ) ಕುಡಿದರೆ ಒಳ್ಳೆಯದು.

ತುಲಸೀ ರಸಕ್ಕೆ ಜೇನುತುಪ್ಪವನ್ನು ಸೇರಿಸಿ, ಒಂದು ಚಮಚ ಪ್ರತಿದಿನ ಕುಡಿದರೆ ಬಾಯಿಯಹುಣ್ಣು, ಗಂಟಲು ನೋವು, ಗಂಟಲಿನಲ್ಲಿ ಕರಕರ ಶಬ್ದ ನಿವಾರಣೆಯಾಗುತ್ತದೆ.
ತುಳಸಿಎಲೆಗಳ ರಸ, ಈರುಳ್ಳಿರಸ, ಶುಂಠಿ ರಸ, ಜೇನುತುಪ್ಪ, ಎಲ್ಲವನ್ನು ಸೇರಿಸಿ, ಆರು ದಿನಗಳ ಕಾಲ ಎರಡೊತ್ತು ಕುಡಿದರೆ, ಬೇಧಿ, ರಕ್ತಬೇಧಿಯನ್ನು ನಿಯಂತ್ರಿಸುತ್ತದೆ.
ತುಳಸಿ ಶರಿರದಲ್ಲಿರುವ ಅಧಿಕ ಕೊಬ್ಬನ್ನು ನಿವಾರಣೆಮಾಡುತ್ತದೆ. ತುಳಸಿ ಎಲೆಗಳನ್ನು ಮಜ್ಜಿಗೆಯಲ್ಲಿ ಬೆರೆಸಿ ಸೇವಿಸಿದರೆ, ತೂಕ ಕಡಿಮೆಯಾಗುವರು.
ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ತುಳಸಿ ಎಲೆಗಳು ಉತ್ತಮ ಔಷಧಿ. ಕಾಡಿನ ತುಳಸಿ ರಸವನ್ನು ಸಕ್ಕರೆಯೊಂದಿಗೆ ಬೆರೆಸಿ, ಪ್ರತಿದಿನ ಮಲಗುವ ಮುನ್ನ ಎರಡು ಚಮಚದಷ್ಟು ಕುಡಿದರೆ ನಿದ್ರೆ ಚೆನ್ನಾಗಿ ಬರುವುದು.

Comments are closed.