ಕರಾವಳಿ

ಈ ಹಣ್ಣಿನ ಜ್ಯೂಸ್‍‍ನ್ನು ಪುರುಷರು ಕುಡಿದರೆ ಉತ್ತಮವಂತೆ ಯಾಕೆ ತಿಳಿಯಿರಿ..?

Pinterest LinkedIn Tumblr

ಹೌದು ಕೆಲವೊಂದು ಆಹಾರಗಳು ಅಥವಾ ಕೆಲವೊಂದು ಜ್ಯೂಸ್ ಹಾಗು ಪಾನೀಯಗಳು ಕೆಲವೊಂದು ಎನರ್ಜಿ ಮತ್ತು ಕೆಲ ವಿಟಮಿನ್ ಗಳನ್ನೂ ನೀಡುತ್ತವೆ ಹಾಗೆಯೆ ಈ ಕಿತ್ತಳೆ ಜ್ಯೂಸ್ ಕುಡಿಯುವುದರಿಂದ ಗಂಡಸರಿಗೆ ಈ ಪವರ್ ಹೆಚ್ಚಾಗುತ್ತಂತೆ ಯಾವುದು ಅನ್ನೋದು ಇಲ್ಲಿದೆ ನೋಡಿ.

51 ವರ್ಷದ ಆಸುಪಾಸಿನ 27,842 ಗಂಡಸರನ್ನು ಸೇರಿಸಿಕೊಂಡು, ಸರ್ವೆಯೊಂದನ್ನು ಮಾಡಲಾಗಿತ್ತು. ಹಣ್ಣಿನ ಜ್ಯೂಸ್ ಸೇವಿಸುವ ಮುನ್ನವೊಂದು ಪರೀಕ್ಷೆ ಹಾಗೂ ನಂತರ ಮತ್ತೊಂದು ಪರೀಕ್ಷೆ ಮಾಡಲಾಯಿತು.

ಕಿತ್ತಳೆ ಜ್ಯೂಸ್ ಕುಡಿದವರು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿದ್ದು, ಮರೆವಿನ ರೋಗಕ್ಕೆ ಬೆಸ್ಟ್ ಮದ್ದೆಂದು ಸಂಶೋಧನೆ ದೃಢಪಡಿಸಿದೆ. ಶೇ.55 ಮಂದಿಗೆ ಜ್ಯೂಸ್ ಕುಡಿದ ತಕ್ಷಣವೇ ಬದಲಾವಣೆ ಕಂಡು ಬಂದಿದ್ದು, ಶೇ. 35 ಪುರುಷರು ಕಷ್ಟಪಟ್ಟಾದರೂ ಉತ್ತರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ಶೇ.7 ಮಂದಿಯಲ್ಲಿ ಮಾತ್ರ ಎಂಥ ಬದಲಾವಣೆಯೂ ಕಂಡಿ ಬಂದಿಲ್ಲವೆಂದು ಈ ಅಧ್ಯಯನ ಹೇಳಿದೆ. ಅದರಲ್ಲಿಯೂ ನಿರಂತರ 45 ದಿನಗಳ ಕಿತ್ತಳೆ ಜ್ಯೂಸ್ ಕುಡಿದವರಲ್ಲಿ ಅಭೂತಪೂರ್ವ ಬದಲಾವಣೆಯಾಗಿದ್ದನ್ನು ವಿಜ್ಞಾನಿಗಳು ಕಂಡು ಕೊಂಡಿದ್ದಾರೆ. ಮನುಷ್ಯನಿಗೆ 20 ವರ್ಷದವರೆಗೂ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅವಕಾಶವಿರುತ್ತದೆ. ಅದಕ್ಕೆ ತರಕಾರಿ ಹಾಗೂ ಕಿತ್ತಲೆಯಂಥ ಹಣ್ಣುಗಳನ್ನು ಸಾಧ್ಯವಾದಷ್ಟು ತಿನ್ನಬೇಕೆಂದು ತಜ್ಞರು ಯಾವಾಗ್ಲೂ ಇಂತಹ ಸಲಹೆಗಳನ್ನು ನೀಡುತ್ತಾರೆ.

Comments are closed.