ಕರಾವಳಿ

ಬೆಳಿಗ್ಗೆ ಎದ್ದ ತಕ್ಷಣ ಈ ರೀತಿ ಮಾಡಿದರೆ ನಿಮ್ಮ ದಿನ ಚೆನ್ನಾಗಿರುತ್ತೆ..!

Pinterest LinkedIn Tumblr

ಬೆಳಿಗ್ಗೆ ಎದ್ದ ತಕ್ಷಣ, ನಮ್ಮ ಇವತ್ತಿನ ಇಡೀ ದಿನ ಚೆನ್ನಗಿರಲೆಂದು, ಎಲ್ಲರೂ ದೇವರಲ್ಲಿ ಪ್ರಾರ್ಥಿಸುವುದು ಸಾಮಾನ್ಯ. ಹಾಗೆಯೇ ತಮ್ಮ ಮನಸ್ಸನ್ನು ತುಂಬಾ ಪ್ರಶಾಂತವಾಗಿ ಇಟ್ಟುಕೊಂಡು ದಿನ ಪ್ರಾರಂಭಿಸಲು ಪ್ರಯತ್ನಿಸುತ್ತಾರೆ. ಇಷ್ಟೇ ಅಲ್ಲದೆ, ನಾವೀಗ ಹೇಳಲಿರುವ ಕೆಳಗಿನ ಸೂಚನೆಗಳೊಂದಿಗೆ ದಿನ ಪ್ರಾರಂಭಿಸಿದರೆ, ಅದರಿಂದ ಅದೃಷ್ಟ ಕೂಡಿಬರುತ್ತದೆ. ಎಲ್ಲವೂ ಶುಭವಾಗುತ್ತದೆ.ಉದ್ಯೋಗಿಗಳಾದರೆ ತಾವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಿ ಮುಂದೆ ಸಾಗುತ್ತಾರೆ. ಆ ಸೂಚನೆಗಳು ಏನೂ ಅಂತ ಈಗ ತಿಳಿದುಕೊಳ್ಳೋಣ,

1. ಹಿರಿಯರ ಆಶೀರ್ವಾದ
ಮನೆಯಿಂದ ಹೊರಗೆ ಹೋಗುವಾಗ ಯಾರೇ ಆಗಿರಲಿ ನಮಗಿಂತ ದೊಡ್ಡವರ ಆಶೀರ್ವಾದ ಪಡೆಯಬೇಕು. ಆಶೀರ್ವಾದ ಪಡೆಯಬೇಕಾದ ಸಮಯದಲ್ಲಿ ಬಾಗುತ್ತಾರಾದ್ದರಿಂದ, ಆ ಸ್ಥಿತಿಯಲ್ಲಿ ರಕ್ತ ಸಂಚಲನೆ ಮಿದುಳಿಗೆ ಹೆಚ್ಚಾಗಿ ಆಗಿ ಆ ಭಾಗ ಶಾರ್ಪ್ ಆಗುತ್ತದೆ. ಇದರಿಂದ ಆಲೋಚನಾ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲ ಈ ರೀತಿ ಮಾಡುವುದರಿಂದ ಪಿತೃದೋಷ ನಿವಾರಣೆಯಾಗುತ್ತದೆ. ಇದರಿಂದ ಅದೃಷ್ಟ ಕೂಡಿಬರುತ್ತದೆ. ಹಿರಿಯರ ಆಶೀರ್ವಾದ ಪಡೆದು ಮನೆಯಿಂದ ಹೊರಟರೆ ಎಲ್ಲವೂ ಒಳಿತಾಗುತ್ತದೆ. ನೆಗಟೀವ್ ಎನರ್ಜಿಯಿಂದ ಹೊರಬಂದು ಪಾಸಿಟೀವ್ ಎನರ್ಜಿ ಹೆಚ್ಚಾಗುತ್ತದೆ.

