ಕರಾವಳಿ

ತುಳಸಿ ಎಲೆ ಬಳಕೆಯಿಂದ ಮಕ್ಕಳಿಗೆ ಕಾಡುವ ಹಲವು ಅರೋಗ್ಯ ಸಮಸ್ಯೆಗಳು ದೂರ.

Pinterest LinkedIn Tumblr

ಸಣ್ಣ ಮಕ್ಕಳು ತುಂಬಾ ಸೂಕ್ಷ್ಮ, ಅವರನ್ನ ಎಷ್ಟೇ ಜೋಪಾನವಾಗಿ ನೋಡಿ ಕೊಂಡರು ಕಡಿಮೆಯೇ, ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟು ಕೊಂಡರು ಮಕ್ಕಳಿಗೆ ಕೆಮ್ಮು, ನೆಗಡಿ, ಕಿವಿ ನೋವು, ಅಸ್ತಮಾ, ಜ್ವರ ಹೀಗೆ ಹಲವು ಸಮಸ್ಯೆಗಳು ಬೂತ ದಂತೆ ಕಾಡುತ್ತಲೇ ಇರುತ್ತವೆ, ಇಂತಹ ಸಮಸ್ಯೆಗಳಿಗೆ ನಮ್ಮ ಹಿರಿಯರು ಬಳಸುತ್ತಿದ್ದದ್ದು ಒಂದೇ ಮದ್ದು ಅದು ತುಳಸಿ, ಹೌದು ತುಳಸಿ ಎಲೆಯನ್ನ ಬಳಸಿ ಮಕ್ಕಳಿಗೆ ಕಾಡುವ ಹಲವು ಅರೋಗ್ಯ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರಗಳು.

ಕಿವಿಯ ತೊಂದರೆ : ತುಳಸಿಯ ಎಲೆಗಳನ್ನು ತುಸು ಬೆಚ್ಚಗೆ ಮಾಡಿ ಮಕ್ಕಳ ಕಿವಿಗೆ ಹಾಕುವುದರಿಂದ ಕಿವಿನೋವು ಶಾಂತವಾಗುತ್ತದೆ ( ತುಳಸಿ ರಸ ಸಹಿಸುವಷ್ಟು ಮಾತ್ರ ಬಿಸಿ ಆಗಿರಬೇಕು ), ಮಕ್ಕಳಿಗೆ ಕಿವಿ ಸೋರುತ್ತಿದ್ದರೆ ತುಳಸಿ ಮತ್ತು ಬೇವಿನ ಎಲೆಗಳ ರಸದಲ್ಲಿ ಜೇನುತುಪ್ಪವನ್ನು ಸೇರಿಸಿ ಕಿವಿಯಲ್ಲಿ ಹಾಕುವುದರಿಂದ ಕಂಡುಬರುತ್ತದೆ.

ಕೆಮ್ಮು : ತುಳಸಿಯ ಹೂವನ್ನು ಹಸಿಶುಂಠಿಯ ರಸದಲ್ಲಿ ಅರೆದು, ನೆಕ್ಕುತ್ತಾ ಸೇವಿಸಿದರೆ ಕೆಮ್ಮು ನಿವಾರಣೆ ಯಾಗುತ್ತದೆ, ನಿತ್ಯ ಮೂವತ್ತ ರಿಂದ ಅರವತ್ತು ಹನಿ ತುಳಸಿ ರಸವನ್ನು ಮಕ್ಕಳಿಗೆ ನೀಡುತ್ತಿದ್ದರೆ ಶ್ಲೇಷ್ಮ ಜ್ವರ ಮತ್ತು ಕೆಮ್ಮು ನಿವಾರಣೆ ಯಾಗುತ್ತದೆ.

ಮಕ್ಕಳಿಗೆ ಕಫ ಕೆಮ್ಮು ಇದ್ದರೆ 1 ಚಮಚ ತುಳಸಿ ರಸವನ್ನು 2 ಅಥವಾ 3 ಸಲದಂತೆ ನೀಡಿ.

ಮಕ್ಕಳು ಶೀತದ ತೊಂದರೆಗಳಿಗೆ ಬಹುಬೇಗ ಗುರಿಯಾಗುತ್ತಿದ್ದಾರೆ ನಿತ್ಯ ಒಂದು ಅಥವಾ ಎರಡು ತುಳಸಿ ಎಲೆಗಳನ್ನು ಸೇವಿಸಲು ನೀಡಿ ಇದರಿಂದ ಸೀತ ರಕ್ಷಣೆ ದೊರೆಯುತ್ತದೆ.

ವಾಂತಿ ತೊಂದರೆ : ಪ್ರಾತಃ ಕಾಲದಲ್ಲಿ ತುಳಸಿಯ ರಸವನ್ನು ಜೇನು ತುಪ್ಪ ಸೇರಿಸಿ ಸೇವಿಸಲು ನೀಡಿದರೆ ಮಕ್ಕಳಲ್ಲಿ ವಾಂತಿ ತೊಂದರೆ ನಿವಾರಣೆಯಾಗುತ್ತದೆ.

ತುಳಸಿಯ ಬೀಜವನ್ನು ಅರೆದು ಹಾಲಿನಲ್ಲಿ ಸೇರಿಸಿ ಮಕ್ಕಳಿಗೆ ನೀಡಿದರೆ ವಾಂತಿ ತೊಂದರೆ ದೂರವಾಗುತ್ತದೆ.

ಅಸ್ತಮಾ : ಮಕ್ಕಳಿಗೆ ಅಸ್ತಮಾ ರೋಗದ ತೊಂದರೆ ಇದ್ದಾಗ ತುಳಸಿ ಹಾಗೂ ಹಸಿ ಶುಂಠಿಯ ರಸ ನೀಡಿ.

ತುಳಸಿಯ ಎಲೆಗಳನ್ನು ತೊಳೆದು ಪೇಸ್ಟ್ ನಂತೆ ಮಾಡಿ ಅಥವಾ ತುಳಸಿಯ ರಸವನ್ನು ಜೇನು ತುಪ್ಪ ಬೆರೆಸಿ ಮಕ್ಕಳಿಗೆ ನೀಡಿದರೆ ಉತ್ತಮ ತೊಂದರೆ ಎಲ್ಲಿ ಕಂಡು ಬರುವುದು.

ಜ್ವರ : ಹಾಲಿನಲ್ಲಿ 5 ತುಳಸಿ ಎಲೆ ಮತ್ತು ಲವಂಗವನ್ನು ಹಾಕಿ ಬಿಸಿ ಮಾಡಿ ಮಕ್ಕಳಿಗೆ ಕೊಡುವುದರಿಂದ ಗುಣವಾಗುತ್ತದೆ ಜ್ವರ ನಿಲ್ಲುತ್ತದೆ.

ತುಳಸಿಯ ಎಲೆಗಳು ರಸದಲ್ಲಿ ಸ್ವಲ್ಪ ಸೈಂಧವ ಲವಣವನ್ನು ಬೆರೆಸಿ ಮಕ್ಕಳಿಗೆ ನೀಡುವುದರಿಂದ ಜ್ವರದಿಂದ ಬಳಲುತ್ತಿದ್ದಾರೆ ನಿಲ್ಲುತ್ತದೆ, ವಾಯು ವಿಕಾರ ಮತ್ತು ಮಲಬದ್ಧತೆಗಳು ತೊಲಗುತ್ತವೆ.

ಒಳ್ಳೆಯ ವಿಷಯಗಳನ್ನ ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ

Comments are closed.