ಕರಾವಳಿ

ಉಡುಪಿ ಜಿಲ್ಲೆಯ ಕೆಲ ಗ್ರಾಮ ಪಂಚಾಯತಿಗಳಿಗೆ ಚುನಾವಣೆ: ವೇಳಾಪಟ್ಟಿ ಪ್ರಕಟ

Pinterest LinkedIn Tumblr

ಉಡುಪಿ : 2019 ರ ಜನವರಿ-ಫೆಬ್ರವರಿ ಮಾಹೆಯಲ್ಲಿ ಅವಧಿ ಮುಕ್ತಾಯವಾಗುವ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಬೈಂದೂರು, ಯಡ್ತೆರೆ ಮತ್ತು ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಕಾರಣಗಳಿಂದ ಆಕಸ್ಮಿಕ ವಾಗಿ ತೆರವಾಗಿರುವ ಉಡುಪಿ ತಾಲೂಕಿನ ಹಂದಾಡಿ, ಬಾರಕೂರು , ಯಡ್ತಾಡಿ , ಕಡೆಕಾರು, ಕಾರ್ಕಳ ತಾಲೂಕಿನ ಬೈಲೂರು , ನಿಟ್ಟೆ, ಕುಂದಾಪುರ ತಾಲೂಕಿನ ಗಂಗೊಳ್ಳಿ , ಉಳ್ಳೂರು ಮತ್ತು ಬೈಂದೂರು ತಾಲೂಕಿನ ಕೆರ್ಗಾಲು ಸದಸ್ಯ ಸ್ಥಾನಗಳನ್ನು ಚುನಾವಣೆಯ ಮೂಲಕ ಭರ್ತಿ ಮಾಡಲು ರಾಜ್ಯ ಚುನಾವಣಾ ಆಯೋಗವು, ಚುನಾವಣಾ ವೇಳಾ ಪಟ್ಟಿಯನ್ನು ಘೋಷಿಸಿದೆ.

ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನ ಡಿಸೆಂಬರ್ 17, ನಾಮಪತ್ರ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 20, ನಾಮಪತ್ರಗಳನ್ನು ಪರಿಶೀಲಿಸುವ ದಿನ ಡಿಸೆಂಬರ್ 21, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ ಡಿಸೆಂಬರ್ 24, ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನ ಜನವರಿ 2, ಮತ ಎಣಿಕೆ ದಿನ ಜನವರಿ 4.

Comments are closed.