2. ನಿಮ್ಮ ಎರಡು ಅಂಗೈಗಳನ್ನು ನೋಡಿಕೊಳ್ಳಿ
ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೆ ಅಂಗೈಯನ್ನು ನೋಡಿಕೊಳ್ಳಬೇಕು. ಎರಡೂ ಅಂಗೈಗಳನ್ನು ಹತ್ತಿರಹತ್ತಿರ ಹಿಡಿದು ಆ ಕೆಲಸ ಮಾಡಬೇಕು. ಹಾಗೂ ಅಂಗೈಗಳನ್ನು ನೋಡಿಕೊಳ್ಳುತ್ತಾ ಈ ಶ್ಲೋಕವನ್ನು ಒಮ್ಮೆ ಪಠಿಸಿ:- ಕರಾಗ್ರೆ ವಸತೇ ಲಕ್ಷ್ಮಿ , ಕರಮಧ್ಯೇ ಸರಸ್ವತಿ!
ಕರಮೂಲೆ ಸ್ಥಿತಾ ಗೌರಿ, ಪ್ರಭಾತೆ ಕರದರ್ಶನಂ!!
ಈ ರೀತಿ ಮಾಡುವುದರಿಂದ ಕೈ ಬೆರಳುಗಳ ಕೊನೆಯಲ್ಲಿರುವ ಲಕ್ಷ್ಮಿದೇವಿ, ಮಧ್ಯದಲ್ಲಿರುವ ಸರಸ್ವತಿ, ಮಣಿಕಟ್ಟು ಬಳಿ ಇರುವ ಗೌರಿ, ಈ ಮೂವರ ಆಶೀರ್ವಾದ ನಮಗೆ ಸಿಗುತ್ತದೆ. ಇದರಿಂದ ವಿದ್ಯೆ, ಜ್ಞಾನ, ಧನ ಎಲ್ಲವೂ ಕೈಗೂಡತ್ತದೆ.

3. ಕನ್ನಡಿ
ದಂಪತಿಗಳು ತಮ್ಮತಮ್ಮ ಬೆಡ್ ರೂಮಿನಲ್ಲಿ ಯಾವುದೇ ಕಾರಣಕ್ಕೂ ಕನ್ನಡಿ ಇಟ್ಟುಕೊಳ್ಳಬಾರದು. ಆ ರೀತಿ ಮಾಡುವುದರಿಂದ ಅವರ ವೈವಾಹಿಕ ಜೀವನ ಸುಖಕರವಾಗಿರಲ್ಲ. ಎಲ್ಲವೂ ಸಮಸ್ಯೆಗಳೇ ಬರುತ್ತವಂತೆ. ಆ ರೀತಿ ಕನ್ನಡಿ ಇಟ್ಟುಕೊಂಡು ಬೆಳಗ್ಗೆಯೇ ನೋಡಿದರೆ ಎಲ್ಲವೂ ಅಶುಭ ನಡೆಯುತ್ತದೆ. ಇದು ಕೂಡಿಬರುವುದಿಲ್ಲವಂತೆ.

4.ಬೆಲ್ಲ
ಬೆಳಗ್ಗೆ ಮನೆಯಿಂದ ಹೊರಗೆ ಹೋಗಬೇಕಾದರೆ ಸ್ವಲ್ಪ ಬೆಲ್ಲ ತಿಂದು ನೀರು ಕುಡಿಯಬೇಕು. ಆ ಬಳಿಕ ಹೊರಗೆ ಹೋಗಬೇಕು. ಈ ರೀತಿ ಮಾಡುವುದರಿಂದ ದೇಹಕ್ಕೆ ಶಕ್ತಿ ದೊರೆಯುವುದಷ್ಟೇ ಅಲ್ಲದೆ, ನಿತ್ಯ ಉತ್ಸಾಹದಿಂದ ಇರುತ್ತೀರ. ಅದರ ಜತೆಗೆ ಪಾಸಿಟೀವ್ ಎನರ್ಜಿ ಜೊತೆಗೆ ಇರುತ್ತದೆ. ಆಗ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ.

5.ಒತ್ತಡ
ಒತ್ತಡ, ಮಾನಸಿಕ ಸಮಸ್ಯೆಗಳೊಂದಿಗೆ ಒದ್ದಾಡುತ್ತಿರುವವರು ಒಮ್ಮೆ ತಾವು ಮಲಗುತ್ತಿರುವ ಪ್ರದೇಶಕ್ಕೆ ವಿರುದ್ಧವಾಗಿ ಕನ್ನಡಿ ಇದೆಯಾ ಎಂದು ಚೆಕ್ ಮಾಡಿಕೊಳ್ಳಬೇಕು. ಒಂದು ವೇಳೆ ಕನ್ನಡಿ ಇದ್ದರೆ ಕೂಡಲೆ ಅದನ್ನು ತೆಗೆಯಬೇಕು. ಆ ರೀತಿ ಸಾಧ್ಯವಾಗದಿದ್ದರೆ ಆ ಕನ್ನಡಿಯನ್ನು ವಸ್ತ್ರದಿಂದ ಮುಚ್ಚಬೇಕು. ಇದರಿಂದ ಆಯಾ ಸಮಸ್ಯೆಗಳಿಂದ ಉಪಶಮನ ಸಿಗುತ್ತದೆ. ಈ ರೀತಿ ಇರುವವರು ಕನ್ನಡಿಯನ್ನು ಬೆಳಗ್ಗೆ ಯಾವುದೇ ಕಾರಣಕ್ಕೂ ನೋಡಬಾರದು.

Comments are closed.