ಕರಾವಳಿ

ತುಂಬಾ ಹಿಂಸೆ ನೀಡುವತಂಹ ಫಿಷರ್ ಕಾಯಿಲೆಗೆ ಸಿಂಪಲ್ ಮನೆ ಮದ್ದು

Pinterest LinkedIn Tumblr

ಹೌದು ನಾವು ತಿನ್ನುವ ಆಹಾರ ಪದ್ಧತಿ ಅಥವಾ ಈಗಿನ ಪರಿಸರದಿಂದ ಹಲವಾರು ರೋಗಗಳು ನಮಗೆ ಬರುತ್ತಿವೆ. ಅಂತವೆಲ್ಲವುದಕ್ಕಿಂತ ಈ ಫಿಷರ್ ಕಾಯಿಲೆ ಅನ್ನೋದು ತುಂಬಾ ಹಿಂಸೆ ಮತ್ತು ಸಮಸ್ಯೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಈ ರೋಗವನ್ನು ಸರಿಪಡಿಸಿಕೊಳ್ಳುವುದಕ್ಕೆ ಸಿಂಪಲ್ ಮನೆ ಮದ್ದು ಇಲ್ಲಿದೆ ನೋಡಿ.

ಆಲಿವ್‌ ಎಣ್ಣೆ ಮತ್ತು ಜೇನ ಮೇಣ ಸೇರಿಸಿ ಬಿಸಿ ಮಾಡಿ ತಯಾರಿಸಿದ ಮುಲಾಮ್‌ ಅನ್ನು ಪ್ರತಿ ದಿನ ಫಿಷರ್‌ ಅಂದರೆ ಗುದದ್ವಾರದಲ್ಲಿ ಬಿರುಕು ಅಥವಾ ಸೀಳು ಬಿಟ್ಟಿರುವ ಜಾಗಕ್ಕೆ ಹಚ್ಚಿದರೆ ಬೇಗ ಗುಣವಾಗುತ್ತದೆ. ಅಷ್ಟೇ ಅಲ್ಲದೆ ಪ್ರತಿ ದಿನ ಅಲೋವೆರಾ ಜ್ಯೂಸ್‌ ಮತ್ತು ಅಲೋವೆರಾ ಜೆಲ್‌ ಅನ್ನು ಫಿಶರ್‌ಗೆ ಹಚ್ಚಿದರೆ ಫಿಷರ್‌ ಕಡಿಮೆಯಾಗುತ್ತದೆ.

ರಾತ್ರಿ ಮಲಗುವ ಮುಂಚೆ ಒಂದು ಚಮಚ ಅಗಸೆ ಬೀಜವನ್ನು ಬಿಸಿ ನೀರಲ್ಲಿ ಹಾಕಿ ನೆನಸಿ ಸೇವಿಸಿದರೆ ಫಿಷರ್‌ ಸಮಸ್ಯೆ ನಿವಾರಣೆಯಾಗುತ್ತದೆ. ಬಿಸಿ ನೀರನ್ನು ಟಬ್‌ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಎಳ್ಳೆಣ್ಣೆ ಹಾಕಿ 15 ನಿಮಿಷ ಅದರಲ್ಲಿ ಕುಳಿತುಕೊಳ್ಳುವುದರಿಂದ ಫಿಷರ್‌ ಕಡಿಮೆಯಾಗುತ್ತದೆ.

ಪ್ರತಿ ದಿನ ತಿಂಡಿಗೆ ಮೊದಲು ಒಂದು ಚಮಚ ದೇಸಿ ಹಸುವಿನ ತುಪ್ಪಕ್ಕೆ ಒಂದು ಚಿಟಿಕೆ ಉಪ್ಪು ಬೆರೆಸಿ ಸೇವಿಸಿದರೆ ಮಲವಿಸರ್ಜನೆ ಸುಲಭವಾಗಿ ಆಗುತ್ತದೆ ಮತ್ತು ಫಿಷರ್‌ ಗುಣವಾಗುತ್ತದೆ ಹಾಗು ಒಂದು ಲೋಟ ಮಜ್ಜಿಗೆಗೆ ಒಂದು ಚಮಚ ಎಲಕ್ಕಿ ಎಲೆಯ ಪುಡಿ ಬೆರೆಸಿ ಸೇವಿಸಿದರೆ ಫಿಷರ್‌ನಿಂದ ಉಂಟಾಗುವ ಉರಿ ಕಡಿಮೆಯಾಗುತ್ತದೆ.

ಇಷ್ಟೇ ಅಲ್ಲದೆ ಆಹಾರದಲ್ಲಿ ಹೆಚ್ಚು ಮೂಲಂಗಿ, ಸೋರೆಕಾಯಿ, ಸೀಮೆಬದನೆಕಾಯಿ, ಮಜ್ಜಿಗೆ, ತುಪ್ಪ ,ಬಿಸಿ ನೀರು, ನಾರಿನಂಶ ಇರುವ ಆಹಾರ, ಪಪ್ಪಾಯ, ಅನಾನಸ್‌, ದ್ರಾಕ್ಷಿ, ಮೋಸಂಬಿ, ಪುಟ್ಟ ಬಾಳೆಹಣ್ಣು ಸೇವಿಸಿದರೆ , ಫಿಷರ್‌ ಬೇಗ ಗುಣವಾಗುತ್ತದೆ ಮತ್ತು ಖಾರ, ಉಪ್ಪು, ಹುಳಿ, ಮಲಬದ್ಧತೆ ಹೆಚ್ಚಿಸುವ ಆಹಾರಗಳಾದ ಮೈದಾ, ಬಿಸ್ಕೆಟ್‌, ಬ್ರೆಡ್‌, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಮೊಸರು, ಮುಂತಾದ ಗಟ್ಟಿ ಆಹಾರ ಪದಾರ್ಥಗಳನ್ನು ಫಿಷರ್‌ ಸಮಸ್ಯೆ ಇದ್ದವರು ಸೇವಿಸಬಾರದು.

Comments are closed.