ಕರಾವಳಿ

ವಿದ್ಯಾರ್ಥಿಗಳು ಶಿಸ್ತು ಪಾಲಿಸಿದರೆ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ : ಡಾ| ಎ.ಟಿ. ರಾಮಚಂದ್ರ ನಾಯ್ಕ

Pinterest LinkedIn Tumblr

ಮಂಗಳೂರಿನ ಮೀನುಗಾರಿಕಾ ಕಾಲೇಜು ವಿದ್ಯಾರ್ಥಿಗಳಿಂದ ಎನ್ನೆಸ್ಸೆಸ್ ಶಿಬಿರ

ಮಂಗಳೂರು  : ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯು ಇಲ್ಲಿನ ಭಾ.ಕೃ.ಸಂ.ಪ. – ಕೃಷಿ ವಿಜ್ಞಾನ ಕೇಂದ್ರ, ಮೂಡಬಿದಿರೆಯ ಕೃಷಿ ವಿಚಾರ ವಿನಿಮಯ ಕೇಂದ್ರ, ಮತ್ತು ಆನೆಗುಡ್ಡೆಯ ಅನುದಾನಿತ ಹಿರಿಯ ಪ್ರಾಥಮಿಕ ಪಾಠಶಾಲೆ, ವಾಲ್ಪಾಡಿ ಗ್ರಾಮ ಇವರ ಸಹಭಾಗಿತ್ವದಲ್ಲಿ ನವೆಂಬರ್ 24 ರಿಂದ 30 ರವರೆಗೆ 7 ದಿನಗಳವರೆಗೆ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಗ್ರಾಮೀಣ ವಾಸ್ಥವ್ಯ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮವನ್ನು ಆನೆಗುಡ್ಡೆಯ ಅನುದಾನಿತ ಹಿರಿಯ ಪ್ರಾಥಮಿಕ ಪಾಠಶಾಲೆ, ವಾಲ್ಪಾಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶಿಬಿರವನ್ನು ವಾಲ್ಪಾಡಿ ಗ್ರಾಮದಲ್ಲಿನ ಆನೆಗುಡ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಪಾಠಶಾಲೆಯ ಸಂಚಾಲಕ ವಂದನೀಯ ಜೆರಾಲ್ಡ್ ಫ್ರಾಂನ್ಸಿಸ್ ಪಿಂಟೊ ರವರು ಉದ್ಘಾಟಿಸಿರುತ್ತಾರೆ.

ಅತಿಥಿಗಳಾಗಿ ಕರ್ನಾಟಕ ಕೃಷಿ ಬೆಲೆ ಆಯೋಗದ ಸದಸ್ಯರಾದ ಸಂಪತ್ ಸಾಂಮ್ರಾಜ್ಯ ರವರು ಆಗಮಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ವಾಲ್ಪಾಡಿ ಗ್ರಾಮದ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ವಸಂತಿ, ಮೂಡಬಿದರೆಯ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಸುಭಾಸ್‍ಚಂದ್ರ ಚೌಟ, ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ವಾಲ್ವಾಡಿ ಗ್ರಾಮ ಪಂಚಾಯಿತಿಯ ಸದಸ್ಯ ಪ್ರದೀಪ್ ಕುಮಾರ ಆನೆಗುಡ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯ ನೋಬರ್ಟ ಪೆರೇರ ಆನೆಗುಡ್ದೆ ಚರ್ಚ್ ಪಾಲನಾ ಸಮೀತಿಯ ಕಾರ್ಯದರ್ಶಿ ಪ್ರವೀಣ್ ಡಿಕುನ್ನ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ| ಎ.ಟಿ. ರಾಮಚಂದ್ರ ನಾಯ್ಕ ರವರು ಭಾಗವಹಿಸಿದ್ದರು.

ರೈತರೊಂದಿಗೆ ಅನುಭವವನ್ನು ಹಂಚಿಕೊಂಡು ಗ್ರಾಮೀಣ ಸೇವೆಯಲ್ಲಿ ಒಂದು ಅಳಿಲು ಸೇವೆ ಮಾಡಿದರೂ ನಮ್ಮಲ್ಲಿ ಒಂದು ಅದ್ಭುತ ಶಕ್ತಿ ಬರುತ್ತದೆ ಅಲ್ಲದೇ ನಮ್ಮ ದೇಶದಲ್ಲಿ ಕಾಡುವ ಸಮಸ್ಯೆ ಎಂದರೆ ನಿರುತ್ಸಾಹ ಮತ್ತು ಸೋಮಾರಿತನ ಅದನ್ನು ಮೊದಲು ಕಿತ್ತು ಹಾಕಬೇಕು, ಮಕ್ಕಳಲ್ಲಿ ಕ್ರಿಯಾಶೀಲತೆ ಬರಬೇಕು ಹಾಗೂ ಜೀವನದಲ್ಲಿ ಮುಂದೆ ಬರಲು ಸಾಧ್ಯವೆಂಬುದನ್ನು ತಿಳಿಸಲು ಈ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ವಿದ್ಯಾರ್ಥಿ ಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಶಿಬಿರವು ಸಹಕಾರಿಯಗುತ್ತದೆಂದು ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ| ಎ.ಟಿ. ರಾಮಚಂದ್ರ ನಾಯ್ಕರವರು ಹೇಳಿದ್ದಾರೆ.

ಶಿಬಿರಾರ್ಥಿಗಳು ಈ ಶಿಬಿರದಲ್ಲಿ ರಾಷ್ಟ್ರಿಯ ಸೇವಾ ಯೋಜನೆಯ ಬಗ್ಗೆ ಹೆಚ್ಚಿನ ಅನುಭವಗಳನ್ನು ಪಡೆದು ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಉತ್ತಮವಾದ ಜೀವನವನ್ನು ನಡೆಸಬೇಕು ಅಲ್ಲದೇ ರಾಷ್ಟ್ರಿಯ ಸೇವಾ ಯೋಜನೆಯಲ್ಲಿನ ವಿದ್ಯಾರ್ಥಿಗಳು ಅತ್ಯಂತ ಶಿಸ್ಥಿನ ಜೀವನ ಶೈಲಿಯನ್ನು ಹೊಂದಿರುತ್ತಾರೆ ಆದುದರಿಂದ ಮುಂದಿನ ಜೀವನದಲ್ಲೂ ಸಹ ಇದೇ ಶಿಸ್ಥನ್ನು ಪಾಲಿಸಿದರೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮವಾದ ಭವಿಷ್ಯ ರೂಪಿಸಲು ಸಾಧ್ಯ ಮತ್ತು ತಮ್ಮ ಮುಂದಿನ ಜೀವನ ಉತ್ತಮವಾಗಿರುತ್ತದೆಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಹಳ್ಳಿಗಳನ್ನು ಸ್ವಚ್ಚವಾಗಿಡುವುದು ಹಾಗೂ ಗ್ರಾಮೀಣ ಪ್ರಪಂಚದ ಅನುಭವ ಹಾಗೂ ಸೇವಾ ಮನೋಭಾವನೆಯನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವುದು ಹಾಗೂ ನೀವು ನಿಮ್ಮಿಂದಾಗುವ ಸಹಾಯವನ್ನು ನೀವು ಸಮಾಜಕ್ಕೆ ಮಾಡುವುದು ಈ ಅವಕಾಶ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಿಗೆ ದೊರಕಲಿದೆ.

Comments are closed.