ಕರಾವಳಿ

ಬಿಳಿಅಕ್ಕಿ ನೀರಿನಲ್ಲಿದೆ ಹಲವಾರು ಪ್ರಯೋಜನಗಳು.

Pinterest LinkedIn Tumblr

ಹೌದು ನಾವು ಅನ್ನ ಮಾಡಿದಾಗ ಅದರಲ್ಲಿ ಬರುವ ಗಂಜಿ ನೀರನ್ನು ಬಿಸಾಡುತ್ತೇವೆ,ಆದರೆ ಅಂದಿನ ಕಾಲದಲ್ಲಿ ಈ ರೀತಿಯ ನೀರನ್ನು ಕುಡಿಯುತ್ತಿದ್ದರಂತೆ ಆದರೆ ಅವಾಗ ಅದರಿಂದಾಗುವ ಮಹತ್ವ ಗೊತ್ತಿರಿಲಿಲ್ಲ ಆದರೆ ಈಗ ಈ ಅಕ್ಕಿ ನೀರಿನಲ್ಲಿ ಹಲವಾರು ರೀತಿಯ ಲಾಭವಿದೆ ಎಂದು ತಿಳಿದು ಬಂದಿದೆ, ಅದೇನು ನೋಡೋಣ ಬನ್ನಿ.

ಅಕ್ಕಿ ನೀರಿನಲ್ಲಿ ಕೂದಲನ್ನು ತೊಳೆಯುವುದರಿಂದ ಕೂದಲು ಸದೃಢವಾಗುತ್ತಂತೆ ಹಾಗು ಕೂದಲಿನ ಗಂಟುಗಳು ಕೂಡ ಬಿಡಿಸಿಕೊಳ್ಳುತ್ತವೆಯಂತೆ, ತಜ್ಞರ ಪ್ರಕಾರ ಅಕ್ಕಿ ನೀರಿನಲ್ಲಿ ಐನೊಸಿತೊಲ್​ ಎಂಬ ಅಂಶವಿದೆ. ಇದು ಕೂದಲು ಡ್ಯಾಮೇಜ್​ ಆಗುವುದನ್ನು ತಡೆಯುವುದರ ಜೊತೆ ತಲೆ ಕೂದಲನ್ನು ಸದೃಢ ಮಾಡುತ್ತಂತೆ.

ಬಿಸಿಲು,ಆರ್ದ್ರತೆಯ ಕಾರಣ ಕೂದಲು ಡ್ರೈ ಆಗುತ್ತದೆ. ಕೂದಲಿಗೆ ಉತ್ತಮ ಪೋಷಣೆ ನೀಡಿ ಕೂದಲನ್ನು ಹೈಡ್ರೇಟ್​ ಮಾಡಲು ಅಕ್ಕಿ ನೀರು ಸಹಕಾರಿಯಾಗಲಿದೆ. ಅಕ್ಕಿ ನೀರು ಶ್ಯಾಂಪುಗಳ ರೀತಿ ಕೇವಲ ಕೆಮಿಕಲ್​ ಟ್ರೀಟ್​ಮೆಂಟ್​ ನೀಡದೇ ನೈಸರ್ಗಿಕವಾಗಿ ಹಾಗೂ ಆರೋಗ್ಯಕರ ರೀತಿಯಲ್ಲಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಕೂದಲು ಮತ್ತು ನೆತ್ತಿಯ ಮೇಲೆ ಅಕ್ಕಿ ನೀರನ್ನು ಹಾಕಿ 20 ನಿಮಿಷ ಹಾಗೆ ಬಿಡಿ,ತದನಂತರ ನೀವು ರೆಗ್ಯುಲರ್​ ಆಗಿ ಪಾಲಿಸುವ ಹೇರ್​ ವಾಶ್​ ವಿಧಾನವನ್ನು ಪಾಲಿಸಿ.ಇದರಿಂದ ಕೂದಲು ಆರೋಗ್ಯಪೂರ್ಣವಾಗಿರುತ್ತದೆ ಮತ್ತು ಬಿಳಿ ಕೂದಲಿದ್ದರೆ ಕಪ್ಪಾಗುತ್ತದೆ.

Comments are closed.