ರಾಷ್ಟ್ರೀಯ

ನಿಮಗೆ ಹಿಂದುತ್ವದ ಜ್ಞಾನ ಎಲ್ಲಿಂದ ಬಂತು?: ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ

Pinterest LinkedIn Tumblr

ಜೋಧಪುರ್: ಕಾಂಗ್ರೆಸ್‌ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನಿಮಗೆ ಹಿಂದುತ್ವದ ಜ್ಞಾನ ಎಲ್ಲಿಂದ ಬಂತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪ್ರಶ್ನಿಸಿದ್ದಾರೆ.

ಇಂದು ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನನಗೆ ಹಿಂದೂ ಧರ್ಮದ ಬಗ್ಗೆ ಎಲ್ಲ ಗೊತ್ತು ಎಂದು ಸಾಧು ಸಂತರೇ ಹೇಳಿಕೊಳ್ಳುವುದಿಲ್ಲ. ಯಾಕೆಂದರೆ ಹಿಂದೂ ಧರ್ಮ ಯಾರೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗದಷ್ಟು ಅಗಾಧವಾದದ್ದು. ಹಿಂದುತ್ವದ ಬಗ್ಗೆ ಎಲ್ಲವೂ ಗೊತ್ತು ಎಂದು ನಾನಂತೂ ಎಂದೂ ಹೇಳಿಕೊಂಡಿಲ್ಲ. ನಾಮದಾರಿಗಳು( ಗಾಂಧಿ ಕುಟುಂಬ) ಈ ಕೆಲಸ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದ್ದಾರೆ.

ರಾಜಸ್ಥಾನದಲ್ಲಿ ಅಭಿವೃದ್ಧಿಗಾಗಿ ಮತವೋ ಅಥವಾ ಜಾತಿ, ಧರ್ಮ ಯಾವುದೆಂದು ಕೇಳುವ ಮಂದಿಗೆ ಮತವೋ ಎಂಬುದನ್ನು ಮತದಾರರೇ ತೀರ್ಮಾನಿಸಲಿದ್ದಾರೆ ಎಂದಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ನರೇಂದ್ರ ಮೋದಿ ಅವರಿಗೆ ಹಿಂದೂ ಧರ್ಮದ ತಳಹದಿಯೇ ತಿಳಿದಿಲ್ಲ. ಹೀಗಿರುವ ಅವರು, ಅದೆಂಥ ಹಿಂದೂ ಎಂದು ಪ್ರಶ್ನೆ ಮಾಡಿದ್ದರು.

Comments are closed.