ಉಡುಪಿ: ಚರ್ಚ್ ನಾಶ ಮಾಡಿದ್ದಂತಹ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ದೇವರೇ ನನ್ನನ್ನು ತಡೆದರು’ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾಡಿದ ಭಾಷಣ ದ ವಿಡಿಯೋ ವೈರಲ್ ಆಗಿದ್ದು ಸದ್ಯ ವಿವಾದಕ್ಕೆ ಕಾರಣವಾಗಿದೆ.
ಡಿ.10ರಂದು ಬ್ರಹ್ಮಾವರ ಪೇತ್ರಿಯ ಸೇಂಟ್ ಪೀಟರ್ಸ್ ಚರ್ಚ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗಾ ವೈರಲ್ ಆಗಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.

‘ವಿರೋಧವಿದ್ದರೂ ಕೂಡ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಿರುವುದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಟಿಪ್ಪು ಸೈನ್ಯ ಪೇತ್ರಿಯ ಹಿಂದಿನ ಚರ್ಚ್ ನಾಶ ಮಾಡಿದ್ದಕ್ಕಾಗಿ ನಾನು ಶಾಸಕ ಹಾಗೂ ಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ದೇವರು ಮಾಡಿದ್ದಾರೆ ಎಂದು ಭಾಷಣದಲ್ಲಿ ಪ್ರಮೋದ್ ಹೇಳಿದ್ದರು. ಯಾವುದೇ ವರ್ಷವೂ ಕೂಡ ಟಿಪ್ಪು ಜಯಂತಿಯಲ್ಲಿ ಭಾಗವಹಿಸಲು ನನಗೆ ಅವಕಾಶವೇ ಸಿಕ್ಕಿರಲಿಲ್ಲ ಎಂದಿದ್ದಾರೆ.
ಕಾಂಗ್ರೇಸ್ ಸರ್ಕಾರ ಆಡಳಿತ ಇದ್ದಾಗ ನಡೆದ ಮೂರು ಟಿಪ್ಪು ಜಯಂತಿಯಲ್ಲೂ ಪ್ರಮೋದ್ ಮಧ್ವರಾಜ್ ಭಾಗವಹಿಸಿರಲಿಲ್ಲ. ಈ ಧೋರಣೆ ಅವರ ಪಕ್ಷದವರೂ ಸೇರಿದಂತೆ ಮುಸ್ಲೀಂ ಸಮುದಾಯದ ಮುಖಂಡರ ಮುನಿಸಿಗೂ ಕಾರಣವಾಗಿತ್ತು.
Comments are closed.