
ಮಂಗಳೂರು,ಡಿಸೆಂಬರ್ 31: ಕುಲಶೇಖರ ಕೈಕಂಬ ಹಿಂದೂ ಯುವ ಸೇನೆ ಆಶ್ರಯದಲ್ಲಿ ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗ ಸಮಿತಿ ವತಿಯಿಂದ ಡಿ.23 ರಿಂದ 30ರ ವರೆಗೆ ಪದವು ಮೇಗಿನ ಮನೆ ವಠಾರದಲ್ಲಿ ಹಮ್ಮಿಕೊಂಡಿದ್ದ ಲೋಕ ಕಲ್ಯಾಣಾರ್ಥ ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗವು ಡಿಸೆಂಬರ್ 29 ರಂದು ಬೆಳಗ್ಗೆ 11ಕ್ಕೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತ್ತು.
ಡಿಸೆಂಬರ್ 30ರಂದು ಸಂಜೆ ಸಮಾರೋಪ ಸಮಾರಂಭ ಹಾಗೂ ವಿಸರ್ಜನ ಪೂಜೆ ನಡೆಯಿತು. ಸಂಜೆ ಶ್ರೀ ಶನಿದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ನಡೆಯಿತು. ಶ್ರೀ ಶನಿದೇವರ ವಿಗ್ರಹದ ಭವ್ಯ ಶೋಭಾಯಾತ್ರೆಯು ಕುಲಶೇಖರ ಪದವು ಮೇಗಿನ ಮನೆ ವಠಾರದ ಶಿವಾಜಿ ಮಂಟಪದಿಂದ ವಿವಿಧ ವಾದ್ಯಾಘೋಷಗಳೊಂದಿಗೆ ಹೊರಟು ರಥ ಬೀದಿ ಮಹಮ್ಮಾಯಿ ಕೆರೆಯಲ್ಲಿ ವಿಗ್ರಹದ ಜಲಸ್ತಂಭನ ಗೊಳಿಸಲಾಯಿತು.

ಈ ವೇಳೆ ಈ ವೇಳೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗ ಸಮಿತಿಯ ಗೌರವಾಧ್ಯಕ್ಷ ಮೋನಪ್ಪ ಭಂಡಾರಿ, ಗೌರವಾಧ್ಯಕ್ಷ ವಾಸುದೇವ ಆರ್.ಕೊಟ್ಟಾರಿ, ಅಧ್ಯಕ್ಷ ಹಾಗೂ ಕರಾವಳಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಗಣೇಶ್ ರಾವ್, ಕಾರ್ಯಧ್ಯಕ್ಷ ಎಚ್.ಕೆ.ಪುರುಷೋತ್ತಮ, ಸಂಚಾಲಕ ರಾಮಚಂದ್ರ ಚೌಟ ಪದವು, ಉಪಾಧ್ಯಕ್ಷರಾದ ಜನಾರ್ಧನ ಅರ್ಕುಳ, ಉಮೆಶ್ ರೈ ಪದವು ಮೇಗಿನ ಮನೆ, ಖಜಾಂಜಿ ಭಾಸ್ಕರಚಂದ್ರ ಶೆಟ್ಟಿ, ಮಾದ್ಯಮ ಸಮಿತಿ ಸಂಚಾಲಕ ಪ್ರವೀಣ್.ಎಸ್.ಕುಂಪಲ, ,ಪ್ರಧಾನ ಕಾರ್ಯದರ್ಶಿ ಕಿಶೋರ್ ಕೊಟ್ಟಾರಿ, ಅಶ್ವಿತ್ ಕೊಟ್ಟಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯ ಅರುಣ್ ಮುಂತಾದವರು ಉಪಸ್ಥಿತರಿದ್ದರು.
ನಾರಾಯಣ ಭಟ್ ಪೌರೋಹಿತ್ಯದಲ್ಲಿ ಯಾಗ:
ಡಿ.24 ರಿಂದ 29ರ ವರೆಗೆ ವೈದಿಕ ಸಮಿತಿಯ ಪ್ರಮುಖರು ಹಾಗೂ ಯಾಗದ ಪುರೋಹಿತರಾದ ಎಂ.ಗಿರಿಧರ್ ಭಟ್ ನೇತ್ರತ್ವದಲ್ಲಿ, ಬಾಳಂಭಟ್ ಮನೆತನದ ವೇ.ಮೂ.ನಾರಾಯಣ ಭಟ್ ಪೌರೋಹಿತ್ಯದಲ್ಲಿ 80ಕ್ಕೂ ಹೆಚ್ಚು ವೈದಿಕರ ತಂಡದಿಂದ ಯಾಗ ನಡೆಯಿತು. ಈ ವೇಳೆ ನಿತ್ಯ ಮಧ್ಯಾಹ್ನ, ರಾತ್ರಿ ಅನ್ನಸಂತರ್ಪಣೆ ನಡೆಯಿತು.
Comments are closed.