ಅಂತರಾಷ್ಟ್ರೀಯ

ಮದುವೆಗೆಂದು ತರಿಸಿದ್ದ 5 ಲಕ್ಷ ರೂಪಾಯಿ ಕೇಕ್; ಕತ್ತರಿಸಿದ ಮೇಲೆ ಶಾಕ್ ಗೊಂಡ ನವದಂಪತಿ !

Pinterest LinkedIn Tumblr

ಮದುವೆ ಹಲವರ ಜೀವನದಲ್ಲಿ ಬರುವ ಸುಮಧುರವಾದ ಕ್ಷಣ. ಗಂಡು- ಹೆಣ್ಣಿಗೆ ಎಂದೂ ಮರೆಯಲಾಗದ ಕೆಲವು ಸುಮಧುರ ಕ್ಷಣಗಳಿಗೆ ಸಾಕ್ಷಿಯಾಗುವ ವೇದಿಕೆ. ಹಾಗಾಗಿ ಅನೇಕರು ತಮ್ಮ ವಿವಾಹವನ್ನು ಅದ್ಧೂರಿಯಾಗಿ ಮಾಡಿಕೊಳ್ಳುತ್ತಾರೆ. ಫಿಲಿಫೈನ್ಸ್​ನಲ್ಲಿ ನವ ಜೋಡಿ ಇದೇ ರೀತಿಯ ಕನಸು ಕಂಡಿತ್ತು. ಮದುವೆಗೆ ಭಾರೀ ಸಿದ್ಧತೆ ಮಾಡಿಕೊಂಡಿತ್ತು ಈ ಜೋಡಿ.

ಮದುವೆ ಮನೆ ಪೂರ್ತಿ ಹೂವಿನ ಅಲಂಕಾರ, ಭಾರೀ ಭೋಜನ, ಬಂದ ಅತಿಥಿಗಳನ್ನು ಸತ್ಕರಿಸಲು ವಿಶೇಷ ಸಿಬ್ಬಂದಿ. ಹೀಗೆ ನಾನಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅದೇ ರೀತಿ, ಮದುವೆ ನಂತರ ಆರತಕ್ಷತೆಯಲ್ಲಿ ಕೇಕ್​ ಕತ್ತರಿಸುವ ಉದ್ದೇಶ ಇಟ್ಟುಕೊಂಡಿತ್ತು ಈ ನವ ದಂಪತಿ. ಅದಕ್ಕಾಗಿ ಬರಬ್ಬೋರಿ 5 ಲಕ್ಷ ರೂ. ಮೊತ್ತದ ಕೇಕ್​ ಆರ್ಡರ್​ ಮಾಡಿತ್ತು. ಆರಕ್ಷತೆಗೆ ಕೇಕ್​ ಕೂಡ ಬಂದಿತ್ತು.

ಬಂದ ಅತಿಥಿಗಳ ಸಮ್ಮುಖದಲ್ಲಿ ದೊಡ್ಡ ಮೊತ್ತದ ಕೇಕ್​ ಕತ್ತರಿಸಲು ದಂಪತಿ ಮುಂದೆ ಬಂದರು. ಚಾಕು ಹಿಡಿದು ಕೇಕ್​ ಕತ್ತರಿಸಿದರು. ಈ ವೇಳೆ ದಂಪತಿಗೆ ಆಘಾತ ಹಾಗೂ ರುಚಿಯಾದ ಕೇಕ್​ಅನ್ನು ಸವಿಯಬೇಕು ಎಂದು ಗಂಟೆಗಟ್ಟಲೆ ಕಾದಿದ್ದ ಅತಿಥಿಗಳಿಗೆ ನಿರಾಶೆ ಕಾದಿತ್ತು. ಕಾರಣ, ಕೇಕ್​ ಒಳಗೆ ಇದ್ದಿದ್ದು, ಥರ್ಮಾಕೋಲ್!

ಈ ಘಟನೆ ನವ ದಂಪತಿಗೆ ಮುಜುಗರ ತಂದಿತ್ತು. ಮದುವೆ ಮಂಟಪದಲ್ಲಿ ನೆರೆದಿದ್ದ ಬಂಧುಗಳು ಮತ್ತು ಗೆಳೆಯರು ಈ ಘಟನೆ ನೋಡಿ ನಕ್ಕರೆ, ಇನ್ನೂ ಕೆಲವರು ಬೇಸರ ವ್ಯಕ್ತಪಡಿಸಿದರು. ಇನ್ನು ಕೇಕ್​ ತಿನ್ನಬೇಕು ಎಂದು ಆಸೆ ಇಟ್ಟುಕೊಂಡು ಕಾದು ಕೂತವರು ಅಂಗಡಿಯವರಿಗೆ ಹಿಡಿಶಾಪ ಹಾಕಿದರು .

ಈ ಘಟನೆ ನೋಡುತ್ತಿದ್ದಂತೆ, ಮದುವೆ ಹುಡಗಿ ಮುಖದಲ್ಲಿ ನಗು, ಸಂತಸ ಮಾಯವಾಗಿ, ಬೇಸರ ಮೂಡಿತ್ತು. ನಗು ಮಾಯವಾಗಿ ಅಳುವಿನ ಕಟ್ಟೆ ಒಡೆಯಿತು. ವಧು ಸ್ಥಳದಲ್ಲೇ ಕುಸಿದು ಒಂದೇ ಸಮನೆ ಅಳಲು ಆರಂಭಿಸಿದ್ದಳು. ಅಂಗಡಿಯವರು ಮಾಡಿದ ಮೋಸಕ್ಕೆ ಈ ದಂಪತಿ ಈಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ತಮಗಾದ ಅವಮಾನಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

Comments are closed.