ಕರಾವಳಿ

ರಸ್ತೆಗಿಳಿದು ಪ್ರತಿಭಟಿಸಿದ ಕಡಲ ಮಕ್ಕಳು: ಉಡುಪಿಯಲ್ಲಿ ಮೀನುಗಾರರ ಆಕ್ರೋಷ

Pinterest LinkedIn Tumblr

ಉಡುಪಿ: ಇಪ್ಪತ್ತೆರಡು ದಿನ ಕಳೆಯುತ್ತಾ ಬಂತು. ಮಲ್ಪೆಯಿಂದ ಕಡಲಾಳದಲ್ಲಿ ಮೀನುಗಾರಿಕೆಗೆ ತೆರಳಿದ 7 ಮಂದಿ ಮೀನುಗಾರರು ಇನ್ನೂ ನಾಪತ್ತೆ ಆಗಿದ್ದು ಆ ಮೀನುಗಾರರನ್ನು‌ಹುಡುಕಿ ಕೊಡುವಂತೆ ಆಗ್ರಹಿಸಿ ಉಡುಪಿಯಲ್ಲಿ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿ ನಾಲ್ಕು ಗಂಟೆಗಳ ಕಾಲ ರಾಷ್ಟ್ರಿಯ ಹೆದ್ದಾರಿ ತಡೆ ನಡೆಸಿದರು.

ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿದ ಸುರ್ವರ್ಣ ತ್ರಿಭುಜ ಮೀನುಗಾರಿಕಾ ಬೋಟ್ ಸಹಿತ 7 ಜನ ಮೀನುಗಾರರು ನಾಪತ್ತೆಯಾಗಿ 24 ದಿನಗಳು ಕಳೆದಿವೆ.ಮೀನುಗಾರರನ್ನು ಹುಡುಕಿಕೊಡುವಂತೆ ಮೀನುಗಾರರ ಸಂಘ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ರೂ ಕೂಡ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ಕರಾವಳಿಯ ಮೀನುಗಾರರು ಮೀನುಗಾರಿಕೆ ಸ್ಥಗಿತ ಗೊಳಿಸಿ ಬೀದಿಗಳಿದಿದ್ದರು.ಮಲ್ಪೆ ಬಂದರಿನಲ್ಲಿ ಸೇರಿದ ಸುಮಾರು 50 ಸಾವಿರಕ್ಕೂ ಹೆಚ್ಚು ಮೀನುಗಾರರು ಕಾಲ್ನಡಿಗೆಯ ಮೂಲಕ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಗೆ ಆಗಮಿಸಿ ರಸ್ತೆ ತಡೆ ನಡೆಸಿದ್ರು. ಮೀನುಗಾರರ ನಾಪತ್ತೆ ಪ್ರಕರಣವನ್ನು‌ ನಿರ್ಲಕ್ಷಿಸಿರುವ ಸರ್ಕಾರದ ಧೋರಣೆಯನ್ನ ಖಂಡಿಸಿ ಘೋಷಣೆ ಕೂಗಿ ಸರ್ಕಾರಕ್ಕೆ‌ ಬಿಸಿ ಮುಟ್ಟಿಸಿದರು.

ಸುಡುಬಿಸಿಲಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಮೀನುಗಾರ ಮುಖಂಡರು ಸೇರಿದಂತೆ ಕರಾವಳಿ ಜನಪ್ರತಿನಿಧಿಗಳು ಕೈ ಜೋಡಿಸಿದ್ದರು. ಸಂಸದೆ ಶೋಭಾ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ‌ ಕೂಡ ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ ಸಚಿವೆ ಜಯಮಾಲರಿಗೆ ನಾಪತ್ತೆಯಾಗಿರುವ ಮೀನುಗಾರರನ್ನು ಹುಡುಕಿಕೊಡುವಂತೆ ಮನವಿಯನ್ನ ಸಲ್ಲಿಸಿದರು. ಮನವಿ ಸ್ವೀಕರಿಸಿ ಮತನಾಡಿದ ಸಚಿವೆ ಮೀನುಗಾರರ ಭಾವನೆಗಳನ್ನ ಅರ್ಥಮಾಡಿಕೊಂಡಿದ್ದೇವೆ. ಪ್ರಕರಣ ಗಮನಕ್ಕೆ ಬಂದಂದಿನಿಂದ ಸತತ ಪ್ರಯತ್ನವನ್ನು‌ ಮಾಡ್ತಾ ಇದ್ದೇವೆ. ಕೇಂದ್ರ ಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದು ,ನೌಕ ಪಡೆ ಸೇರಿದಂತೆ ಕೇಂದ್ರದಲ್ಲಿರುವ ಎಲ್ಲಾ ತಂತ್ರಜ್ನಾನಗಳನ್ನು ಬಳಸಿ 7 ಮಂದಿ ಮೀನುಗಾರನ ಸುರಕ್ಷಿತವಾಗಿ ಕರೆ ತರುವ ಪ್ರಯತ್ನ‌ ನಡೆಸುವುದಾಗಿ ಹೇಳುವ ಮೂಲಕ ಮೀನುಗಾರರನ್ನ ಸಮಾಧಾನ ಪಡಿಸುವ ಪ್ರಯತ್ನವನ್ನು ಮಾಡಿದರು.

ಎಷ್ಯಾದ ಅತೀ ದೊಡ್ಡ ಮೀನುಗಾರಿಕ ಬಂದರಿನಲ್ಲಿ ಇಂತಹ ಘಟನೆ ಮೊದಲ‌ ಬಾರಿ ನಡೆದಿದೆ.ಇದರಿಂದಾಗಿ ಕರಾವಳಿಯ ಮೀನುಗಾರರು ಕೂಡ ಅತಂಕಕ್ಕೀಡಾಗಿದ್ದಾರೆ.ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಸಮಸ್ತ ಮೀನುಗಾರರು ಬೃಹತ್ ಪ್ರತಿಭಟನೆಯ ಮೂಲಕ ಬಿಸಿ‌ಮುಟ್ಟಿಸಿದ್ದಾರೆ. ಸರಕಾರ ಮೀನುಗಾರರ ಹುಡುಕಿಕೊಡಲು ವಿಳಂಬ ಮಾಡಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ಕೂಡ ಮೀನುಗಾರರು ನೀಡಿದ್ದಾರೆ.

Comments are closed.