ಕರಾವಳಿ

ಡಿಸೆಂಬರ್ 21ರಂದು ಮಂಗಳೂರಿನಲ್ಲಿ ಎಂಆರ್‌ಪಿ‌ಎಲ್ ವಿಸ್ತರಣೆ ವಿರೋಧಿಸಿ “ತುಳುನಾಡನ್ನು ಉಳಿಸಿ” ಜನಾಗ್ರಹ ಸಭೆ

Pinterest LinkedIn Tumblr

ಡಿಸೆಂಬರ್ 21ರಂದು ಭೋಪಾಲದ ಸಾಮಾಜಿಕ ಕಾರ್ಯಕರ್ತ ಡಾ. ಸತಿನಾಥ ಸಾರಂಗಿ ಮಂಗಳೂರಿಗೆ

ಮಂಗಳೂರು : ಸತಿನಾಥ ಸಾರಂಗಿಯವರು ಐಐಟಿ ವಾರಾಣಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಭೋಪಾಲದ ಅನಿಲ ದುರಂತ ಸಂತ್ರಸ್ತರ ಪುನರ್ವಸತಿ, ಚಿಕಿತ್ಸೆ, ಪರಿಹಾರಕ್ಕಾಗಿ ಹಾಗು ಕಾನೂನು ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಡ್ಡಿದರೆ ಮುಂದೆ ಎಲ್ಲಿಯೂ ಅಂಥಹಾ ಮಾನವ ಪ್ರೇರಿತ ದುರಂತಗಳ ತಡೆಗೆ ಕಾರ್ಯೋನ್ಮುಖರಾದವರು. ದೇಶ ವಿದೇಶಗಳಲ್ಲಿ ಅನೇಕ ಕಡೆ ಭೋಪಾಲ ದುರಂತದ ಬಗ್ಗೆ ತಮ್ಮ ಭಾಷಣ,ಬರಹ, ಹಾಗೂ ಚರ್ಚಾಕೂಟಗಳ ಮೂಲಕ ಜಾಗೃತಿ ನೀಡುತ್ತಾ ಬಂದಿದ್ದಾರೆ.

ತಾವೇ ಸ್ಥಾಪಿಸಿದ ಸಂಭಾವನಾ ಟ್ರಸ್ಟ್ ಕ್ಲಿನಿಕ್ ಮೂಲಕ ಇಂದಿಗೂ ಅನಿಲ ಸೋರಿಕೆಯುಂದ ಉಂಟಾಗಿರುವ ಸಂತ್ರಸ್ತರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಅನೇಕ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.

ಡಿ. 21 ಕ್ಕೆ ಬೆಳಿಗ್ಗೆ ಸತಿನಾಥ ಸಾರಂಗಿಯವರು ಎಮ್ ಆರ್ ಪಿ ಎಲ್ ಭೂಸ್ವಾಧೀನಕೊಳಗಾಗಲಿರುವ ಮತ್ತು ವಿಷಕಾರುವ ಕಾರ್ಖಾನೆಗಳಿರುವ ಪ್ರದೇಶಕ್ಕೆ ಭೇಟಿ ಕೊಟ್ಟು ಅಲ್ಲಿನ ಪರಿಸ್ಥಿತಿಯ ಬಗ್ಗೆ ಸ್ಥಳಿಯರೊಂದಿಗೆ ಚರ್ಚಿಸಲಿರುವರು.

ಡಿಶಂಬರ್ 21 ಕ್ಕೆ ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ (ಕೆಕೆಜೆವಿ) ಯ ಆಶ್ರಯದಲ್ಲಿ ತಾರೀಕು ದಶಂಬರ 21 ಕ್ಕೆ ಅಪರಾಹ್ಣ 3 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ನಡೆಯುವ ‘ಎಂಆರ್ ಪಿ ಎಲ್ ವಿಸ್ತರಣೆ ವಿರೋಧಿಸಿ, ತುಳುನಾಡನ್ನು ಉಳಿಸಿ’ ಜನಾಗ್ರಹ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ದಿನಾಂಕ 22 ರಂದು ಬೆಳಿಗ್ಗೆ 10 ರಿಂದ 12 ಗಂಟೆ ವರಗೆ ಸಂತ ಅಲೋ‌ಸಿಯಸ್ ಕಾಲೇಜಿನ ಸಭಾಂಗಣದಲ್ಲಿ ಹೋರಾಟಗಾರು, ಪತ್ರಕರ್ತರು, ಸಂಘಸಂಸ್ಥೆ ಹೊಣೆಗಾರರು ಹಾಗು ವಿದಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಲಿದ್ದಾರೆ.

Comments are closed.