ಕರಾವಳಿ

ಪಟ್ಲ ಯಕ್ಷಾಶ್ರಯದಿಂದ ಕಲಾವಿದನಿಗೆ ಮನೆ ಹಸ್ತಾಂತರ

Pinterest LinkedIn Tumblr

ಪಟ್ಲ ಸತೀಶ ಶೆಟ್ಟಿಯವರ ಸಮಾಜ ಮುಖಿ ಕಾರ್ಯಗಳಿಗೆ ಕಟೀಲು ಶ್ರೀ ದೇವಿಯ ಅನುಗ್ರಹವಿದೆ : ಕಮಲಾದೇವಿ ಅಸ್ರಣ್ಣ

ಮಂಗಳೂರು : ಪಟ್ಲ ಸತೀಶ್ ಶೆಟ್ಟಿ ಯಕ್ಷಗಾನ ಭಾಗವತರಾಗಿ ಅವರು ಕೈಗೊಳ್ಳುವ ಸಮಾಜ ಮುಖಿ ಕಾರ್ಯಗಳಿಗೆ ಕಟೀಲು ಕ್ಷೇತ್ರದ ಶ್ರೀ ದೇವಿಯ ಅನುಗ್ರಹವಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಯ ಅರ್ಚಕ ಕಮಲಾದೇವಿ ಅಸ್ರಣ್ಣ ತಿಳಿಸಿದರು.

ಪಟ್ಲ ಯಕ್ಷಾಶ್ರಯ ಯೋಜನೆಯಡಿ ಕುಂಜತ್ತಬೈಲ್‌ನಲ್ಲಿ ಯಕ್ಷಗಾನ ಕಲಾವಿದ ಪುರಂದರ ಶೆಟ್ಟಿ ಅವರಿಗೆ ನಿರ್ಮಿಸಿ ಕೊಟ್ಟಿರುವ ಮನೆಯನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ಪಟ್ಲ ಸತೀಶ್ ಶೆಟ್ಟಿ ಅವರು ಇಂದು ದೇವರು ಮೆಚ್ಚುವ ಕೆಲಸ ಮಾಡುತ್ತಿದ್ದಾರೆ. ಪಟ್ಲ ಯಕ್ಷಾಶ್ರಯ ಯೋಜನೆಯಡಿ ಅವರು ಕೈಗೊಳ್ಳುವ ಕೆಲಸ-ಕಾರ್ಯಗಳು ಯಶಸ್ವಿಯಾಗಲಿ, ಪಟ್ಲ ಸತೀಶ್ ಶೆಟ್ಟಿ ಬಡವರ ಪರವಾಗಿ ಮಾಡುವ ಕೆಲಸಗಳು ನಿರಂತರವಾಗಿ ಸಾಗಲಿ ಎಂದು ಅವರು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಸಮಾಜ ಸೇವೆ ಮಾಡಲು ಇಂದು ಬಹಳಷ್ಟು ಸಂಘಟನೆಗಳು ನಮ್ಮ ಮುಂದೆ ಇವೆ. ಆದರೆ ಅದೆಲ್ಲವನ್ನೂ ಮೀರಿಸಿ ಪಟ್ಲ ಫೌಂಡೇಶನ್ ಟ್ರಸ್ಟ್ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿ, ನಿಟ್ಟೆಗುತ್ತು ರವಿರಾಜ ಶೆಟ್ಟಿ , ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ, ಸುಂದರ ಶೆಟ್ಟಿ, ವಿಶ್ವನಾಥ ರೈ , ಟ್ರಸ್ಟ್‌ನ ಉಪಾಧ್ಯಕ್ಷ ಮನುರಾವ್, ಕೋಶಾಧಿಕಾರಿ ಸಿ‌ಎ ಸುದೇಶ್ ರೈ, ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ , ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ಉಪಸ್ಥಿತರಿದ್ದರು.

ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ವಂದಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರ್ವಹಿಸಿದರು.ಪಟ್ಲ ಯಕ್ಷಾಶ್ರಯದಲ್ಲಿ ನಿರ್ಮಾಣಗೊಂಡ ಮೂರನೇ ಮನೆಗೆ ಉದ್ಯಮಿ ಬಿ.ಬಿ.ರೈ ಕುಳಾಯಿ ಆರ್ಥಿಕ ನೆರವು ನೀಡಿದ್ದರು.

ವಿವಿಧ ಘಟಕಗಳ ಅಧ್ಯಕ್ಷರಾದ ಪ್ರದೀಪ್ ಆಳ್ವ ಕದ್ರಿ. ಸಂತೋಷ್ ಕುಮಾರ್ ಶೆಟ್ಟಿ ಸುರತ್ಕಲ್ , ಮುರಳೀಧರ ಶೆಟ್ಟಿ, ಸ್ಥಳೀಯರಾದ ದಿವಾಕರ ಪಕ್ಕಳ , ಪುಷ್ಪರಾಜ ಶೆಟ್ಟಿ ಕುಡುಂಬೂರು, ಸುಧಾಕರ ಶೆಟ್ಟಿ, ಸದಾಶಿವ ರೈ, ಶಂಭು ಶೆಟ್ಟಿ , ಗುತ್ತಿಗೆದಾರ ದಿನೇಶ್ ಕುಂಜತ್ತಬೈಲ್, ಜಗದೀಶ್ ಶೆಟ್ಟಿ ಕಾರ್‌ಸ್ಟ್ರೀಟ್ . ಸತೀಶ್ ಶೆಟ್ಟಿ ಎಕ್ಕಾರ್. ಲೋಕೇಶ್ ಪೊಳಲಿ, ಅಶ್ವಿತ್ ಮಾರ್ಲ ಹಾಗೂ ಸ್ಥಳೀಯ ಸಂಘಟನೆಗಳ ಪದಾಧಿಕಾರಿಗಳು ಮಹಿಳಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.