ಮಂಗಳೂರು, ಡಿಸೆಂಬರ್.26: ನಾಲ್ಕು ಮಂದಿಯ ತಂಡವೊಂದು ಯುವಕನೋರ್ವನಿಗೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ಮಂಗಳವಾರ ಸಂಜೆ ನಗರದ ಪಿವಿಎಸ್ ವೃತ್ತದ ಬಳಿ ನಡೆದಿದ್ದು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಬಲ್ಲಾಳ್‌ಬಾಗ್ ಸೇಸಪ್ಪ ಕಂಪೌಂಡ್ ನಿವಾಸಿ ಧೀರಜ್ (26) ಎಂಬಾತನೇ ತಂಡದಿಂದ ಹಲ್ಲೆಗೊಳಗಾದ ಯುವಕ. ಹಲ್ಲೆಗೈದವರನ್ನು ಬಲ್ಲಾಳ್‌ಬಾಗ್ ನಿವಾಸಿಗಳಾದ ರಕ್ಷಿತ್ ಕೊಟ್ಟಾರಿ, ರೋಹಿತ್ ಶೆಟ್ಟಿ, ಸೂರಜ್ ಕೊಟ್ಟಾರಿ ಮತ್ತು ದಿನೇಶ್ ಎಂದು ಹೆಸರಿಸಲಾಗಿದೆ.
ಧೀರಜ್ ಪಿವಿಎಸ್ ಬಳಿ ಇರುವ ಲ್ಯಾಪ್‌ಟಾಪ್ ಶೋರೂಂನಲ್ಲಿ ಸರ್ವೀಸ್ ಮತ್ತು ಸೇಲ್ಸ್ ಕೆಲಸವನ್ನು ಮಾಡುತ್ತಿದ್ದರು. ಈ ವೇಳೆ ನಾಲ್ವರು ಆರೋಪಿಗಳು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಈ ಬಗ್ಗೆ ಬರ್ಕೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Comments are closed.