ಕರಾವಳಿ

ಉಡುಪಿಯ ಕೆಲವೆಡೆ ಸಮುದ್ರದ ನೀರು ಹಸಿರು ಬಣ್ಣ!

Pinterest LinkedIn Tumblr

ಉಡುಪಿ: ಕಾಪು, ಪಡುಬಿದ್ರಿ, ಮಲ್ಪೆ ಕಡಲ ತೀರ ಭಾಗದಲ್ಲಿ ಸಮುದ್ರದ ನೀರು ಕಳೆದ ಮೂರ್‍ನಾಲ್ಕು ದಿನಗಳಿಂದ ಹಸಿರು ಬಣ್ಣಕ್ಕೆ ತಿರುಗಿದ್ದು ಮೀನುಗಾರರಲ್ಲಿ ಅಚ್ಚರಿ ಹಾಗೂ ಆತಂಕ ಮೂಡಿಸಿದೆ.

ಉಚ್ಚಿಲ, ಎರ್ಮಾಳು, ಪಡುಬಿದ್ರಿ ಪರಿಸರದಲ್ಲೂ ಸಮುದ್ರದ ನೀರುಹಸಿರು ಬಣ್ಣಕ್ಕೆ ತಿರುಗಿದ್ದು, ದುರ್ವಾಸನೆ ಬರುತ್ತಿದೆ. ಇದು ಮೀನುಗಾರರಲ್ಲಿ ಆತಂಕಕ್ಕೆ ಕಾರಣವಾಗಿದ್ದರೆ, ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿದೆ. ಸಮುದ್ರದ ನೀರು ಪಾಚಿಗಟ್ಟಿದ ಹಸಿರು ಬಣ್ಣದಂತೆ ಇರುವುದರಿಂದ ಕಡಲ ಕಿನಾರೆಗೆ ಬರುವ ಪ್ರವಾಸಿಗರು ನೀರಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಸಮುದ್ರಕ್ಕೆ ಇಳಿದ ಯಾರಿಗೂ ಬಣ್ಣ ಮೆತ್ತಿಕೊಳ್ಳುತ್ತಿಲ್ಲ.

ಪಾಚಿಯಿಂದ ಹಸಿರು ಬಣ್ಣ?
ಮಳೆಗಾಲದಲ್ಲಿ ಬಂಡೆಯನ್ನು ಅಂಟಿಕೊಳ್ಳುವ ಪಾಚಿ ಬಂಡೆಯಿಂದ ಬೇರ್ಪಟ್ಟು ಸಮುದ್ರಕ್ಕೆ ಬೀಳುವುದರಿಂದ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಹಿಂದೆಯೂ ಈ ರೀತಿ ನಡೆದಿತ್ತು. ಕಳೆದ ಮೂರ್‍ನಾಲ್ಕು ದಿನಗಳಿಂದ ಸಮುದ್ರ ಹೀಗೆಯೇ ಕಾಣುತ್ತಿದೆಯೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

Comments are closed.